ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಆವರಣದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವೀರ ಯೋಧರನ್ನು ಸನ್ಮಾನಿಸಲಾಯಿತು.ಬದುಕು ಬೆಳಕು ಸೇವಾ ಸಮಿತಿ, ಅಮೃತ ಅಲಯನ್ಸ್ ಸಂಸ್ಥೆ, ಧನ್ವಂತರಿ ಅಲಯನ್ಸ್ ಕ್ಲಬ್, ಭಾರತೀನಗರ ಅಲಯನ್ಸ್ ಕ್ಲಬ್, ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದಿಂದ ನಡೆದ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಪ್ರಬಂಧ ಸ್ಪರ್ಧೆ, ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಆಪರೇಷನ್ ಸಿಂದೂರ ಮತ್ತು ವಿವಿಧ ಭಯೋತ್ಪಾದನೆ ಆಪರೇಷನ್‌ನಲ್ಲಿ ಭಾಗವಹಿಸಿದ್ದ ವೀರ ಯೋಧರನ್ನು ಅಭಿನಂದಿಸಲಾಯಿತು.
ಬಳಿಕ ಬದಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಯೋಧರ ಬಗ್ಗೆ ಅನುಮಾನ ಅಥವಾ ಅಪಮಾನ ಮಾಡುವುದನ್ನು ಬಿಡಬೇಕು. ಇದು ತಾಯಿ- ತಂದೆಗೆ ಮಾಡಿದ ಅವಮಾನದಷ್ಟೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದೆ ಎಂಬುದನ್ನು ತಿಳಿಯಬೇಕು. ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ. ಸಮಾಜದಲ್ಲಿ ಸಾಧನೆ ಮಾಡಿದವರು ಹೀರೋಗಳಾಗಿ ಕಾಣುತ್ತಾರೆ. ಆದರೆ, ಅವರು ಪಟ್ಟ ಶ್ರಮವನ್ನು ತಿಳಿದುಕೊಳ್ಳಬೇಕು. ಸಿನಿಮಾ ಹೀರೋಗಳು ನಮ್ಮ ಹೀರೋ ಎನ್ನುವ ಬದಲು ಯೋಧರನ್ನು ಜೀವನದ ಹೀರೋ ಎಂದು ಹೆಮ್ಮೆ ಪಡಬೇಕು. ಅದೇ ರೀತಿ ರೈತರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೀರಯೋಧ ಎಂ.ಕೆ.ಕಾರ್ತಿಕ್ ಅವರು ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ್ದ ಕೆಲವು ಘಟನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಯೋಧ ಎಂ.ಕೆ.ಕಾರ್ತಿಕ್, ವೈ.ಟಿ.ರಾಘವೇಂದ್ರ, ಹಿರಿಯ ಮಾಜಿ ಸೈನಿಕರಾದ ಪಿ.ಎನ್.ರಮೇಶ್, ಹರಿಶಂಕರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಗುರುರಾಜ್‌ಪ್ರಭು, ಪ್ರೊ.ಎಚ್.ಕೃಷ್ಣೇಗೌಡ, ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಪ್ರಾಧ್ಯಾಪಕರಾದ ಶಾಂತರಾಜು, ಕವಿತಾ, ಭಾರತೀನಗರ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಭಾಗವಹಿಸಿದ್ದರು.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯಮಳವಳ್ಳಿ: ಉಪವಿಭಾಗ ವ್ಯಾಪ್ತಿಯ ಮಳವಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಆ.22ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೇಂದ್ರ ವ್ಯಾಪ್ತಿಯ ಮಳವಳ್ಳಿ ಪಟ್ಟಣ, ನಿಡಘಟ್ಟ, ಕಂದೇಗಾಲ, ಚೋಳನಹಳ್ಳಿ, ಗಾಜನೂರು, ಗೌಡಗೆರೆ, ಸುಣ್ಣದದೊಡ್ಡಿ, ಕ್ಯಾತೇಗೌಡನದೊಡ್ಡಿ, ಅಂಕನಹಳ್ಳಿ, ಅಂಚೆದೊಡ್ಡಿ, ಅಮೃತೇಶ್ವರನಹಳ್ಳಿ, ಮೊಳ್ಳೆದೊಡ್ಡಿ, ಅಣ್ಣಹಳ್ಳಿ, ಕಲ್ಲುವೀರನಹಳ್ಳಿ, ಕೆಂಬೂತಗೆರೆ, ತಮ್ಮಡಹಳ್ಳಿ, ಬುಗತಗಹಳ್ಳಿ, ಗುಳಘಟ್ಟ, ಎಂ.ಬಸವನಪುರ, ಟಿ.ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು, ತಳಗವಾದಿ, ದೇವಿಪುರ, ಜೆ.ಸಿ.ಪುರ, ಹೊಂಬೇಗೌಡನದೊಡ್ಡಿ, ಕಾಳಕೆಂಪನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.