ಗಣಪತಿ ಪೆಂಡಾಲಿನಲ್ಲಿ ನಿವೃತ್ತ ಸೈನಿಕರಿಂದ ಕಾರ್ಗಿಲ್‌ ವಿಜಯ್‌ ದಿವಸ್‌

| Published : Jul 28 2025, 12:30 AM IST

ಗಣಪತಿ ಪೆಂಡಾಲಿನಲ್ಲಿ ನಿವೃತ್ತ ಸೈನಿಕರಿಂದ ಕಾರ್ಗಿಲ್‌ ವಿಜಯ್‌ ದಿವಸ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ನಡೆದ ಯುದ್ಧದಲ್ಲಿ ದೇಶಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿತು. ಈ ಯುದ್ಧದಲ್ಲಿ ನಮ್ಮ ದೇಶದ 527 ಸೈನಿಕರು ಹುತಾತ್ಮರಾದರು. ಅವರನ್ನೆಲ್ಲಾ ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಲು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರ್‌ಎಸ್‌ಎಸ್ ಪ್ರಚಾರ ತಂಡದ ಸದಸ್ಯ ಹೂವಿನಹಳ್ಳಿ ತಮ್ಮಯ್ಯ ತಿಳಿಸಿದರು. ನಮ್ಮ ವೀರ ಯೋಧರು ಹುತಾತ್ಮರಾಗುವ ಜತೆಗೆ ಭಾರತೀಯರ ರಕ್ಷಣೆ ಮಾಡಿ, ತಲೆಎತ್ತಿ ನಿಲ್ಲುವಂತಹ ಅವಕಾಶ ಕಲ್ಪಿಸಿದ ನಮ್ಮ ಸೈನಿಕರ ಸೇವೆ ಸದಾ ಸ್ಮರಣೀಯ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ನಡೆದ ಯುದ್ಧದಲ್ಲಿ ದೇಶಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿತು. ಈ ಯುದ್ಧದಲ್ಲಿ ನಮ್ಮ ದೇಶದ 527 ಸೈನಿಕರು ಹುತಾತ್ಮರಾದರು. ಅವರನ್ನೆಲ್ಲಾ ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಲು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರ್‌ಎಸ್‌ಎಸ್ ಪ್ರಚಾರ ತಂಡದ ಸದಸ್ಯ ಹೂವಿನಹಳ್ಳಿ ತಮ್ಮಯ್ಯ ತಿಳಿಸಿದರು. ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಿವೃತ್ತ ಸೈನಿಕರು ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ೨೬ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ನಮ್ಮ ದೇಶಕ್ಕೆ ಅಕ್ರಮವಾಗಿ ಯಾರೂ ಪ್ರವೇಶಿಸದಂತೆ ಪ್ರಾಣದ ಹಂಗನ್ನು ತೊರೆದು ಚಳಿ, ಮಳೆ, ಗಾಳಿ ಎನ್ನದೇ ತಮ್ಮ ಕುಟುಂಬದಿಂದ ದೂರಿವಿದ್ದು ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ನಮ್ಮ ಯೋಧರಿಂದ ದೇಶಕ್ಕೆ ರಕ್ಷಣೆ ಸಿಕ್ಕಿರುವುದರಿಂದ ದೇಶದ ಜನರೆಲ್ಲಾ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ. ಭಯೋತ್ಪಾದನೆಗೆ ಪ್ರೋತ್ಸಾಹ ಜತೆಗೆ ಪದೇ ಪದೇ ಕ್ಯಾತೆ ತೆಗೆದು ಕಾರ್ಗಿಲ್ ಯುದ್ಧ ಪ್ರಾರಂಭಿಸಿದ ಪಾಕಿಸ್ತಾನಕ್ಕೆ ನಮ್ಮ ವೀರ ಯೋಧರು ಹುತಾತ್ಮರಾಗುವ ಜತೆಗೆ ಭಾರತೀಯರ ರಕ್ಷಣೆ ಮಾಡಿ, ತಲೆಎತ್ತಿ ನಿಲ್ಲುವಂತಹ ಅವಕಾಶ ಕಲ್ಪಿಸಿದ ನಮ್ಮ ಸೈನಿಕರ ಸೇವೆ ಸದಾ ಸ್ಮರಣೀಯ ಮತ್ತು ಕಾರ್ಗಿಲ್ ಯುದ್ಧ ಸಾಮಾನ್ಯ ಯುದ್ಧ ಆಗಿರಲಿಲ್ಲ ಮೈನೆಸ್ ೪೬ ಡಿಗ್ರಿಯ ಮೈಚಳಿಯಲ್ಲಿ ಸಮುದ್ರ ಮಟ್ಟಕ್ಕಿಂತ ೧೬ ಸಾವಿರ ಅಡಿ ಎತ್ತರದಲ್ಲಿ ಯುದ್ಧ ಮಾಡಿ ಗೆದ್ದ ನಮ್ಮ ಯೋಧರ ಧೈರ್ಯ ಸಾಹಸ ಅವಿಸ್ಮರಣೀಯ ಎಂದರು. ನಿವೃತ್ತ ಸೈನಿಕರ ಸಂಘದ ಸದಸ್ಯರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿ. ಯೋಧ ಗಣೇಶ್ ಕುಮಾರ್, ರಾಜ್ಯ ಮಟ್ಟದ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತರಾದ ರಾಜೇಗೌಡ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಕುಮುದಾ, ಗೃಹ ರಕ್ಷಕ ದಳದ ಸುರೇಶ್, ದೊಡ್ಡಕಾಡನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶುಶ್ರೂಷಕಿ ಶಿವರತ್ನ, ಅಗ್ನಿಶಾಮಕ ಮೋಹನ್ ಕುಮಾರ್, ಪೌರ ಕಾರ್ಮಿಕರಾದ ನರಸಮ್ಮ ಅವರನ್ನು ಸನ್ಮಾನಿಸಿದರು. ನಿವೃತ್ತ ಯೋಧರ ಸಂಘದ ಅಧ್ಯಕ್ಷ ಈಶ್ವರ್, ಸದಸ್ಯರಾದ ವಸಂತ್ ಕುಮಾರ್ ಎಚ್.ಡಿ., ರವಿಕುಮಾರ್, ಮಂಜುನಾಥ್, ಮಹದೇವಯ್ಯ, ಹರೀಶ್, ಚನ್ನಕೇಶವ ಬಂಗಾರಿ, ಬಸಪ್ಪ, ಹಾಗೂ ಕೆ.ಎನ್.ರವೀಶ್, ನಿ. ಪ್ರಾಂಶುಪಾಲ ಪ್ರಭುಶಂಕರ್, ಮುಖಂಡರಾದ ಜೈಪ್ರಕಾಶ್, ಮುರಳೀಧರ ಗುಪ್ತ, ಸುದರ್ಶನ್‌ ಬಾಬು, ಬಾಲಾಜಿ ಭಾಗವಹಿಸಿದ್ದರು.