ಸಾರಾಂಶ
ಶಾಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಪಂಚತ್ಸರಣ ಸ್ಕೌಟ್ ಟ್ರೂಪ್, ಮಂತ್ರಮಹರ್ಷಿ ಸ್ಕೌಟ್ ಟ್ರೂಪ್ ಹಾಗೂ ಕನ್ನಡ ಮಾದ್ಯಮದ ಅಕ್ಕಮಹಾದೇವಿ ಗೈಡ್ ಕಂಪನಿ, ಆಂಗ್ಲ ಮಾದ್ಯಮ ಗೈಡ್ ಕಂಪನಿ ವತಿಯಿಂದ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ದೇಶಕ್ಕಾಗಿ ಹೋರಾಡಿ ಅಮರರಾಗಿರುವ ಸೈನಿಕರನ್ನು ಸ್ಮರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್, ಗೈಡ್ ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.