ಶಿಕ್ಷಣ ಕ್ಷೇತ್ರಕ್ಕೆ ಕರಿಯಪ್ಪ ಕೊಡುಗೆ ಅಪಾರ

| Published : Nov 30 2024, 12:46 AM IST

ಸಾರಾಂಶ

ಕನಕಪುರ: ಗಾಂಧಿವಾದಿ ದಿವಂಗತ ಎಸ್.ಕರಿಯಪ್ಪನವರು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಆರ್‌ಇಎಸ್ ಸಂಸ್ಥೆಯನ್ನು ಹುಟ್ಟು ಹಾಕಿದರು ಎಂದು ಶಾಸಕ ಇಕ್ಬಾಲ್‌ ಹುಸೇನ್ ತಿಳಿಸಿದರು.

ಕನಕಪುರ: ಗಾಂಧಿವಾದಿ ದಿವಂಗತ ಎಸ್.ಕರಿಯಪ್ಪನವರು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಆರ್‌ಇಎಸ್ ಸಂಸ್ಥೆಯನ್ನು ಹುಟ್ಟು ಹಾಕಿದರು ಎಂದು ಶಾಸಕ ಇಕ್ಬಾಲ್‌ ಹುಸೇನ್ ತಿಳಿಸಿದರು.

ನಗರದ ಆರ್‌ಇಎಸ್ ಸಂಸ್ಥೆಯ ಎಸ್.ಕರಿಯಪ್ಪ ಸ್ಮಾರಕ ಭವನದಲ್ಲಿ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಆರೋಗ್ಯ ವರ್ಧನೆ ಕಾರ್ಯಕ್ರಮ ಹಾಗೂ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಿಯಪ್ಪನವರು ಹೆಂಚಿನ ಮನೆಯಿಂದ ಪ್ರಾರಂಭಿಸಿದ ಈ ವಿದ್ಯಾಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಇಂದಿನ ಸ್ಪರ್ಧಾ ಜಗತ್ತಿಗೆ ಅನುಗುಣವಾಗಿ ಹೊಸ ಶೈಕ್ಷಣಿಕ ವಿಭಾಗಗಳು ಪ್ರಾರಂಭಗೊಂಡಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿ ಸಂಸ್ಥೆಗೆ ಹಾಗೂ ತಾಲೂಕಿಗೆ ಗೌರವ ತಂದು ಕೊಟ್ಟಿರುವುದು ಪ್ರಶಂಸನೀಯ ಎಂದರು.

ಯೂನಿಯನ್ ಬ್ಯಾಂಕ್ ಮೈಸೂರು ವಲಯ ಪ್ರಾದೇಶಿಕ ಮುಖ್ಯಸ್ಥ ಸುನಿಲ್.ವಿ.ಪಾಟೀಲ್ ಮಾತನಾಡಿ, ಬ್ಯಾಂಕು ವಹಿವಾಟುಗಳೊಂದಿಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ಆ ನಿಟ್ಟಿನಲ್ಲಿ ಶಾಲಾ-ಕಾಲೇಜು ಹೆಣ್ಣು ಮಕ್ಕಳ ಆರೋಗ್ಯಕ್ಕೂ ಒತ್ತು ನೀಡಲಾಗಿದೆ. ಇಂದು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರೋಗ್ಯದ ಕಿಟ್‌ ಅನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಯೂನಿಯನ್ ಬ್ಯಾಂಕ್ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಪ್ರಭು, ಹಿರಿಯ ಅಧಿಕಾರಿಗಳಾದ ಸುನಿಲ್, ಶಿನಿಬಾ, ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪಪ್ರಾಂಶುಪಾಲ ದೇವರಾಜ್, ತಮಣ್ಣಗೌಡ, ಮಹಿಳಾ ಸಮಿತಿ ಸಂಚಾಲಕಿ ವಾಣಿ, ಉಪನ್ಯಾಸಕರು ಉಪಸ್ಥಿತರಿದ್ದರು.

ಕೆಕೆಪಿ ಸುದ್ದಿ 03:

ಕನಕಪುರ ರೂರಲ್ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಆರೋಗ್ಯ ವರ್ಧನೆ ಕಾರ್ಯಕ್ರಮ ನಡೆಯಿತು.