ಸಾರಾಂಶ
ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರತಿಭಾನ್ವಿತರಿಗೆ ಪ್ರತಿವರ್ಷ ನೀಡಲಾಗುವ ಎಸ್.ಕೆ ಕರೀಂಖಾನ್ ಪ್ರಶಸ್ತಿ ೧೦ ಸಾವಿರ ನಗದು ಒಳಗೊಂಡಿರಲಿದೆ. ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಅಮೃತ ಕಲಾ ಪ್ರಶಸ್ತಿ ಐದು ಸಾವಿರ ನಗದು ಒಳಗೊಂಡಿರಲಿದೆ. ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶನದಂತೆ ಈ ಬಾರಿ ಎಸ್.ಕೆ ಕರೀಂಖಾನ್ ಪ್ರಶಸ್ತಿ ಜನಪರ ನಿಲವಿನೊಂದಿಗೆ ರಂಗಕಾಯಕ ನಡೆಸುತ್ತಿರುವ ಹರಪನಹಳ್ಳಿ ತಾಲೂಕಿನ ಬಿ.ಪರಶುರಾಮ್ ಅವರಿಗೆ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಅವರಿಂದ ಎಸ್.ಕೆ ಕರೀಂಖಾನ್ ಹಾಗೂ ರಾಜ್ಯಮಟ್ಟದ ಅಮೃತ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. ೮ ರಂದು ತಾಲೂಕಿನ ರಕ್ಷಿದಿ ಗ್ರಾಮದ ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ರಕ್ಷಿಧಿ ಪ್ರಸಾದ್ ಹೇಳಿದರು.ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರತಿಭಾನ್ವಿತರಿಗೆ ಪ್ರತಿವರ್ಷ ನೀಡಲಾಗುವ ಎಸ್.ಕೆ ಕರೀಂಖಾನ್ ಪ್ರಶಸ್ತಿ ೧೦ ಸಾವಿರ ನಗದು ಒಳಗೊಂಡಿರಲಿದೆ. ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಅಮೃತ ಕಲಾ ಪ್ರಶಸ್ತಿ ಐದು ಸಾವಿರ ನಗದು ಒಳಗೊಂಡಿರಲಿದೆ. ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶನದಂತೆ ಈ ಬಾರಿ ಎಸ್.ಕೆ ಕರೀಂಖಾನ್ ಪ್ರಶಸ್ತಿ ಜನಪರ ನಿಲವಿನೊಂದಿಗೆ ರಂಗಕಾಯಕ ನಡೆಸುತ್ತಿರುವ ಹರಪನಹಳ್ಳಿ ತಾಲೂಕಿನ ಬಿ.ಪರಶುರಾಮ್ ಅವರಿಗೆ ನೀಡಲಾಗುತ್ತಿದ್ದರೆ, ತಿಪಟೂರಿನ ಸಂಘಮಿತ್ರೆ ನಾಗರಘಟ್ಟ ಹಾಗೂ ಹೊಸಪೇಟೆಯ ಯುವ ಕಥೆಗಾರ ವಿಠಾಲ್ ಮ್ಯಾನರ್ ಅವರಿಗೆ ಅಮೃತ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಪತ್ರಕರ್ತ ರಘುನಾಥ್, ರಂಗಾಯಣ ಕರಾವಳಿ ನಿರ್ದೇಶಕರಾದ ವೆಂಕಟರಮಣ ಐತಾಳ್, ರಂಗಕರ್ಮಿ ಎಚ್.ಆರ್. ಸ್ವಾಮಿ ಸೇರಿ ಹಲವರು ಭಾಗವಹಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ರಾಜಶೇಖರ್, ರಾಧೆ ರಕ್ಷಿಧಿ ಉಪಸ್ಥಿತರಿದ್ದರು.