ಅದ್ಧೂರಿಯಾಗಿ ಕಾರ್ಕಹಳ್ಳಿ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : Mar 13 2025, 12:50 AM IST

ಅದ್ಧೂರಿಯಾಗಿ ಕಾರ್ಕಹಳ್ಳಿ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಬಸವೇಶ್ವರ ಸ್ವಾಮಿ ಬಂಡಿ ಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ ಹಾಗೂ ಚಿಕ್ಕರಸಿಕೆರೆ ಶ್ರೀ ಕಾಲಬೈರವೇಶ್ವರ ಸ್ವಾಮಿ, ತೊರೆ ಬೊಮ್ಮನಹಳ್ಳಿ ಶ್ರೀಪಟ್ಟಲದಮ್ಮ ಮತ್ತು ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿಯ ದೇವರ ಉತ್ಸವ ವೈಭವದಿಂದ ಜರುಗಿದವು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಕಾರ್ಕಹಳ್ಳಿಯಲ್ಲಿ ಪುರಾಣ ಪ್ರಸಿದ್ಧ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.

ಶ್ರೀಬಸವೇಶ್ವರ ಸ್ವಾಮಿ ಬಂಡಿ ಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ ಹಾಗೂ ಚಿಕ್ಕರಸಿಕೆರೆ ಶ್ರೀ ಕಾಲಬೈರವೇಶ್ವರ ಸ್ವಾಮಿ, ತೊರೆ ಬೊಮ್ಮನಹಳ್ಳಿ ಶ್ರೀಪಟ್ಟಲದಮ್ಮ ಮತ್ತು ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿಯ ದೇವರ ಉತ್ಸವ ವೈಭವದಿಂದ ಜರುಗಿದವು.

ಶ್ರೀಕ್ಷೇತ್ರದ ಬವಾಡ ಬಸವಪ್ಪನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಈ ವೇಳೆ ಚಿಕ್ಕರಸಿನಕೆರೆ ಶ್ರೀಕಾಲಬೈರವೇಶ್ವರ ಸ್ವಾಮಿ ಬಸವಪ್ಪ ಸಹ ಜಾತ್ರಾ ಮಹೋತ್ಸವ ಮುಂದಾಳತ್ವ ವಹಿಸಲಾಗಿತ್ತು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕುಟುಂಬ ಸಮೇತ ಆಗಮಿಸಿ ತಮ್ಮ ಕುಲ ದೈವ ಶ್ರೀ ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರಿಂದ ಮಧು ಜಿ.ಮಾದೇಗೌಡ ಮತ್ತು ಪುತ್ರ ಬಿಇಟಿ ಟ್ರಸ್ಟ್ ಸಿಇಒ ಆಶಯ್‌ಮಧು ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಬಿಂಧು ಮಧು ಮಾದೇಗೌಡ, ಬೃಂದಾ ಆಶಯ್ ಸೇರಿದಂತೆ ಹಲವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಕ್ಷೇತ್ರದ ಬಸವಪ್ಪನ ಆರ್ಶೀವಾದ ಪಡೆದರು.

ಶ್ರೀಕ್ಷೇತ್ರದಲ್ಲಿ ಸಾವಿರಾರು ಭಕ್ತರು ಆಗಮಿಸಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.