ಸಾರಾಂಶ
ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯ 9ನೇ ವಾರ್ಷಿಕೋತ್ಸವ, ರೆಮಿಡಿಯಲ್ ಥೆರಫಿ ಕೊಠಡಿಯ ಉದ್ಘಾಟನೆ ಹಾಗೂ ಶಾಲಾ ವಾಹನ ಹಸ್ತಾಂತರ, ಸೆನ್ಸಾರ್ ಪಾತ್ ಉದ್ಘಾಟನೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯ 9ನೇ ವಾರ್ಷಿಕೋತ್ಸವ, ರೆಮಿಡಿಯಲ್ ಥೆರಫಿ ಕೊಠಡಿಯ ಉದ್ಘಾಟನೆ ಹಾಗೂ ಶಾಲಾ ವಾಹನ ಹಸ್ತಾಂತರ, ಸೆನ್ಸಾರ್ ಪಾತ್ ಉದ್ಘಾಟನೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಿ.ಎಸ್.ಆರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ರೆಮೆಡಿಯಲ್ ಥೆರಫಿ ಕೊಠಡಿಯನ್ನು ಉದ್ಘಾಟಿಸಿದ ಸಂಸ್ಥೆಯ ನಿಕಟಪೂರ್ವ ಆಡಳಿತ ನಿರ್ದೇಶಕ ವಿಜಯೀಭವಸ್ವಾಮಿ ಅವರು ಶಾಲಾ ವಾಹನದ ಕೀಯನ್ನು ಹಸ್ತಾಂತರಿಸಿದರು.ಕೋಣಿ ವಿ.ಎಂ.ಎಸ್ ರಮೇಶ್ ಹೆಬ್ಬಾರ್ ಟ್ರಸ್ಟ್ ಪ್ರಾಯೋಜಕತ್ವದ ಕೊಠಡಿಯನ್ನು ಟ್ರಸ್ಟ್ ನ ಆಡಳಿತ ವಿಶ್ವಸ್ಥ ವಿಜಯ್ ಕುಮಾರ್ ಇಡ್ಯಾ ಇವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜೇತ ವಿಶೇಷ ಶಾಲಾ ಗೌರವಾಧ್ಯಕ್ಷರಾಗಿರುವ ಶ್ರೀ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರು ವಹಿಸಿದ್ದು, ದಾನಿಗಳನ್ನು ಅಭಿನಂದಿಸಿದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ವಿಶೇಷ ಮಕ್ಕಳ ಸೆನ್ಸರಿ ಪಾತ್ ನ್ನು ಉದ್ಘಾಟಿಸಿ, ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿ ಪ್ರಶಂಸಿಸಿ ದೊಡ್ಡ ಮೊತ್ತದ ದೇಣಿಗೆ ನೀಡಿ ಪ್ರೋತ್ಸಾಹಿಸಿದರು.ಮುಂಬೈ ಉದ್ಯಮಿಗಳು ಗಿರೀಶ್ ಶೆಟ್ಟಿ ತೆಲ್ಲಾರ್ ಅವರ ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ನೆಲ ಒರೆಸುವ ಮಾಪ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಮುಖ್ಯ ಅತಿಥಿ ನಿವೃತ್ತ ಸಿಎ ಕಮಲಾಕ್ಷ ಕಾಮತ್ ಅವರು ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ದೇಣಿಗೆ ನೀಡಿ ಪ್ರೋತ್ಸಾಹಿಸಿದರು.
ಉದ್ಯಮಿ ಮಂಜುನಾಥ್, ಹಿತೈಷಿಗಳು ಹರೀಶ್ ಶೆಟ್ಟಿ ಪಡುಕುಡೂರು, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಳಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ತೆಲಿಕೆದ ತೆನಾಲಿ ತಂಡದಿಂದ ತೆಲಿಕೆದ ಬರ್ಸ - ಕಾಮಿಡಿ ಶೋ, ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರಸಂಗವು ನೆರವೇರಿತು.