ಸಾರಾಂಶ
ಶಾಸಕ ವಿ. ಸುನೀಲ್ ಕುಮಾರ್ ಕಾರ್ಕಳ, ಕುಕ್ಕುಂದೂರು, ದುರ್ಗಾ, ಇರ್ವತ್ತೂರು, ಕಾಂತಾವರ, ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಇತ್ತೀಚೆಗೆ ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿತರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ . ವಿ. ಸುನೀಲ್ ಕುಮಾರ್ ಕಾರ್ಕಳ, ಕುಕ್ಕುಂದೂರು, ದುರ್ಗಾ, ಇರ್ವತ್ತೂರು, ಕಾಂತಾವರ, ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಿದರು.ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 26 ಫಲಾನುಭವಿಗಳಿಗೆ 94ಸಿ / 94ಸಿಸಿಯಡಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಕಾರ್ಮಿಕ ಇಲಾಖೆಯಿಂದ 30 ಫಲಾನುಭವಿಗಳಿಗೆ ವೆಲ್ಡರ್ ಕಿಟ್, ಟೆಲ್ಸ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಗಳನ್ನು ವಿತರಿಸಿದರು. ಕುಕ್ಕುಂದೂರು ಹಾಗೂ ಕಾಂತಾವರ ಗ್ರಾಮ ಪಂಚಾಯಿತಿಯ ಮೂವರು ಎಸ್, ಎಸ್‌ಟಿ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಸರ್ಕಾರದ ವಿವಿಧ ಯೋಜನೆಯಡಿ ಸಿಗುವ ಸೌಲಭ್ಯವನ್ನು ಪಡೆದು ತಮ್ಮ ಕೆಲಸದಲ್ಲಿ ಈಗ ನೀಡುವ ಉಪಕರಣಗಳನ್ನು ಉಪಯೋಗಿಸಿಕೊಳ್ಳಬೇಕು. ಹಾಗೂ 94ಸಿ ಅಡಿ ಹಕ್ಕುಪತ್ರ ಪಡೆದವರು ಈ ಕ್ಷಣದಿಂದ ಜಾಗದ ಮಾಲೀಕರೆ ಆಗಿದ್ದು ನಿರ್ಭೀತಿಯಿಂದ ಅದೇ ಜಾಗದಲ್ಲಿ ವಾಸಿಸಬಹುದು ಎಂದು ತಿಳಿಸಿದರುಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ತಹಸೀಲ್ದಾರ್ ಪ್ರದೀಪ್, ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ., ಪುರಸಭೆ ಅಧ್ಯಕ್ಷ ಯೋಗಿಶ್ ದೇವಾಡಿಗ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷ ಉಷಾ ಕೆ. ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಫಲಾಭವಿಗಳು ಹಾಜರಿದ್ದರು.