ಕಾರ್ಕಳ ಎಸ್‌ವಿಟಿ ವಿದ್ಯಾಸಂಸ್ಥೆ: ಸೂರ್ಯ ನಮಸ್ಕಾರ ಯಜ್ಞ

| Published : Feb 10 2025, 01:48 AM IST

ಸಾರಾಂಶ

ಕಾರ್ಕಳ ತಾಲೂಕು ಕ್ರೀಡಾ ಭಾರತಿ ಹಾಗೂ ಎಸ್‌ಪಿವೈಎಸ್‌ಎಸ್‌ ರಿಜಿಸ್ಟರ್ಡ್ ಕಾರ್ಕಳ ಮತ್ತು ನಿರಂತರ ಯೋಗ ಕೇಂದ್ರ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಎಸ್ವಿಟಿ ವಿದ್ಯಾ ಸಂಸ್ಥೆಯ ಆಭರಣದಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕು ಕ್ರೀಡಾ ಭಾರತಿ ಹಾಗೂ ಎಸ್‌ಪಿವೈಎಸ್‌ಎಸ್‌ ರಿಜಿಸ್ಟರ್ಡ್ ಕಾರ್ಕಳ ಮತ್ತು ನಿರಂತರ ಯೋಗ ಕೇಂದ್ರ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಎಸ್ವಿಟಿ ವಿದ್ಯಾ ಸಂಸ್ಥೆಯ ಆಭರಣದಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮ ನೆರವೇರಿತು.

ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ನಿರಂತರ ಯೋಗ ಕೇಂದ್ರದ ಜಿಲ್ಲಾ ಸಂಯೋಜಕ ಎಸ್ ನಿತ್ಯಾನಂದ ಪೈ, ಡಾ. ಕೆ. ನರೇಂದ್ರ ಕಾಮತ್, ಸ್ಪೈಸ್ ಕಾರ್ಕಳ ನಗರ ಘಟಕದ ಸಂಚಾಲಕಿ ಆರ್ ಶ್ವೇತಾ ಶೆಣೈ, ಹಿರಿಯ ಯೋಗಪಟು ವಿನಾಯಕ ಕುಡ್ವ ಹಾಗೂ ಕ್ರೀಡಾ ಭಾರತಿ ಮಂಗಳೂರು ವಿಭಾಗ ಸಂಯೋಜಕರಾದ ಪ್ರಸನ್ನ ಶೆಣೈ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣಪಯ್ಯ ಉದ್ಘಾಟಿಸಿದರು.

ಕ್ರೀಡಾ ಭಾರತಿ ಕಾರ್ಕಳ ತಾಲೂಕು ಕಾರ್ಯದರ್ಶಿ ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಕ್ರೀಡಾ ಭಾರತಿ ಅಧ್ಯಕ್ಷ ಸಿ. ಶಿವಾನಂದ ಕಾಮತ್ ವಂದಿಸಿದರು.

...........ಉಲ್ಲಾಸ್‌ ಕಾರಂತ್ ಭೇಟಿ

ಸಾಲಿಗ್ರಾಮದಲ್ಲಿರುವ ಡಾ.ಕೋಟ ಶಿವರಾಮ ಕಾರಂತ ಅಧ್ಯಯನ ಮತ್ತು ಸಂಶೋಧನ ಕೇಂದ್ರಕ್ಕೆ ಶಿವರಾಮ ಕಾರಂತರ ಪುತ್ರ, ಅಂತಾರಾಷ್ಟ್ರೀಯ ಖ್ಯಾತಿಯ ಪ್ರಾಣಿ ತಜ್ಞ ಡಾ. ಉಲ್ಲಾಸ್ ಕಾರಂತರು ತಮ್ಮ ಪತ್ನಿ ಡಾ. ಪ್ರತಿಭಾ ಕಾರಂತರೊಂದಿಗೆ ಭೇಟಿ ನೀಡಿದರು.ಅಧ್ಯಯನ ಕೇಂದ್ರದಲ್ಲಿ ತಮ್ಮ ತಂದೆ ಶಿವರಾಮ ಕಾರಂತರ ಗ್ರಂಥಗಳು, ಭಾವಚಿತ್ರಗಳು, ಅವರು ಉಪಯೋಗಿಸುತ್ತಿದ್ದ ವಸ್ತುಗಳು, ಮುಂತಾದವುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಕೆಲವೊಂದು ಚಿತ್ರಗಳು, ವಸ್ತುಗಳ ಬಗ್ಗೆ ವಿವರಣೆ ನೀಡಿದರು. ಇನ್ನಷ್ಟು ಈ ಕೇಂದ್ರವನ್ನು ಬಲಗೊಳಿಸಲು ಉಪಯುಕ್ತ ಸಲಹೆ, ಸೂಚನೆಗಳನ್ನೂ ನೀಡಿದರು. ತಂದೆಯೊಂದಿಗಿನ ತನ್ನ ಕೆಲವು ಅನುಭವಗಳನ್ನೂ ಹಂಚಿಕೊಂಡರು.

ಈ ಸಂದರ್ಭದಲ್ಲಿ ಕಾರಂತ ಅಧ್ಯಯನ ಕೇಂದ್ರದ ಹಿರಿಯ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಹಲವಾರು ಉಪಯುಕ್ತ ಮಾಹಿತಿಗಳನ್ನು ಉಲ್ಲಾಸ್ ಕಾರಂತರಿಗೆ ನೀಡಿದರು. ಟ್ರಸ್ಟಿನ ಅಧ್ಯಕ್ಷ ಗುರುರಾಜ ರಾವ್, ಉಪಾಧ್ಯಕ್ಷ ಡಾ. ಎನ್. ವಿ. ಕಾಮತ್, ಇತರ ಟ್ರಸ್ಟಿಗಳಾದ ನಾರಾಯಣ್ ಆಚಾರ್, ಸಂದೀಪ್ ಶೆಟ್ಟಿ, ಮಾಜಿ ಟ್ರಸ್ಟಿ ಕೋಡಿ ಚಂದ್ರಶೇಖರ ನಾವಡ, ಸಿಬ್ಬಂದಿ ಸಂಗೀತ ಮಿಂತಾದವರು ಉಪಸ್ಥಿತರಿದ್ದರು.