ಕಾರ್ಕಳ: ವಿಜೇತ ವಿಶೇಷ ಶಾಲೆ ವಾರ್ಷಿಕೋತ್ಸವ

| Published : Apr 12 2024, 01:12 AM IST

ಕಾರ್ಕಳ: ವಿಜೇತ ವಿಶೇಷ ಶಾಲೆ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಎಂ.ಸಿ.ಎಫ್.ಲಿ.ನ ಜಂಟಿ ಮುಖ್ಯ ಪ್ರಬಂಧಕ ಚೇತನ್ ರೋಹನ್ ಮೆಂಡೋನ್ಸ ಮತ್ತು ಹಿರಿಯ ನಿವೃತ್ತ ಸಿ.ಎ. ಕಮಲಾಕ್ಷ ಕಾಮತ್, ಶೌಚಾಲಯ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ಮಂಗಳೂರು ಕೆಮಿಕಲ್ ಆ್ಯಂಡ್ ಫರ್ಟಿಲೈಸರ್ ಸಂಸ್ಥೆಯ ಸಿ.ಎಸ್.ಆರ್. ಪ್ರಾಯೋಜಕತ್ವದ ಶೌಚಾಲಯ ಕಟ್ಟಡ ಹಸ್ತಾಂತರ ಹಾಗೂ ಅಷ್ಟಮ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಎಂ.ಸಿ.ಎಫ್.ಲಿ.ನ ಜಂಟಿ ಮುಖ್ಯ ಪ್ರಬಂಧಕ ಚೇತನ್ ರೋಹನ್ ಮೆಂಡೋನ್ಸ ಮತ್ತು ಹಿರಿಯ ನಿವೃತ್ತ ಸಿ.ಎ. ಕಮಲಾಕ್ಷ ಕಾಮತ್, ಶೌಚಾಲಯ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸಿದರು.

ಶಾಲಾ ಗೌರವಾಧ್ಯಕ್ಷರು ಹಾಗೂ ಶ್ರೀ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿ, ಸಿ.ಎಸ್.ಆರ್. ನಿಧಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿ ಕೊಟ್ಟ ಎಂ.ಸಿ.ಎಫ್‌.ಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಮುಂಬೈ ಬಂಟ್ಸ್ ಸಂಘ ಅಧ್ಯಕ್ಷ ಪ್ರವೀಣ್ ಭೋಜ್ ಶೆಟ್ಟಿ, ಜತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಉದ್ಯಮಿಗಳಾದ ನಿತ್ಯಾನಂದ ಪೈ, ಇನ್ನಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಜೇಂದ್ರ ಭಟ್ ಕೆ., ಉದ್ಯಮಿ ಮಂಜುನಾಥ್, ಎಂ.ಸಿ.ಎಫ್. ಸಹಾಯಕ ವ್ಯವಸ್ಥಾಪಕ ಸತ್ಯನಾರಾಯಣ್ ಮಧ್ಯಸ್ಥ, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ವಿಕಲಚೇತನರ ಇಲಾಖೆಯ ನಿವೃತ್ತ ಅಧಿಕಾರಿಗಳಾದ ನಿರಂಜನ್ ಭಟ್, ಹಿರಿಯ ಉದ್ಯಮಿಗಳಾದ ಅಪ್ಪುರಾಯ ಕಿಣಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚೇತನ್ ರೋಹನ್ ಜೋಸೆಫ್ ಮೆಂಡೋನ್ಸ, ಸಿಎ ಕಮಲಾಕ್ಷ ಕಾಮತ್, ಪತ್ರಕರ್ತರಾದ ಸುಭಾಶ್ಚಂದ್ರ ವಾಗ್ಳೆ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಸಿಬ್ಬಂದಿಯಾದ ಶುತಿ, ವಿದ್ಯಾ, ಸುಲತಾ ಇವರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು.

ನಳಿನಿ ನಿರೂಪಿಸಿದರು. ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ವಂದಿಸಿದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜೇತ ವಿಶೇಷ ಶಾಲಾ ಮಕ್ಕಳಿಂದ ನೇತಾಜಿ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು.

ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ನಿರ್ದೇಶನ, ವಿಜಯ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಮತ್ತು ಬೊಳ್ಳಿ ಕಲಾವಿದರ ತಂಡದಿಂದ ಜೋಕ್ಲಾಟಿಗೆ ಬುಡ್ಲೆ ನಾಟಕ ಪ್ರದರ್ಶನಗೊಂಡಿತು.