ನಮ್ಮ ಕುಟುಂಬದ ವಿರುದ್ಧ ಸಲ್ಲದ ಆರೋಪ ಮಾಡಿ ನಮ್ಮ ಹಿರಿಯರು ಮನಕುಗ್ಗುವಂತಗೆ ಮಾಡಿದ ಜನರಿಗೆ ಶೀಘ್ರದಲ್ಲಿ ಉತ್ತರ ದೂರಕಲಿದೆ. ಪಕ್ಷ ಸಂಘಟನೆಯನ್ನು ಜೆಡಿಎಸ್‌ಗೆ ಯಾರು ಹೇಳಿಕೂಡಬೇಕಿಲ್ಲ. ಜೆಡಿಎಸ್ ಮುಗಿದೆ ಹೋಗಿದೆ ಎಂಬ ಭಾವನೆ ವಿರೋಧಿಗಳಲ್ಲಿ ನೆಲಸಿದೆ ಆದರೆ, ಶೂನ್ಯದಿಂದ ಸಂಪಾದನೆ ಮಾಡುವುದು ನಮಗೆ ತಿಳಿದಿದೆ. ಸೋಲು ಗೆಲುವು ನಮ್ಮ ಪಕ್ಷಕ್ಕೆ ಸಹಜ. ೯೩ನೇ ವಯಸ್ಸಿನಲ್ಲಿರುವ ದೇವೆಗೌಡರಿಗೆ ಜಿಲ್ಲೆಯ ಆಗೋಹೋಗುಗಳ ಬಗ್ಗೆ ಅರಿವಿದೆ. ನಮ್ಮ ಪಕ್ಷ ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸಿದೆ ಎಂದು ಜೆಡಿಎಸ್ ಮುಖಂಡ ಎಚ್. ಡಿ. ರೇವಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ವಿನಾಕಾರಣ ನಮ್ಮ ಅಪ್ಪ ಅಮ್ಮನ ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಜೆಡಿಎಸ್ ಮುಖಂಡ ಎಚ್. ಡಿ. ರೇವಣ್ಣ ಹೇಳಿದರು.

ಸೋಮವಾರ ತಾಲೂಕು ಜೆಡಿಎಸ್ ಘಟಕ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕುಟುಂಬದ ವಿರುದ್ಧ ಸಲ್ಲದ ಆರೋಪ ಮಾಡಿ ನಮ್ಮ ಹಿರಿಯರು ಮನಕುಗ್ಗುವಂತಗೆ ಮಾಡಿದ ಜನರಿಗೆ ಶೀಘ್ರದಲ್ಲಿ ಉತ್ತರ ದೂರಕಲಿದೆ. ಪಕ್ಷ ಸಂಘಟನೆಯನ್ನು ಜೆಡಿಎಸ್‌ಗೆ ಯಾರು ಹೇಳಿಕೂಡಬೇಕಿಲ್ಲ. ಜೆಡಿಎಸ್ ಮುಗಿದೆ ಹೋಗಿದೆ ಎಂಬ ಭಾವನೆ ವಿರೋಧಿಗಳಲ್ಲಿ ನೆಲಸಿದೆ ಆದರೆ, ಶೂನ್ಯದಿಂದ ಸಂಪಾದನೆ ಮಾಡುವುದು ನಮಗೆ ತಿಳಿದಿದೆ. ಸೋಲು ಗೆಲುವು ನಮ್ಮ ಪಕ್ಷಕ್ಕೆ ಸಹಜ. ೯೩ನೇ ವಯಸ್ಸಿನಲ್ಲಿರುವ ದೇವೆಗೌಡರಿಗೆ ಜಿಲ್ಲೆಯ ಆಗೋಹೋಗುಗಳ ಬಗ್ಗೆ ಅರಿವಿದೆ. ನಮ್ಮ ಪಕ್ಷ ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮಗ್ರಾಮಗಳಲ್ಲಿ ತಮ್ಮ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದರೆ, ವಿಶೇಷವಾಗಿ ಜಿಲ್ಲೆಯಲ್ಲಿ ಹತ್ತಾರು ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಇಂದನ ಮಂತ್ರಿಗಳಾಗಿ ತಾಲೂಕಿನ ಅಭಿವೃದ್ಧಿ ನೀಡಿರುವ ಕೂಡುಗೆ ತಾಲೂಕಿನ ಪ್ರತಿ ಜನತೆಗೂ ತಿಳಿದಿದೆ. ಶೈಕ್ಷಣಿಕ, ಆರೋಗ್ಯ, ಇಂಧನ ಹಾಗೂ ಲೋಕೋಪಯೋಗಿ ಇಲಾಖೆಗಳು ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇಂತಹ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತ ಬಂದಿದೆ. ಏನು ಕೆಲಸವಾಗಿದೆ? ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ನಮ್ಮ ರಾಜಕೀಯ ಮುಗಿದಿಲ್ಲ. ಬನ್ನಿ ೨೦೨೮ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ. ಮುಂದೆ ನಡೆಯಲಿರುವ ಪಂಚಾಯತ್ ಚುನಾವಣೆಗಳಲ್ಲಿ ನಿಮಗೆ ನಮ್ಮ ತಾಕತ್ತು ತೋರಲಿದ್ದೇವೆ. ನನ್ನ ಮೇಲೆ ನೂರು ಕೇಸು ಹಾಕಿದರು ಹೆದರುವುದಿಲ್ಲ ನಾನು ಏನೇಂದು ತೋರಿಸುತ್ತೇನೆ. ಕನಿಷ್ಠ ವಾರದಲ್ಲಿ ನಾಲ್ಕು ದಿನಗಳ ಕಾಲ ಕ್ಷೇತ್ರದಲ್ಲಿ ಕುಮಾರಸ್ವಾಮಿ ಇರಬೇಕು. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಅನ್ಯಾಯವಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೂಮ್ಮೆ ಕ್ಷೇತ್ರಕ್ಕೆ ಆಗಮಿಸಲಿದ್ದೇನೆ ಎಂದರು.

ಕಳೆದ ಮೂವತ್ತು ವರ್ಷದ ರಾಜಕೀಯದಲ್ಲಿ ಅಲ್ಪಸಂಖ್ಯಾತರಿಗೆ ನಮ್ಮ ಪಕ್ಷದಿಂದ ಯಾವುದೆ ಹಾನಿಯಾಗಿಲ್ಲ. ಅಲ್ಪಸಂಖ್ಯಾತರ ಅಭಿವೃದ್ದಿ ಸಾಕಷ್ಟು ಕೂಡುಗೆಯನ್ನು ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ್ದೇವೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿದೆ. ಜಾತಿ,ಧರ್ಮದ ತಾರತಮ್ಯವಿಲ್ಲದೆ ನಮ್ಮ ಪಕ್ಷ ಅಧಿಕಾರವನ್ನು ನೀಡಿದೆ. ಜನವರಿ ತಿಂಗಳ ೨೪ ರಂದು ನಡೆಯುವ ಸಮಾವೇಶಕ್ಕೆ ಕನಿಷ್ಠ ೧೦ ಸಾವಿರಕ್ಕೂ ಅದಿಕ ಕಾರ್ಯಕರ್ತರನ್ನು ಕರೆತರುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು ಎಂದರು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ನಮ್ಮ ತಪ್ಪುಗಳಿಂದ ೨೦೨೪ರ ಚುನಾವಣೆಯಲ್ಲಿ ತಪ್ಪಾಗಿದೆ. ತಪ್ಪು ಸರಿಪಡಿಸಲು ನಮ್ಮ ಕುಟುಂಬದ ಹಿರಿಯರು ಶಕ್ತರಿದ್ದಾರೆ. ಮಾಡಿದ ತಪ್ಪನ್ನು ತಿದ್ದಿಕೊಂಡು ಪಕ್ಷ ಸಂಘಟನೆ ಮಾಡುವ ಹೊಣೆ ನಮ್ಮ ಮೇಲಿದೆ. ಪಕ್ಷದ ಕಾರ್ಯಕರ್ತರು ಸಮಾಜಿಕ ಜಾಲಗಳಲ್ಲಿ ಆಹಾರವಾಗಬಾರದು, ಟೀಕಕಾರಿಗೆ ಸಮರ್ಪಕ ಉತ್ತರ ನೀಡ ಬೇಕು. ಪಕ್ಷ ಸಂಘಟನೆಯ ಹಂತವಾಗಿ ಜನವರಿ ೨೪ರಂದು ಹಾಸನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು ದೇವೇಗೌಡರ ಆಸೆಯನ್ನು ನೆರವೇರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯರಾದ ಚಂಚಲಾ ಕುಮಾರಸ್ವಾಮಿ, ಪಲ್ಲವಿ ಶ್ರೀನಿವಾಸ್, ಸುಪ್ರದೀಪ್ತ್ ಯಜಮಾನ್, ಕುಮಾರಸ್ವಾಮಿ, ಪಕ್ಷದ ತಾಲೂಕು ಅಧ್ಯಕ್ಷ ಕೆ. ಎಲ್ ಸೋಮಶೇಖರ್, ಕೊತ್ತನಹಳ್ಳಿ ತಮ್ಮಣ್ಣ, ಯಾದಗಾರ್ ಇಬ್ರಾಹಿಂ, ಮಲ್ನಾಡ್ ಜಾಕೀರ್, ಜಾತಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಹಲವರಿದ್ದರು.

--------

*ಬಾಕ್ಸ್‌: ಹಿರಿಯರ ಮಾತು ಕೇಳಬೇಕು

ದೇವೇಗೌಡರ ಮಾತು ಕೇಳದೆ ಅರಸೀಕೆರೆಯಲ್ಲಿ ವ್ಯಕ್ತಿಯೊಬ್ಬರನ್ನು ಶಾಸಕರನ್ನಾಗಿ ಮಾಡಿದ್ದು, ಇದರ ಫಲವನ್ನು ಈಗ ಉಣ್ಣುತಿದ್ದೇವೆ. ಅದಕ್ಕೆ ಹೇಳುವುದು ಹಿರಿಯರ ಮಾತು ಕೇಳಬೇಕು ಎಂದು.