ಕರ್ನಾಟಕ ಬಂದ್‌ಗೆ ಪಾಂಡವಪುರ ಪಟ್ಟಣ, ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ

| Published : Mar 23 2025, 01:30 AM IST

ಕರ್ನಾಟಕ ಬಂದ್‌ಗೆ ಪಾಂಡವಪುರ ಪಟ್ಟಣ, ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮರಾಠಿಗರು ಕನ್ನಡಿಗೆ ಮೇಲಿನ ದಬ್ಬಾಳಿಕೆ, ದೌರ್ಜನ್ಯವನ್ನು ಖಂಡಿಸಿ ವಾಟಾಳ್‌ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆನೀಡಿದ ಕರ್ನಾಟಕ ಬಂದ್‌ಗೆ ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮರಾಠಿಗರು ಕನ್ನಡಿಗೆ ಮೇಲಿನ ದಬ್ಬಾಳಿಕೆ, ದೌರ್ಜನ್ಯವನ್ನು ಖಂಡಿಸಿ ವಾಟಾಳ್‌ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆನೀಡಿದ ಕರ್ನಾಟಕ ಬಂದ್‌ಗೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಕರ್ನಾಟಕ ಬಂದ್‌ಗೆ ಸಾರ್ವಜನಿಜಕರು, ಗ್ರಾಹಕರು, ವರ್ತಕರು, ಆಟೋ, ಬಸ್ ಚಾಲಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಇದ್ದರೂ ಸಹ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ಬಾಗಿಲು ತೆರೆದು ವಹಿವಾಟು ನಡೆಸಿದರು. ಆಟೋ, ಬಸ್ ಸಂಚಾರ ಎಂದಿನಂತೆ ಓಡುತ್ತಿದ್ದವು, ಗ್ರಾಹಕರು, ಸಾರ್ವಜನಿಕರು ಎಂದಿನಂತೆ ಸಂಚಾರ ಬೆಳೆಸಿದರು. ಚಿತ್ರಮಂದಿರಗಳು, ಹೋಟೆಲ್‌ಗಳು, ಬೀದಿಬದಿ ವ್ಯಾಪಾರಿಗಳು ಎಂದಿನಂತೆ ವ್ಯವಹಾರ ನಡೆಸಿದರು.

ಯಾವುದೇ ಕನ್ನಡ ಪರ ಸಂಘಟನೆಗಳು ಸಹ ಪ್ರತಿಭಟನೆ ನಡೆಸಿಲ್ಲ. ಸಾರಿಗೆ ಬಸ್‌ಗಳು ಸಹ ಎಂದಿನಂತೆ ರಸ್ತೆಗಳಿಗೆ ಸಂಚರಿಸಿದವು, ಜನರು, ವಿದ್ಯಾರ್ಥಿಗಳು ಯಾವುದೇ ಬಸ್ ಸಮಸ್ಯೆಗಳಿಲ್ಲದೆ ಒಂದು ಊರಿನಿಂದ ಮತ್ತೊಂದು ಊರಿಗೆ, ಶಾಲಾ-ಕಾಲೇಜುಗಳಿಗೆ ಸಂಚರಿಸಿದರು. ಒಟ್ಟಾರೆ ಕರ್ನಾಟಕ ಬಂದ್‌ಗೆ ಪಾಂಡವಪುರ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ನೀರಪ್ರಕ್ರಿಯೆ ವ್ಯಕ್ತವಾಯಿತು.

ವಾತಾವರಣ ತಂಪಾಗಿಸಿದ ಬಿರುಗಾಳಿ ಸಹಿತ ಮಳೆ

ಮಂಡ್ಯ:

ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಬಿರುಗಾಳಿಸಿ ಸಹಿತ ಮಳೆಯಿಂದ ವಾತಾವರಣವನ್ನು ತಂಪಾಗಿಸಿತು. ಕಳೆದ ಕೆಲ ದಿನಗಳಿಂದ ಸುಡುಬಿಸಿಲಿನಿಂದ ಉಷ್ಠಾಂಶ ಏರಿಕೆಯಾಗಿ ಜನರು ಬಳಲಿದ್ದರು. ಸಂಜೆಯಿಂದಲೇ ಮೊಡ ಕವಿದ ವಾತಾವರಣವಿತ್ತು. ರಾತ್ರಿಯಾಗುತ್ತಿದ್ದಂತೆ ಬಿರುಗಾಳಿ ಸಹಿತ, ಗುಡುಗು, ಮಿಂಚಿನೊಂದಿಗೆ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು. ಮಂಡ್ಯ ನಗರ, ಗ್ರಾಮಾಂತರ, ನಾಗಮಂಗಲ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾದ ವರದಿಯಾಗಿದೆ.