ಸಾರಾಂಶ
ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ಗೆ ಶುದ್ಧ ಕುಡಿಯುವ ನೀರು ಘಟಕ ಕೊಡುಗೆ ನೀಡಿದೆ. ಈ ವಾಟರ್ ಕೂಲರ್ ಗಳ ವಾರ್ಷಿಕ ನಿರ್ವಹಣೆಯನ್ನು ಕಲ್ಕೂರ ರೆಪ್ರಿಜಿರೇಶನ್ ಸಂಸ್ಥೆ ನಿಶುಲ್ಕವಾಗಿ ನಿರ್ವಹಿಸುತ್ತದೆ ಎಂದು ಸಂಸ್ಥೆಯ ಮಾಲೀಕ ರಂಜನ್ ಕಲ್ಕೂರ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ಗೆ ಶುದ್ಧ ಕುಡಿಯುವ ನೀರು ಘಟಕ ಕೊಡುಗೆ ನೀಡಿದೆ.ಇಲ್ಲಿನ ಬ್ರಾಹ್ಮಿ ಸಭಾಭವನದಲ್ಲಿ ಸಾರ್ವಜನಿಕ ಬಳಕೆಗಾಗಿ ಉತ್ಕೃಷ್ಟ ಗುಣಮಟ್ಟದ ಶುದ್ಧೀಕರಣ ಸಾಮರ್ಥ್ಯ ಹೊಂದಿರುವ ಯು.ವಿ. ಫಿಲ್ಟರೇಷನ್ ತಂತ್ರಜ್ಞಾನದ ಪ್ರತಿಷ್ಠಿತ ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ಮೆಂಟ್ ನಿರ್ಮಿತ ಶುದ್ದ ಬಿಸಿನೀರು, ಸಾಮಾನ್ಯ ಹಾಗೂ ತಣ್ಣೀರಿನ ಆಯ್ಕೆಗಳ ಮೂರು ನಳಿಕೆಗಳನ್ನು ಹೊಂದಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳನ್ನು ನೀಡಿದೆ.
ಕರ್ಣಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ ಭಟ್ ಅವರು ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ಕೆ. ಎನ್. ಅವರಿಗೆ ಹಸ್ತಾಂತರಿಸುವ ಮೂಲಕ ಘಟಕ ಲೋಕಾರ್ಪಣೆಗೊಳಿಸಿದರು.ಈ ವಾಟರ್ ಕೂಲರ್ ಗಳ ವಾರ್ಷಿಕ ನಿರ್ವಹಣೆಯನ್ನು ಕಲ್ಕೂರ ರೆಪ್ರಿಜಿರೇಶನ್ ಸಂಸ್ಥೆ ನಿಶುಲ್ಕವಾಗಿ ನಿರ್ವಹಿಸುತ್ತದೆ ಎಂದು ಸಂಸ್ಥೆಯ ಮಾಲೀಕ ರಂಜನ್ ಕಲ್ಕೂರ ಮಾಹಿತಿ ನೀಡಿದರು.
ಈ ಸಂದರ್ಭ ಕರ್ಣಾಟಕ ಬ್ಯಾಂಕ್ ಉಡುಪಿ ರಥಬೀದಿ ಶಾಖೆಯ ಸೀನಿಯರ್ ಮ್ಯಾನೇಜರ್ ಪ್ರಶಾಂತ್ ರಾವ್ ಹಾಗೂ ಕುಂಜಿಬೆಟ್ಟು ಶಾಖೆಯ ರಾಧಿಕಾ ಚಂದ್ರಕಾಂತ್, ಯುವ ಬ್ರಾಹ್ಮಣ ಪರಿಷತ್ತಿನ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಪೂರ್ವಾಧ್ಯಕ್ಷ ರಂಜನ್ ಕಲ್ಕೂರ, ಉಪಾಧ್ಯಕ್ಷ ರಘುಪತಿ ರಾವ್, ಸಮಿತಿಯ ಸದಸ್ಯರಾದ ರಂಗನಾಥ್ ಸರಳಾಯ, ನಾರಾಯಣ ಭಟ್, ಕಲ್ಕೂರ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪಾಲುದಾರ ರಾಹುಲ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ. ಜಿ. ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.