ಸಾರಾಂಶ
ಈ ಶಾಖೆಯ ಹಾಗೂ ಮಿನಿ ಇ-ಲಾಭಿಯ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಜ್ಯೋತಿರ್ವಿಧ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳು ನೆರವೇರಿಸಿದರು. ಈ ಸಂದರ್ಭ ಕೈಗಾರಿಕೋದ್ಯಮಿ ಯೋಗೇಶ್ ಮಲ್ಯ, ಸಿವಿಲ್ ಎಂಜಿನಿಯರ್ ಪ್ರಶಾಂತ್ ಬೆಳಿರಾಯ, ನಿವೃತ್ತ ಪ್ರಾಧ್ಯಾಪಕ ಕರುಣಾಕರ ಹೆಗ್ಡೆ, ಬ್ಯಾಂಕ್ ಮುಖ್ಯ ಪ್ರಬಂಧಕ ಮನೋಜ್ ಕೋಟ್ಯಾನ್, ಪ್ರದೀಪ್ ಕುಮಾರ್ ಕೆ.ಆರ್., ಮಹೇಶ್ ಕೆ.ಕೆ., ಇನ್ನಿತರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಕಾರ್ಕಳಕರ್ಣಾಟಕ ಬ್ಯಾಂಕಿನ 956ನೇ ಶಾಖೆಯು ಹಿರಿಯಡ್ಕ ಅಜೆಕಾರು ರಸ್ತೆಯ ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ. ಈ ಹೊಸ ಶಾಖೆ ಕಡ್ತಲ ಹಾಗೂ ಹತ್ತಿರದ ಹಲವಾರು ಹಳ್ಳಿಯ ಗ್ರಾಮೀಣ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ದೊರಕಿಸಲು ಸಜ್ಜಾಗಿದೆ.ಈ ಶಾಖೆಯ ಹಾಗೂ ಮಿನಿ ಇ-ಲಾಭಿಯ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಜ್ಯೋತಿರ್ವಿಧ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳು ನೆರವೇರಿಸಿದರು. ಈ ಸಂದರ್ಭ ಕೈಗಾರಿಕೋದ್ಯಮಿ ಯೋಗೇಶ್ ಮಲ್ಯ, ಸಿವಿಲ್ ಎಂಜಿನಿಯರ್ ಪ್ರಶಾಂತ್ ಬೆಳಿರಾಯ, ನಿವೃತ್ತ ಪ್ರಾಧ್ಯಾಪಕ ಕರುಣಾಕರ ಹೆಗ್ಡೆ, ಬ್ಯಾಂಕ್ ಮುಖ್ಯ ಪ್ರಬಂಧಕ ಮನೋಜ್ ಕೋಟ್ಯಾನ್, ಪ್ರದೀಪ್ ಕುಮಾರ್ ಕೆ.ಆರ್., ಮಹೇಶ್ ಕೆ.ಕೆ., ಇನ್ನಿತರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಟ್ಟಡದ ಮಾಲೀಕರಾದ ಅಶ್ವಿನಿ ಎಸ್. ಹೆಗ್ಡೆ- ಸುಕೇಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಉಡುಪಿ ವಲಯದ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ವಾದಿರಾಜ ಕೆ. ಗಣ್ಯರನ್ನು ಸ್ವಾಗತಿಸಿದರು. ಕಡ್ತಲ ಶಾಖೆಯ ವ್ಯವಸ್ಥಾಪಕ ವಿಜೇತ್ ರೈ ವಂದಿಸಿದರು. ಅಮಾಸೆಬೈಲು ಶಾಖೆಯ ಸಹಾಯಕ ವ್ಯವಸ್ಥಾಪಕ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.