ಕರ್ನಾಟಕ ಬಯಲಾಟ ಅಕಾಡೆಮಿ: 20 ಗೌರವ, 39 ವಾರ್ಷಿಕ ಪ್ರಶಸ್ತಿ ಪ್ರದಾನ

| Published : Feb 11 2025, 12:46 AM IST

ಸಾರಾಂಶ

ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಹಮ್ಮಿಕೊಂಡ 2021, 2022, 2023 ಹಾಗೂ 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 20 ಜನರಿಗೆ ಗೌರವ ಪ್ರಶಸ್ತಿ ಹಾಗೂ 39 ಜನರಿಗೆ ವಾರ್ಷಿಕ ಪ್ರಶಸ್ತಿಯನ್ನು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಹಮ್ಮಿಕೊಂಡ 2021, 2022, 2023 ಹಾಗೂ 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 20 ಜನರಿಗೆ ಗೌರವ ಪ್ರಶಸ್ತಿ ಹಾಗೂ 39 ಜನರಿಗೆ ವಾರ್ಷಿಕ ಪ್ರಶಸ್ತಿಯನ್ನು ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಪ್ರದಾನ ಮಾಡಿದರು.

ನವನಗರದ ಕಲಾಭವನದಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 4 ವರ್ಷದ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಸೇರಿ ಒಟ್ಟು 59 ಪುರಷ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿ ಸಾಲಿಗೆ 5 ಜನರಿಗೆ ಗೌರವ ಪ್ರಶಸ್ತಿ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. 2022ನೇ ಸಾಲಿನಲ್ಲಿ 9 ಜನರಿಗೆ ವಾಷರ್ಷಿಕ ಪ್ರಶಸ್ತಿ ನೀಡಲಾಯಿತು. ಗೌರವ ಪ್ರಶಸ್ತಿ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ, ವಾರ್ಷಿಕ ಪ್ರಶಸ್ತಿಗೆ ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರು, ಯುವಕರು ನಮ್ಮ ದೇಶದ ನೆಲ, ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಭಾರತ ಕಲಾವಿದರಿಂದ ತುಂಬಿದ ಶ್ರೀಮಂತ ದೇಶವಾಗಿದ್ದು, ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಆರ್ಥಿಕ, ಸಾಮಾಜಿಕವಾಗಿ ಶ್ರೀಮಂತ ದೇಶವಾಗಲು ಆಯಾ ಕಾಲದಲ್ಲಿ ಆಗಿ ಹೋದ ಶರಣರು, ಸಂತರು ಕಾರಣರಾಗಿದ್ದಾರೆ. ಕೇಂದ್ರ ಸರ್ಕಾರ ಸಹ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು, ಪ್ರಶಸ್ತಿ ಪುರಷ್ಕೃತರ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ಕಲಾವಿದರು ತಮ್ಮ ಬದುಕಿನ ಮುಕ್ಕಾಲು ಭಾಗ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರ ಕಲಾ ಸೇವೆಗೆ ಬೆಳೆ ಕಟ್ಟಲು ಸಾಧ್ಯವಾಗದು. ಜನಪದ ಲೋಕದಲ್ಲಿ ಪಲಾಪೇಕ್ಷೆಯಿಲ್ಲದೇ ಮುಂದುವರಿಸಿಕೊಂಡು ಬಂದಿದ್ದಾರೆ. ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ದಾಖಲೀಕರಣ ಅವಶ್ಯಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಪ್ರಶಸ್ತಿ ಪುರಷ್ಕೃತರ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಕಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ.ಆರ್. ದುರ್ಗಾದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಕವಿ ಸತ್ಯಾನಂದ ಪಾತ್ರೋಟ, ಧಾರವಾಡ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ.ವೀರಣ್ಣ ರಾಜೂರ ಸೇರಿದಂತೆ ಅಕಾಡೆಮಿ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಇದ್ದರು.

ಗೌರವ ಪ್ರಶಸ್ತಿ ಪುರಷ್ಕೃತರು:

2021ನೇ ಸಾಲಿನ ಅನುಸೂಯಾ ವಡ್ಡರ, ನರಸಪ್ಪ ಶಿರಗುಪ್ಪಿ, ವೀರಪ್ಪ ಬಿಸರಳ್ಳಿ, ಎಸ್.ಎ. ಕೃಷ್ಣಪ್ಪ, ಗೋವಿಂದಪ್ಪ ತಳವಾರ, 2022ನೇ ಸಾಲಿನ ಕೆ. ಮೌನಾಚಾರಿ, ಸುರೇಂದ್ರ ಹುಲ್ಲಂಬಿ, ಶತಕಂಠ ಮಲ್ಲೇಶಯ್ಯ, ಚಂದ್ರಮ್ಮ, ಅಶೋಕ ಸುತಾರ, 2023ನೇ ಸಾಲಿನ ಡಾ.ಡಿ.ಕೆ. ರಾಜೇಂದ್ರ, ಸಿದ್ರಾಮ ಸಾತಪ್ಪ ನಾಯಕ, ನಾರಾಯಣ ಪತ್ತಾರ, ಓಂಕಾರಮ್ಮ, ಇಮಾಮ್‌ ಸಾಬ್‌. 2024ನೇ ಸಾಲಿನ ಎಚ್.ಎಂ. ಪಂಪಯ್ಯಸ್ವಾಮಿ, ಗಂಗಮ್ಮ, ಕೊಪ್ಪಳದ ತಿಮ್ಮಣ್ಣ ಚನ್ನದಾಸರ, ಈಶ್ವರಪ್ಪ ಹಲಗಣಿ, ಶಿವಣ್ಣ ಬಿರಾದಾರ.

ವಾರ್ಷಿಕ ಪ್ರಶಸ್ತಿ ಪುರಷ್ಕೃತರು:

2021ನೇ ಸಾಲಿನಲ್ಲಿ ಸುಂದ್ರವ್ವ ಮೇತ್ರಿ, ಫಕೀರಪ್ಪ ಗೌರಕ್ಕನವರ, ಚಂದ್ರಶೇಖರ ಮೇಲಿನಮನಿ, ದುಂಡಪ್ಪ ಗುಡ್ಡಾ, ಚಂದ್ರಶೇಖರ ಗುರಯ್ಯನವರ, ಸುಶೀಲಾ ಮಾದರ, ಯಂಕೋಬ ಮುನಿಯಪ್ಪ, ಚಂದ್ರಪ್ಪ ಶರಣಪ್ಪ, ಎಂ.ಆರ್. ವಿಜಯ, ದಾನಪ್ಪ ಹಡಪದ, 2022ನೇ ಸಾಲಿನಲ್ಲಿ ಮಲ್ಲಪ್ಪ ಗಣಿ, ಫಕ್ಕಿರೇಶ ಬಿಸೆಟ್ಟಿ, ಕೆ. ನಾಗರತ್ನಮ್ಮ, ಕೆಂಪಣ್ಣ ಚೌಗಲಾ, ರಾಮಚಂದ್ರಪ್ಪ ಕಟ್ಟಿಮನಿ, ಅಂಬುಜಮ್ಮ, ಕೆ.ಪಿ. ಭೂತಯ್ಯ, ಜಿ. ರಾಮಪ್ರಭು, ಫಕೀರಪ್ಪ ನೆತರ್‌, 2023ನೇ ಸಾಲಿನಲ್ಲಿ ಕೆ.ರಾಮಚಂದ್ರಪ್ಪ, ಕೃಷ್ಣಪ್ಪ ಪೂಜಾರ, ಕೆ.ಎಂ. ರಘುಪಾಲಯ್ಯ, ಮಲ್ಲೇಶಪ್ಪ ಭಜಂತ್ರಿ, ಅಮರೇಶ ತಿಮ್ಮಯ್ಯ, ಚಂದ್ರವ್ವ ನೀಲಪ್ಪನವರ, ಎಂ. ಬಡಪ್ಪ, ರುದ್ರಪ್ಪ ಸಾಳುಂಕೆ, ಚುಕ್ಕನಕಲ್ಲು ರಾಮಣ್ಣ, ತಿಪ್ಪಣ್ಣ ದೊಡ್ಡೆಗೌಡ.

2024ನೇ ಸಾಲಿನಲ್ಲಿ ಚಿತ್ರದುರ್ಗದ ಗುಗ್ ಮಲ್ಲಯ್ಯ, ಬೆಳಗಾವಿಯ ಭರಮಪ್ಪ ಸತ್ತೆನ್ನವರ, ದಾವಣಗೆರೆಯ ಬಾಲಮ್ಮ ಕಾಟಪ್ಪ, ವಿಜಯನಗರದ ಡಿ.ಎಂ. ಯರಿಸ್ವಾಮಿ, ಬಾಗಲಕೋಟೆಯ ಗ್ಯಾನಪ್ಪ ಮಾದರ, ತುಮಕೂರಿನ ಶಂಕರಪ್ಪ ಎ.ಬಿ, ವಿಜಯನಗರದ ಕೊಟ್ಗಿ ಹಾಲೇಶ್ವರ, ವಿಜಯಪುರದ ರುದ್ರಗೌಡ ಬಿರಾದಾರ, ಧಾರವಾಡದ ಚೆನ್ನವೀರಪ್ಪ ಮುದಲಿಂಗಣ್ಣವರ ಹಾಗೂ ಕೆ.ಹೊನ್ನೂರಸ್ವಾಮಿ ಅವರಿಗೆ ಪ್ರಶಸ್ತಿ ನೀಡಲಾಯಿತು.