ಸಾಮಾಜಿಕ ವೈಚಾರಿಕತೆ ಬಿತ್ತಿದ ದಲಿತ ಚಳವಳಿ: ಡಾ.ಕಲ್ಯಾಣಸಿರಿ ಭಂತೇಜಿ

| Published : May 02 2025, 11:45 PM IST

ಸಾರಾಂಶ

ಕರ್ನಾಟಕ ದಲಿತ ಚಳವಳಿ (ಪ್ರೊ.ಬಿ.ಕೃಷ್ಣಪ್ಪ) ವಾದದ ೫೦ ರ ಸಂಭ್ರಮ ಪ್ರಯುಕ್ತ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸೋಮವಾರ ಸಮಾವೇಶ ನೆರವೇರಿತು.

ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳವಳಿ ಪ್ರೊಬಿ.ಕೃಷ್ಣಪ್ಪ ವಾದದ 50 ಸಂಭ್ರಮ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದಲಿತ ಚಳವಳಿ ಕೇವಲ ದಲಿತರಿಗೆ ಮಾತ್ರವಲ್ಲದೆ ದಲಿತೇತರ ಸಮಾಜದ ಎಲ್ಲ ಸ್ಥರಗಳಲ್ಲೂ ವೈಚಾರಿಕತೆ ಬಿತ್ತುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡಿದೆ ಎಂದು ಮೈಸೂರು ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ ಹೇಳಿದ್ದಾರೆ.ಕರ್ನಾಟಕ ದಲಿತ ಚಳವಳಿ (ಪ್ರೊ.ಬಿ.ಕೃಷ್ಣಪ್ಪ) ವಾದದ ೫೦ ರ ಸಂಭ್ರಮ ಪ್ರಯುಕ್ತ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಅವರು ಆಶೀರ್ವದಿಸಿದರು.ದಲಿತರು ಸಾಮಾಜಿಕವಾಗಿ ಹಿಂದುಳಿದಿದ್ದಾರೆಂದು ಅಂದಿನ ದಲಿತ ಸಾಹಿತಿಗಳು ಸಾಹಿತ್ಯದ ಜತೆಗೆ ಚಳವಳಿಗಳನ್ನು ಹುಟ್ಟುಹಾಕಿದರು. ಅಂದಿನಿಂದ ಆರಂಭವಾದ ಕರ್ನಾಟಕ ದಲಿತ ಚಳವಳಿ ೫೦ ವರ್ಷಗಳನ್ನು ಪೂರೈಸಿ ಸಂಭ್ರಮಿಸುತ್ತಿದೆ. ತಿಳುವಳಿಕೆ ಮತ್ತು ಕಲಿಯುವಿಕೆ ಜೀವನದ ನಿರಂತರ ಪಾಠವಾಗಿದೆ ಎಂದರು.ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ದೈವಾರಾಧನೆ ಮೂಲಕ ಸ್ವಾಸ್ಥ್ಯ ಕಂಡುಕೊಂಡ ಸಮಾಜವೆಂದರೆ ಅದು ದಲಿತ ಸಮಾಜ. ಆದರೆ ಡಿಸಿ ಮನ್ನಾ ಭೂಮಿ ದಲಿತರಿಗೆ ಸಿಗುವಲ್ಲಿ ಅನೇಕ ಪ್ರಯತ್ನಗಳು ನಡೆದರೂ ಫಲಿಸಿಲ್ಲ. ಈ ಜಿಲ್ಲೆಯ ಎಲ್ಲ ಶಾಸಕರನ್ನು ಒಟ್ಟುಗೂಡಿಸಿಕೊಂಡು ಸಚಿವ ಕೃಷ್ಣೇ ಬೈರೇಗೌಡರೊಂದಿಗೆ ಸಭೆ ಕರೆದು ಸರ್ಕಾರ ನಿರ್ಣಯ ಕೈಗೊಳ್ಳುವಲ್ಲಿ ಸಂಪೂರ್ಣ ಪ್ರಯತ್ನ ನಡೆಸಲಾಗುವುದು ಎಂದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಚಳವಳಿ ಸಂಘರ್ಷಕ್ಕಾಗಿ ಅಲ್ಲ, ಸಂಘಟಿತರಾಗಿರಲು. ಹಾಗಾದಲ್ಲಿ ಡಾ. ಬಿ.ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆ ಫಲಿಸಲು ಸಾಧ್ಯ ಎಂದರು.ಕರ್ನಾಟಕ ದಲಿತ ಚಳವಳಿ ೫೦ ರ ಸಂಭ್ರಮ ಸಮಾವೇಶ -೨೦೨೫ ಸಮಿತಿಯ ಅಧ್ಯಕ್ಷ ಬಿ.ಕೆ. ವಸಂತ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೆರವಣಿಗೆ ಸ್ಮರಣ ಸಂಚಿಕೆ ಕೃತಿ ಬಿಡುಗಡೆ ಮಾಡಲಾಯಿತು. ಸಾಂಸ್ಕೃತಿಕ ತಂಡದ ಕಲಾವಿದರು ಕ್ರಾಂತಿ ಗೀತೆ ಹಾಡಿದರು.ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಿವೃತ್ತ ಡಿ.ವೈ.ಎಸ್.ಪಿ. ಸುಹೈಲ್ ಆಹಮದ್, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ, ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಮುಖರಾದ ಸತೀಶ್ ಕಾಶಿಪಟ್ಣ, ಕೃಷ್ಣಪ್ಪ ಸುಣ್ಣಾಜೆ, ಪ್ರೇಮಿ ಫೆರ್ನಾಂಡಿಸ್, ಸಂತೋಷ್ ಕುಮಾರ್, ರಾಜಾ ಚಂಡ್ತಿಮಾರ್, ಶಿವಕುಮಾರ್, ಪ್ರಸಾದ್ ಶೆಟ್ಟಿ ಎಣಿಂಜೆ, ಪಿ.ಎಸ್.ಶ್ರೀನಿವಾಸ್, ಅಕ್ಬರ್ ಬೆಳ್ತಂಗಡಿ, ಜಯಕೀರ್ತಿ ಜೈನ್ ಧರ್ಮಸ್ಥಳ, ಶೀನ ಬಂಗೇರ ಲಾಲ, ಶೇಖರ್ ಎಲ್., ನಜೀರ್, ಈಶ್ವರ ಬೈರ, ಸಿ.ಕೆ.ಚಂದ್ರಕಲಾ, ದಲಿತ ಸಂಘರ್ಷ ಸಮಿತಿಯ ಮಾಜಿ ಸಂಚಾಲಕರಾದ ಚೆನ್ನಕೇಶವ ಬೆಳ್ತಂಗಡಿ, ಎಸ್.ಬೇಬಿ ಸುವರ್ಣ, ಪದ್ಮನಾಭ ಗರ್ಡಾಡಿ, ಎನ್.ಕೆ.ಸುಂದರ ಲಾಲ, ಕೆ.ನೇಮಿರಾಜ್ ಕಿಲ್ಲೂರು ಸಹಿತ ಪ್ರಮುಖರು ಇದ್ದರು.ಸಮಿತಿ ಕಾರ್ಯದರ್ಶಿ, ಶಿಕ್ಷಕ ಸುಕೇಶ್ ಮಾಲಾಡಿ ಸ್ವಾಗತಿಸಿದರು. ರಾಜು ಕಕ್ಕೆಪದವು ನಿರೂಪಿಸಿದರು. ಶ್ರೀಧರ ಕಳೆಂಜ ಹಕ್ಕೊತ್ತಾಯ ವಾಚಿಸಿದರು.