Karnataka Gyan Vigyan Samiti State Level Awards Presentation
ಸೋಮವಾರಪೇಟೆ: ಬೆಂಗಳೂರಿನ ವಿಶ್ವ ಚೇತನ ಬಳಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕನ್ನಡ ಕಲಿಕಾ ಗಾನ ಕಲಾವಿದರ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚೆಗೆ ಚಾಮರಾಜನಗರ ಜಿಲ್ಲಾ ಕೊಳ್ಳೆಗಾಲದ ರೋಟರಿ ಭವನದಲ್ಲಿ ನಡೆಯಿತು. ವಿದ್ಯೆ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಕೊಡಗಿನ ಚೋವಂಡ ಚೋಂದಮ್ಮ ಪೂಣಚ್ಚ ಅವರಿಗೆ ರಾಷ್ಟ್ರೀಯ ಸಿದ್ಧಬುದ್ದ ಪ್ರಶಸ್ತಿ ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಸೋಮವಾರಪೇಟೆ ತಾಲೂಕಿನ ಮಂಕ್ಯ ಗ್ರಾಮದ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ ರಾಷ್ಟ್ರೀಯ ಭೀಮ್ ರಾವ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಾಮರಾಜನಗರ ಜಿಲ್ಲಾ ರೋಟರಿ ಅಧ್ಯಕ್ಷರಾದ ಬಿ. ಮಹದೇವ ಅಧ್ಯಕ್ಷತೆ ವಹಿಸಿದ್ದರು. ವಿಶ್ವಚೇತನ ಬಳಗದ ಅಧ್ಯಕ್ಷ ಡಾ. ಎಂ. ಶಿವಸ್ವಾಮಿ ಇದ್ದರು.