ಸಾರಾಂಶ
ಕರ್ನಾಟಕ ಕ್ರೀಡಾಕೂಟ-2025 (ಕರ್ನಾಟಕ ಒಲಿಂಪಿಕ್ಸ್)ನ ಸೈಕ್ಲಿಂಗ್ ಸ್ಪರ್ಧೆಯ ಮಹಿಳೆಯರ ಮತ್ತು ಪುರುಷರ ಟೀಮ್ ಟೈಮ್ ಟ್ರಯಲ್ ಸ್ಪರ್ಧೆ ಎರಡರಲ್ಲೂ ವಿಜಯಪುರ ಜಿಲ್ಲೆ ಚಿನ್ನದ ಪದಕಗಳನ್ನು ಗೆದ್ದುಗೊಂಡಿದೆ. ಧಾರವಾಡ ಮತ್ತು ಬಾಗಲಕೋಟೆಯ ಸೈಕ್ಲಿಸ್ಟ್‌ಗಳು ತಲಾ 1 ಚಿನ್ನಗಳನ್ನು ಗೆದ್ದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ-2025 (ಕರ್ನಾಟಕ ಒಲಿಂಪಿಕ್ಸ್)ನ ಸೈಕ್ಲಿಂಗ್ ಸ್ಪರ್ಧೆಯ ಮಹಿಳೆಯರ ಮತ್ತು ಪುರುಷರ ಟೀಮ್ ಟೈಮ್ ಟ್ರಯಲ್ ಸ್ಪರ್ಧೆ ಎರಡರಲ್ಲೂ ವಿಜಯಪುರ ಜಿಲ್ಲೆ ಚಿನ್ನದ ಪದಕಗಳನ್ನು ಗೆದ್ದುಗೊಂಡಿದೆ. ಧಾರವಾಡ ಮತ್ತು ಬಾಗಲಕೋಟೆಯ ಸೈಕ್ಲಿಸ್ಟ್‌ಗಳು ತಲಾ 1 ಚಿನ್ನಗಳನ್ನು ಗೆದ್ದುಕೊಂಡಿದ್ದಾರೆ.ಇಲ್ಲಿನ ಕೊಳಗಿರಿ ಮತ್ತು ಕುಕ್ಕೆಹಳ್ಳಿ ನಡುವಿನ 10 ಕಿ..ಮೀ. ರಸ್ತೆಯಲ್ಲಿ ಭಾನುವಾರ ಈ ಸೈಕ್ಲಿಂಗ್ ಸ್ಪರ್ಧೆ ನಡೆಯಿತು. ಉಡುಪಿ ಜಿಲ್ಲೆಯ ಮಟ್ಟಿಗೆ ಅಪರೂಪವಾಗಿರುವ ಮತ್ತು ಇಲ್ಲಿ ಪ್ರಥಮ ಬಾರಿಗೆ ನಡೆದ ಈ ಸ್ಪರ್ಧೆಯು ಸ್ಥಳೀಯ ಜನರ ಗಮನ ಸಳೆಯಿತು. ಡಿಸಿ ಡಾ. ವಿದ್ಯಾಕುಮಾರಿ ಮತ್ತು ಎಸ್ಪಿ ಡಾ.ಅರುಣ್ ಕುಮಾರ್ ಈ ಸ್ಪರ್ಧೆಗೆ ಚಾಲನೆ ನೀಡಿದರು.ಫಲಿತಾಂಶ ಹೀಗಿದೆ.
ಮಹಿಳೆಯರ ವಿಭಾಗ - 20 ಕಿಮೀ ಟೀಮ್ ಟೈಮ್ ಟ್ರಯಲ್: ಚಿನ್ನ - ವಿಜಯಪುರ, ಬೆಳ್ಳಿ - ಬೆಳಗಾವಿ, ಕಂಚು - ಮೈಸೂರು30 ಕಿ.ಮೀ. ಮಾಸ್ ಸ್ಟಾರ್ಟ್ ರೇಸ್: ಚಿನ್ನ- ಪಾಯಲ್ ಚವಾಣ್ (ಧಾರವಾಡ), ಬೆಳ್ಳಿ - ದಾನಮ್ಮ ಕೆ. ಗುರನ್ (ಬಾಗಲಕೋಟೆ), ಕಂಚು - ಗ್ಲೆಯೊನ್ನಾ ಏಂಜೆಲ್ ಡಿಸೋಜ (ಮೈಸೂರು).ಪುರುಷರ ವಿಭಾಗ- 40 ಕಿ.ಮೀ. ಟೀಮ್ ಟೈಮ್ ಟ್ರಯಲ್: ಚಿನ್ನ- ವಿಜಯಪುರ, ಬೆಳ್ಳಿ- ಬಾಗಲಕೋಟೆ, ಕಂಚು- ಮೈಸೂರು.50 ಕಿ.ಮೀ. ಮಾಸ್ ಸ್ಟಾರ್ಟ್ ರೇಸ್: ಚಿನ್ನ - ಅರುಣ್ ಕೆ.ಲಮಣಿ (ಬಾಗಲಕೋಟೆ), ಬೆಳ್ಳಿ - ಚರಿತ್ ಗೌಡ (ಮೈಸೂರು), ಕಂಚು- ನೀಲ್ ಐವರ್ ಡಿಸೋಜ (ಬೆಂಗಳೂರು).