ಸಾರಾಂಶ
ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಆತಿಥೇಯರ ಭರ್ಜರಿ ಪ್ರದರ್ಶನ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ರ 5ನೇ ದಿನ ಮಂಗಳವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾದವು. ಮೊದಲ ದಿನ ಪುರುಷರ 5 ಮತ್ತು ಮಹಿಳೆಯರ 6 ವಿಭಾಗಗಳಲ್ಲಿ ಫೈನಲ್ ನಡೆಯಿತು.ಒಟ್ಟು 13 ಸ್ಪರ್ಧೆಗಳಲ್ಲಿ ಮೈಸೂರು 4 ಚಿನ್ನದ ಪದಕ, ಉಡುಪಿ ಮತ್ತು ಬೆಂಗಳೂರು ತಲಾ 3 ಚಿನ್ನದ ಪದಕ ಮತ್ತು ಬೆಳಗಾವಿ 2 ಮತ್ತು ಯಾದಗಿರಿ 1 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡವು.ಕ್ರೀಡಾಸ್ಪರ್ಧೆಗಳಲ್ಲಿ ಇದುವರೆಗೆ ನಿರಾಸೆ ಮೂಡಿಸಿರುವ ಆತಿಥೇಯ ಉಡುಪಿ ಜಿಲ್ಲೆ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ 3 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ಗೆದ್ದು ಸ್ಥಳೀಯ ಕ್ರೀಡಾಪ್ರೇಮಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ. ಅದರಲ್ಲೂ ಮೂರೂ ಚಿನ್ನದ ಪದಕಗಳನ್ನು ಮಹಿಳಾ ಕ್ರೀಡಾಪಟುಗಳೇ ಗೆದ್ದುಕೊಂಡಿದ್ದಾರೆ.ಪುರುಷರ ವಿಭಾಗ:110 ಮೀ. ಹರ್ಡಲ್ಸ್: ಚಿನ್ನ - ಲೋಕೇಶ್ ದಾಮು (ಯಾದಗಿರಿ), ಬೆಳ್ಳಿ- ತೇಜಲ್ ಕೆ.ಆರ್. (ದ.ಕ.), ಕಂಚು- ಸಂತೋಷ್ ಕುಮಾರ್ (ಬೆಂಗಳೂರು).
200 ಮೀ. ಓಟ: ಚಿನ್ನ - ಗುರುಪ್ರಸಾದ್ (ಮೈಸೂರು), ಬೆಳ್ಳಿ- ಪ್ರಸನ್ನ ಕುಮಾರ್ (ಬೆಂಗಳೂರು), ಕಂಚು- ಧನುಷ್ ಡಿ. (ಉಡುಪಿ).800 ಮೀ. ಓಟ: ಚಿನ್ನ - ಕಮಲಾಕಣ್ಣನ್ ಎಸ್. (ಬೆಂಗಳೂರು), ಲೋಕೇಶ್ ಕೆ. (ರಾಮನಗರ), ಕಂಚು - ವಿನಾಯಕ ಅಂಗಡಿ (ಬೆಂಗಳೂರು).10,000 ಮೀ. ಓಟ: ಚಿನ್ನ- ವಿಜಯ ಸಾವರ್ಟಕರ್ (ಬೆಳಗಾವಿ), ಬೆಳ್ಳಿ- ಗುರುಪ್ರಸಾದ್ (ಬೆಂಗಳೂರು), ಕಂಚು - ಸಂದೀಪ್ ಟಿ. (ಬೆಂಗಳೂರು).ಲಾಂಗ್ ಜಂಪ್: ಚಿನ್ನ- ಝಾಫರ್ ಖಾನ್ (ಬೆಳಗಾವಿ), ಬೆಳ್ಳಿ- ಅನುಷ್ ಟಿ.ಆರ್. (ಉಡುಪಿ), ಸುಶಾನ್ ಜಿ. ಸುವರ್ಣ (ಬೆಂಗಳೂರು).ಡಿಸ್ಕಸ್ ತ್ರೋ: ಚಿನ್ನ - ಮೊಹಮ್ಮದ್ ಸಕ್ಲೈನ್ (ಮೈಸೂರು), ಬೆಳ್ಳಿ - ನಾಗೇಂದ್ರ ನಾಯ್ಕ್ (ಉಕ), ಕಂಚು - ಮೊಹಿತ್‌ರಾಜ್ (ಮೈಸೂರು).ಪೋಲ್‌ವಾಲ್ಟ್: ಚಿನ್ನ- ರಾಹುಲ್ ನಾಯ್ಕ್ (ಮೈಸೂರು), ಬೆಳ್ಳಿ- ಆದಿತ್ಯ ವಿ. ಎಂ. (ಬೆಂಗಳೂರು), ಕಂಚು - ಲೋಕೇಶ್ ರಾಥೋಡ್ (ಯಾದಗಿರಿ).
ಮಹಿಳಾ ವಿಭಾಗ:100 ಮೀ. ಹರ್ಡಲ್ಸ್: ಚಿನ್ನ - ಇಶಾ ಎಲಿಝೇಬೆತ್ ರೆಂಜಿತಾ (ಬೆಂಗಳೂರು), ಬೆಳ್ಳಿ- ದೀಕ್ಷಿತಾ ರಾಮಕೃಷ್ಣ (ದ.ಕ.), ಕಂಚು - ರಕ್ಷಿತಾ (ಉಡುಪಿ).200 ಮೀ. ಓಟ: ಚಿನ್ನ - ಜ್ಯೋತಿಕಾ (ಉಡುಪಿ), ಬೆಳ್ಳಿ- ಸ್ತುತು ಶೆಟ್ಟಿ (ಉಡುಪಿ), ಕಂಚು- ಮಮತಾ ಎಂ. (ಮೈಸೂರು).800 ಮೀ. ಓಟ: ಚಿನ್ನ- ವಿಜಯಕುಮಾರಿ ಜಿ.ಕೆ. (ಬೆಂಗಳೂರು), ಬೆಳ್ಳಿ- ದೀಪಶ್ರೀ (ದಕ), ರೇಖಾ ಬಸಪ್ಪ ಪಿರೋಜಿ (ದ.ಕ.).ಲಾಂಗ್‌ಜಂಪ್: ಚಿನ್ನ- ಪವಿತ್ರಾ ಜಿ. (ಉಡುಪಿ), ಬೆಳ್ಳಿ - ಐಶ್ವರ್ಯ ಪಾಟೀಲ್ (ದ.ಕ.), ಕಂಚು- ಶ್ರೀದೇವಿಕಾ ವಿ.ಎಸ್. (ಉಡುಪಿ).ಶಾಟ್‌ಪುಟ್: ಚಿನ್ನ - ಅಂಬಿಕಾ ವಿ. (ಮೈಸೂರು), ಬೆಳ್ಳಿ - ಬೃಂದಾ ಎಸ್. (ಮೈಸೂರು), ಕಂಚು- ಮಾದುರ್ಯ (ಉಡುಪಿ).ಜಾವೆಲಿನ್ ತ್ರೋ: ಚಿನ್ನ- ಶ್ರಾವ್ಯ (ಉಡುಪಿ), ಬೆಳ್ಳಿ- ಜೀವಿತಾ ಡಿ. (ದ.ಕ.), ಕಂಚು- ಸಿಂಚನ (ದ.ಕ.).