ಕರ್ನಾಟಕ ಓಲಿಂಪಿಕ್ಸ್ ಅಥ್ಲೆಟಿಕ್ಸ್: ದ.ಕ., ಬೆಳಗಾವಿಗೆ ಅವಳಿ ಚಿನ್ನ

| Published : Jan 24 2025, 12:45 AM IST

ಸಾರಾಂಶ

ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳ ಅಥ್ಲೇಟ್‌ಗಳು ತಲಾ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳ ಅಥ್ಲೀಟ್‌ಗಳು ಒಂದೊಂದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ - 2026 (ಕರ್ನಾಟಕ ಓಲಿಂಪಿಕ್ಸ್)ನ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳ ಅಥ್ಲೇಟ್‌ಗಳು ತಲಾ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಉಳಿದಂತೆ ಬೆಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳ ಅಥ್ಲೀಟ್‌ಗಳು ತಲಾ ಒಂದೊಂದು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

ಫಲಿತಾಂಶ ಹೀಗಿದೆ:

ಪುರುಷರ ವಿಭಾಗ:

400 ಮೀ. ಓಟ: ಚಿನ್ನ - ಶ್ರೀನಾಥ್‌ (ಬೆಂಗಳೂರು), ಬೆಳ್ಳಿ - ದಯಾನಂದ್ (ದಕ), ಕಂಚು - ಭುವನ್ ಪೂಜಾರಿ (ಬೆಂಗಳೂರು)

3000 ಮೀ. ಸ್ಟಿಪಲ್ ಚೇಸ್: ಚಿನ್ನ - ನಾಗರಾಜ ವೆಂಕಟೇಶ್‌ ದೀವಟೆ (ಧಾರವಾಡ), ಬೆಳ್ಳಿ - ಪಟಪ್ಪ ಚಂದ್ರಪ್ಪ (ಧಾರವಾಡ), ಕಂಚು - ಭೀಮ ಶಂಕರ್‌ (ಬೆಂಗಳೂರು)

1500 ಮೀ. ಓಟ: ಚಿನ್ನ - ವೈಭವ್‌ ಪಾಟೀಲ್‌ (ಬೆಳಗಾವಿ), ಬೆಳ್ಳಿ - ಕಮಲ್‌ ಎಸ್‌. (ಬೆಂಗಳೂರು), ಕಂಚು - ಕಲ್ಯಾಣ್‌ ಜೆ.ಆರ್. (ಬೆಂಗಳೂರು)

ಟ್ರಿಪಲ್‌ ಜಂಪ್‌: ಚಿನ್ನ - ಯಶಸ್‌ ಆರ್. ಗೌಡ (ದಕ), ಬೆಳ್ಳಿ - ರಾಧಾಕೃಷ್ಣ ಆರ್ (ಬೆಂಗಳೂರು), ಕಂಚು - ಅಬ್ದುಲ್‌ ಮುನಾಫ್‌ (ಬೆಂಗಳೂರು)

ಮಹಿಳೆಯರ ವಿಭಾಗ

400 ಮೀ. ಓಟ: ಚಿನ್ನ - ಮೇಘ (ಬೆಳಗಾವಿ), ಬೆಳ್ಳಿ - ಅಭಿಗ್ನ್ಯ ಪಿ. (ಶಿವಮೊಗ್ಗ), ಕಂಚು - ಎನ್.ಸಿ. ಮಾನಸ (ಬೆಂಗಳೂರು)

3000 ಮೀ. ಸ್ಟಿಪಲ್ ಚೇಸ್: ಚಿನ್ನ - ಎಚ್.ಇ. ದೀಕ್ಷಾ (ಶಿವಮೊಗ್ಗ), ಬೆಳ್ಳಿ - ನಕೋಶ ಮನ್ಗಾಂಕರ್ (ಬೆಳಗಾವಿ), ಕಂಚು - ಸ್ಪಂದನ ಪಿ. (ದಕ)

1500 ಮೀ. ಓಟ: ಚಿನ್ನ - ಸ್ಮಿತಾ ಡಿ. ಆರ್. (ಹಾಸನ), ಬೆಳ‍್ಳಿ - ರೇಖಾ ಬಸಪ್ಪ (ದಕ), ಕಂಚು - ಶಿಲ್ಪಾ (ಬೆಳಗಾವಿ)

ಟ್ರಿಪಲ್ ಜಂಪ್‌: ಚಿನ್ನ - ಪವಿತ್ರ ಜಿ. (ಉಡುಪಿ), ಬೆಳ್ಳಿ - ನಿತ್ಯಶ್ರೀ (ಬೆಂಗಳೂರು), ಕಂಚು - ಸ್ಮಿತಾ ಪ್ರಮೋದ್‌ ಕಾಕತ್ಕರ್ (ಬೆಳಗಾವಿ)

ಡಿಸ್ಕಸ್‌ ತ್ರೋ: ಚಿನ್ನ - ಸುಷ್ಮಾ ಬಿ. (ಮೈಸೂರು), ಬೆಳ್ಳಿ - ಸುಶಮ ಎಂ.ಎನ್. (ಮೈಸೂರು), ಕಂಚು - ಐಶ್ವರ್ಯ ಮಾರುತಿ ಬೆಂಡಿ (ದಕ)

ಹ್ಯಾಮರ್ ತ್ರೋ: ಚಿನ್ನ - ಅಮ್ರಿನ್‌ (ದಕ), ಬೆಳ್ಳಿ - ನಿಶೇಲ್‌ ಡೆಲ್ಫಿನ ಡಿಸೋಜ (ದಕ), ಕಂಚು - ಸ್ಪ್ರುಹ ನಾಯ್ಕ್ (ಬೆಳಗಾವಿ)