ಸಾರಾಂಶ
ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಮರ ನಿರೀಕ್ಷೆಯಂತೆ ಈ ರಾಜ್ಯ ಮಟ್ಟದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅರ್ಹವಾಗಿಯೇ 4 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಕೆ1 ಮತ್ತು ಕೆ2 ಸ್ಪರ್ಧೆಯಲ್ಲಿ ಅವರು ಎದುರಾಳಿಗಿಂತ 25 ಮೀ.ಗೂ ಹೆಚ್ಚು ಅಂತರದಿಂದ ಪದಕ ಗೆದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಕ್ರೀಡಾಕೂಟ (ರಾಜ್ಯ ಒಲಿಂಪಿಕ್ಸ್)ದ ಮೊದಲ ದಿನವೇ ಕಯಾಕಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಸಮರ ಎ. ಚಾಕೋ 4 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ.ಇಲ್ಲಿನ ಉಪ್ಪೂರು ಸುವರ್ಣ ನದಿಯಲ್ಲಿ ಶುಕ್ರವಾರ ಕಯಾಕಿಂಗ್ ಮತ್ತು ಕೆನೋಯಿಂಗ್ ಸ್ಪರ್ಧೆ ಆರಂಭವಾಯಿತು. ಕಯಾಕಿಂಗ್‌ನಲ್ಲಿ ಬೆಂಗಳೂರಿನ ಸಮರ 200 ಮೀ. ಕೆ1 (ಸಿಂಗಲ್ಸ್) ಮತ್ತು ಕೆ (ಡಬಲ್ಸ್) ಹಾಗೂ 500 ಮೀ. ಕೆ1 ಮತ್ತು ಕೆ2ನಲ್ಲಿ ಸುಲಭವಾಗಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.
ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಮರ ನಿರೀಕ್ಷೆಯಂತೆ ಈ ರಾಜ್ಯ ಮಟ್ಟದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅರ್ಹವಾಗಿಯೇ 4 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಕೆ1 ಮತ್ತು ಕೆ2 ಸ್ಪರ್ಧೆಯಲ್ಲಿ ಅವರು ಎದುರಾಳಿಗಿಂತ 25 ಮೀ.ಗೂ ಹೆಚ್ಚು ಅಂತರದಿಂದ ಪದಕ ಗೆದ್ದರು.ಹರಿಣಿಗೆ 2 ಚಿನ್ನ, 2 ಬೆಳ್ಳಿ:
ಸಮರ ಅವರ ಡಬಲ್ಸ್ ಜೋಡಿ ಬೆಂಗಳೂರು (ಗ್ರಾ) ಕ್ರೀಡಾಪಟು ಹರಿಣಿ ಸ್ವಾಮಿನಾಥನ್ 200 ಮತ್ತು 500 ಮೀ. ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಎರಡೂ ಡಬಲ್ಸ್‌ನಲ್ಲಿ ಸಮರ ಜೊತೆ ಚಿನ್ನದ ಪದಕಗಳನ್ನು ಗೆದ್ದುಕೊಂಡರು.ಇಂದು ಡ್ರಾಗನ್ ಬೋಟ್ ಸ್ಪರ್ಧೆ: ಶನಿವಾರ ಮತ್ತು ಭಾನುವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ಕಯಾಕ್, ಕೆನೋಯ್ ಮತ್ತು ಡ್ರಾಗನ್ ಬೋಟ್ ಸ್ಪರ್ಧೆಗಳು ನಡೆಯಲಿವೆ.
ಶುಕ್ರವಾರದ ಫಲಿತಾಂಶ:ಕಯಾಕಿಂಗ್: 200 ಮೀ. ಕೆ1: ಚಿನ್ನ - ಸಮರ ಕೆ. ಚಾಕೋ, ಬೆಳ್ಳಿ - ಹರಿಣಿ ಸ್ವಾಮಿನಾಥನ್, ಕಂಚು - ಆದ್ಯ ಕುಮಾರಿ
200 ಮೀ. ಕೆ2: ಚಿನ್ನ - ಸಮರ ಕೆ. ಚಾಕೋ - ಹರಿಣಿ ಸ್ವಾಮಿನಾಥನ್, ಬೆಳ್ಳಿ - ಎಂ. ತೇಜಶ್ರೀ - ಅದ್ವಿತ ತನ್ವಾನಿ, ಕಂಚು: ಅಬ್ಯತ ಕೆ.ಪ್ರಶಾಂತ್ - ಆವ್ಯ ಬಿ.ಮನು500 ಮೀ. ಕೆ1: ಚಿನ್ನ - ಸಮರ ಕೆ. ಚಾಕೋ, ಬೆಳ್ಳಿ - ಹರಿಣಿ ಸ್ವಾಮಿನಾಥನ್, ಕಂಚು - ಅದ್ವಿತ ತನ್ವಾನಿ
500 ಮೀ. ಕೆ2: ಚಿನ್ನ - ಸಮರ ಕೆ. ಚಾಕೋ - ಹರಿಣಿ ಸ್ವಾಮಿನಾಥನ್, ಬೆಳ್ಳಿ - ಎಂ. ತೇಜಶ್ರೀ - ಅದ್ವಿತ ತನ್ವಾನಿ, ಕಂಚು: ಅಬ್ಯತ ಕೆ.ಪ್ರಶಾಂತ್ - ಆವ್ಯ ಬಿ.ಮನು.17ಸಮರ - 4 ಚಿನ್ನ ಗೆದ್ದ ಸಮರ ಚಾಕೋ
17ವಿನ್ನರ್- 500 ಮೀ. ಕೆ2 ಸ್ಪರ್ಧೆಯ ವಿಜೇತರು