ಚಿಕ್ಕಮಗಳೂರುಅಪರಾಧ ಪತ್ತೆಯಲ್ಲಿ ಕರ್ನಾಟಕ ಪೊಲೀಸ್‌ ಅಳವಡಿಸಿರುವ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದೆ. ದೇಶದ ವಿವಿಧ ರಾಜ್ಯದ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌ ಹೇಳಿದರು.

ನಗರದ ರಾಮನಹಳ್ಳಿಯ ಡಿಎಆರ್‌ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಅಪರಾಧ ಪತ್ತೆಯಲ್ಲಿ ಕರ್ನಾಟಕ ಪೊಲೀಸ್‌ ಅಳವಡಿಸಿರುವ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದೆ. ದೇಶದ ವಿವಿಧ ರಾಜ್ಯದ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌ ಹೇಳಿದರು.ಚಿಕ್ಕಮಗಳೂರು ನಗರದ ರಾಮನಹಳ್ಳಿಯ ಡಿಎಆರ್‌ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್‌ ಧ್ವಜ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕ ಪೊಲೀಸ್‌ ಅಪರಾಧ ಪತ್ತೆಯಲ್ಲಿ ದೇಶದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಅನೇಕ ನಿರ್ದಶನಗಳಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಾ ಪ್ರತಿ ದಿನ ಸೈಬರ್‌ ಕ್ರೈಮ್‌ ನಡಿ ಹಣ ಕಳೆದುಕೊಂಡವರಿಗೆ ಮರಳಿ ಹಣ ಕೊಡಿಸುವ ಕಾರ್ಯವನ್ನು ತಂತ್ರಜ್ಞಾನ ಬಳಕೆಯಿಂದ ಪೊಲೀಸ್‌ ಇಲಾಖೆ ಮಾಡುತ್ತಿದೆ.ರಾಜ್ಯ ಪೊಲೀಸ್‌ ದೇಶದಲ್ಲಿ ಮೊದಲ ಡ್ರೋಣ್‌ ಪಡೆ ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಪೊಲೀಸ್‌ ಇಲಾಖೆ ಕಾರಣ. ರಾಜ್ಯ ಸರ್ಕಾರ ಪೊಲೀಸರ ಕ್ಷೇಮಕ್ಕಾಗಿ ವಿಶೇಷ ಸಂದರ್ಭದಲ್ಲಿ ರಜೆ ಘೋಷಣೆ ಮಾಡಿದೆ. ಈ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ವೃತ್ತಿ ಮತ್ತು ಕುಟುಂಬದ ಉತ್ತಮ ನಿರ್ವಹಣೆಗೆ ಸಹಕಾರಿಯಾಗಿದೆ. ಆರೋಗ್ಯ ಸಂಜೀವಿನಿ ಮೂಲಕ ಪೊಲೀಸರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೇವೆ ನೀಡುತ್ತಿದೆ. ಸಾರ್ವಜನಿಕರು ಪೊಲೀಸರಿಗೆ ನೈತಿಕ ಮತ್ತು ಆರ್ಥಿಕವಾಗಿ ಬೆಂಬಲ ನೀಡುವ ಕಾರ್ಯ ಆಗಬೇಕು ಎಂದರು.

ಜಿಪಂ ಸಿಇಒ ಎಚ್‌.ಎಸ್‌. ಕೀರ್ತನಾ ಮಾತನಾಡಿ, ಪೊಲೀಸ್‌ ಇಲಾಖೆ ಅಧಿಕಾರಿ ಸಿಬ್ಬಂದಿ ಒಂದು ಹಬ್ಬ ಆಚರಣೆ ಮಾಡದೇ ಸಮಾಜಕ್ಕೆ ದುಡಿಯುತ್ತಿದ್ದಾರೆ. ಪೊಲೀಸ್‌ ಇಲಾಖೆ ಅಧಿಕಾರಿ ಸಿಬ್ಬಂದಿ ಹುಟ್ಟುಹಬ್ಬ ಆಚರಣೆಗೂ ಆದೇಶ ಬರಬೇಕಾದ ವ್ಯವಸ್ಥೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಂಡರೆ ಪೊಲೀಸರಿಗೆ ಸ್ವಲ್ಪಮಟ್ಟಿಗೆ ಕಾರ್ಯದ ಒತ್ತಡ ಕಡಿಮೆ ಆಗಬಹುದು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿ.ಟಿ. ಜಯಕುಮಾರ್‌, ಮುಖ್ಯ ಅತಿಥಿಯಾಗಿ ನಿವೃತ್ತ ಎಆರ್‌ಎಸ್‌ ಐ ತೌಫಿಕ್‌ ಅಹಮದ್‌, ಸಿಡಿಎ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಮೊದಲಾದವರಿದ್ದರು.

----ಬಾಕ್ಸ್‌--

ಜಿಲ್ಲಾ ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಯಲ್ಲಿ ₹38.99 ಲಕ್ಷ

ಪೊಲೀಸ್‌ ಧ್ವಜ ದಿನಾಚರಣೆ ವೇದಿಯಲ್ಲಿ ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಯ ವಾರ್ಷಿಕ ವರದಿಯನ್ನು ಜಿಲ್ಲಾ ಅಧೀಕ್ಷಕ ಜಿತೇಂದ್ರ ಕುಮಾರ್‌ ದಯಾಮ ಮಂಡಿಸಿದರು.

2025-26ನೇ ಸಾಲಿನಲ್ಲಿ ಪೊಲೀಸ್‌ ಧ್ವಜ ಮಾರಾಟದಿಂದ ₹26.52 ಲಕ್ಷ ಸಂಗ್ರಹವಾಗಿದ್ದು, ಈ ಪೈಕಿ ಶೇ.50 ರಷ್ಟು ನಿಧಿ ಯನ್ನು ಕೇಂದ್ರ ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಗೆ ಸಲ್ಲಿಸಲಾಗಿದೆ. ₹37.49 ಲಕ್ಷ ಉಳಿದಿದೆ.

2025-26ನೇ ಸಾಲಿನಲ್ಲಿ ಪೊಲೀಸ್‌ ವೈದ್ಯಕೀಯ ವೆಚ್ಚಕ್ಕೆ ₹6.61 ಲಕ್ಷ ನೀಡಲಾಗಿದೆ. ಮೃತ ನಿವೃತ್ತ ಪೊಲೀಸ್‌ ಸಿಬ್ಬಂದಿ ಹಾಗೂ ಅವರ ಪತ್ನಿ ಶವ ಸಂಸ್ಕಾರಕ್ಕೆ ತಲಾ ₹10 ಸಾವಿರ ದಂತೆ 15 ಮಂದಿಯ ಕುಟುಂಬಕ್ಕೆ ₹1.50 ಲಕ್ಷ ನೀಡಲಾಗಿದೆ.

ಉಳಿದಂತೆ ಉಳಿತಾಯ ಖಾತೆಯಲ್ಲಿ ₹29.37 ಲಕ್ಷ, ಎಫ್‌ಡಿ(ನಿಶ್ಚಿತ ಠೇವಣಿ) ಖಾತೆಯಲ್ಲಿ ₹9.61 ಲಕ್ಷ ಸೇರಿದಂತೆ ಒಟ್ಟು ₹38.99 ಲಕ್ಷ ರು. ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು.

--- ಬಾಕ್ಸ್‌---

ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ 8 ತುಕಡಿ ಭಾಗಿ

ಡಿಎಆರ್‌ ಪೊಲೀಸ್‌ ನಿರೀಕ್ಷಕ ಎಚ್‌.ಡಿ.ರುದ್ರೇಶ್‌ ನೇತೃತ್ವದಲ್ಲಿ ಕವಾಯತು ನಡೆಯಿತು. ಎಸ್‌ಐ ಕೆ.ಆರ್‌. ಶಶಿಧರ್‌ (ಡಿಎಆರ್‌), ಪಿಎಸ್‌ಐ ರಘು (ನಗರ ಠಾಣೆ), ಕಳಸದ ಪಿಎಸ್‌ಐ ಗೆನೋಜಾ(ಮಹಿಳಾ ತುಕಡಿ), ಪಿಎಸ್‌ಐ ಗಜೇಂದ್ರ (ಅಜ್ಜಂಪುರ), ಪಿಎಸ್‌ಐ ಎಚ್‌.ಆರ್‌.ಓಂಕಾರಪ್ಪ(ಗ್ರಾಮಾಂತರ ಠಾಣೆ), ಚಂದ್ರಶೇಖರ್‌ ಅಮ್ಮಿನಬಾವಿ (ಡಿಎಆರ್‌), ಕೆ.ಎನ್‌.ಚಲವಾದಿ(ಡಿಎಆರ್‌),ಎಚ್‌.ಆರ್‌.ಆನಂದ್‌ (ಡಿಎಆರ್‌) 8 ತುಕಡಿಗಳ ನೇತೃತ್ವ ವಹಿಸಿದ್ದರು.

ಇನ್ನೂ ಧ್ವಜಪಡೆ ನಾಯಕತ್ವವನ್ನು ಆರ್‌ಎಸ್‌ಐ ವಿಠ್ಠಲ್‌ ಗುಡಿ ವಹಿಸಿದ್ದರು. ಪ್ರಕಾಶ್‌ ಎಸ್‌,ನಾಯ್ಕ್‌ (ರಾಷ್ಟ್ರಧ್ವಜ), ಸಂತೋಷ್‌ ಕುಮಾರ್‌ ಮಹಾದೇವಹಳ್ಳಿ (ಪೊಲೀಸ್‌ ಧ್ವಜ), ಧನರಾಜ್‌ ನಾಯ್ಕ್‌, ಪವನ್‌ ಕುಮಾರ್‌, ಪವನ್‌ ನಾಯ್ಕ್‌,ಜಿಎಂ ರೋಹಿತ್‌ ಬೆಂಗಾವಲು ಪಡೆಯಲ್ಲಿ ಕಾರ್ಯನಿರ್ವಹಿಸಿದರು.(ಫೋಟೋ: ಎರಡು ಫೋಟೋ ಬಳಸಬಹುದು)