38ನೇ ತಂಡದ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

| Published : Mar 03 2024, 01:30 AM IST

38ನೇ ತಂಡದ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದ ತರಬೇತಿ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಅಧಿಕಾರಿಗಳು ಕಾನೂನು ಬದ್ಧರಾಗಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ ಸಮಾಜ ಹಾಗೂ ದೇಶ ಸೇವೆಯನ್ನು ಮಾಡುವಂತೆ ಕರೆ ನೀಡಿದರು.

ಫೋಟೋ- 2ಎಂವೈಎಸ್3

ತರಬೇತಿ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಅವರು ವಿಜಯಕ್ರಾಂತಿ ಅವರಿಗೆ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಬಹುಮಾನ ವಿತರಿಸಿದರು. ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಉಪ ನಿರ್ದೇಶಕ ಎನ್. ನಿರಂಜನ ರಾಜ್ ಅರಸ್ ಇದ್ದರು.

----

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ (ಕೆಪಿಎ) 38ನೇ ತಂಡದ ಮೂವರು ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಮೂವರು ಅಬಕಾರಿ ಉಪಾಧೀಕ್ಷಕರು ಸೇರಿದಂತೆ ಒಟ್ಟು 6 ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನವು ಶನಿವಾರ ಜರುಗಿತು.

ಒಟ್ಟು 6 ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪೂರೈಸಿದ್ದು, ಇದರಲ್ಲಿ 4 ಪುರುಷ ಹಾಗೂ 2 ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದರು. ಪ್ರೊ. ಡಿವೈಎಸ್ಪಿಗಳಾದ ವಿಜಯಕ್ರಾಂತಿ, ಗೀತಾ ಪಾಟೀಲ್ ಮತ್ತು ಮರ್ತುಜಾ ಖಾದ್ರಿ ಹಾಗೂ ಅಬಕಾರಿ ಉಪಾಧೀಕ್ಷಕರಾದ ಬಿ. ಹರ್ಷರಾಜ, ಟಿ. ಕೀರ್ತಿಕುಮಾರ್ ಮತ್ತು ಸಂತೋಷ್ ಮೋಡಗಿ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದ ತರಬೇತಿ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಅಧಿಕಾರಿಗಳು ಕಾನೂನು ಬದ್ಧರಾಗಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ ಸಮಾಜ ಹಾಗೂ ದೇಶ ಸೇವೆಯನ್ನು ಮಾಡುವಂತೆ ಕರೆ ನೀಡಿದರು.

ನಂತರ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಫುಟ್ ಬಾಲ್ ಗ್ರೌಂಡ್, ರನ್ನಿಂಗ್ ಟ್ರಾಕ್, ಪಿಟಿ ನರ್ಸರಿ, ಡ್ರಿಲ್ ನರ್ಸರಿ, ಮೆಗಾ ಕ್ಲಾಸ್ ರೂಮ್, ಯೋಗ ಹಾಲ್ ಹಾಗೂ ನವೀಕೃತ ನೇತ್ರಾವತಿ ಬ್ಲಾಕ್ ಅನ್ನು ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಉದ್ಘಾಟಿಸಿಸಿದರು.

ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಉಪ ನಿರ್ದೇಶಕ ಎನ್. ನಿರಂಜನ ರಾಜ್ ಅರಸ್, ಸಹಾಯಕ ನಿರ್ದೇಶಕರಾದ ಟಿ. ಕುಮಾರ, ಎಂ. ಶಿವಶಂಕರ್, ನರಸಿಂಹ ವಿ. ತಾಮ್ರಧ್ವಜ, ಎಂ.ಎಚ್. ಖಾನ್, ಎಚ್.ಎಸ್. ರೇಣುಕಾರಾಧ್ಯ, ಎಸ್. ವೆಂಕಟೇಶ್, ಕೆ.ಎಂ. ಸೋಮಶೇಖರ್, ಎನ್. ಸುದರ್ಶನ ಮೊದಲಾದವರು ಇದ್ದರು.

----

ಬಾಕ್ಸ್...

ವಿಜಯಕ್ರಾಂತಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ

ಪ್ರೊ. ಡಿವೈಎಸ್ಪಿ(ಸಿವಿಲ್) ವಿಜಯಕ್ರಾಂತಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪಡೆದರು. ಮುಖ್ಯಮಂತ್ರಿಗಳು ಟ್ರೋಫಿ ಹಾಗೂ ಮುಖ್ಯಮಂತ್ರಿಗಳ ಖಡ್ಗ, ಡಿಜಿ ಮತ್ತು ಐಜಿಪಿ ಅವರ ಬೇಟನ್, ನಿವೃತ್ತ ಡಿಜಿ ಮತ್ತು ಐಜಿಪಿ ಗರುಡಾಚಾರ್ ನಗದು ಬಹುಮಾನ ಪಡೆದರು. ಅಲ್ಲದೆ, ಉತ್ತಮ ಫೈರಿಂಗ್ ಬಹುಮಾನ, ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ- ಡಿಜಿ ಮತ್ತು ಐಜಿಪಿ ಕಪ್ ಹಾಗೂ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಸಹ ವಿಜಯಕ್ರಾಂತಿ ತಮ್ಮದಾಗಿಸಿಕೊಂಡರು.