ಸಾರಾಂಶ
ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ತಮಟೆ ಬಡಿದು ಆಕ್ರೋಶಕನ್ನಡಪ್ರಭ ವಾರ್ತೆ ಚಾಮರಾಜನಗರ
ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಹಾಕುವಂತೆ ಹೋರಾಟ ಮಾಡುತ್ತಿದ್ದ ಕನ್ನಡ ಚಳವಳಿಗಾರರನ್ನು ರಾಜ್ಯ ಸರ್ಕಾರ ಬಂಧಿಸಿ ಮೊಕದ್ದಮೆ ಹೂಡಿರುವುದನ್ನು ಖಂಡಿಸಿ ನಗರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ, ತಮಟೆ ಬಾರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಹಾಕುವಂತೆ ಹೋರಾಟ ಮಾಡುತ್ತಿದ್ದ ಕನ್ನಡ ಚಳವಳಿಗಾರರನ್ನು ರಾಜ್ಯ ಸರ್ಕಾರ ಬಂಧಿಸಿ ಮೊಕದ್ದಮೆ ಹೂಡಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ ಸರ್ಕಾರ ಮಾಡಬೇಕಾದ ಕೆಲಸವನ್ನು ಕನ್ನಡ ಚಳವಳಿಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.ಇದನ್ನು ಸಹಿಸದೆ ಹೋರಾಟಗಾರರನ್ನು ಬಂಧಿಸಿದೆ. ರಾಜ್ಯಸರ್ಕಾರಕ್ಕೆ ಕಾವೇರಿ, ಕೃಷ್ಣ, ಹೋರಾಟಗಾರರು, ರೈತರು ಬೇಕಾಗಿಲ್ಲ. ಇದೊಂದು ಕನ್ನಡ ವಿರೋಧಿ ಸರ್ಕಾರ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮಳೆ ಅಭಾವದಿಂದ ರಾಜ್ಯದಲ್ಲಿ ಜಲಾಶಯಗಳು ಬರಿದಾಗುತ್ತಿದ್ದು, ತರಕಾರಿ, ಹೂವು ಸೇರಿ ಎಲ್ಲ ರೀತಿಯ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ರಾಜ್ಯದಲ್ಲಿ ನೀರಿನ ಅಭಾವ ಇದ್ದು, ಮುಂದಿನ ದಿನಗಳಲ್ಲಿ ತೀವ್ರ ಬರಗಾಲ ಬರಲಿದೆ. ಹೀಗಾಗಿ ಕರ್ನಾಟಕ ಸರ್ಕಾರ ಎಚ್ಚೆತ್ತುಗೊಂಡು ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಬಂಧಿಸಿರುವ ಕನ್ನಡ ಚಳವಳಿಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್ , ಚಾ.ರಾ.ಕುಮಾರ್, ರವಿಚಂದ್ರಪ್ರಸಾದ್ ಕಹಳೆ, ಗು.ಪುರುಷೋತ್ತಮ್, ಲಿಂಗರಾಜು, ರಾಚಪ್ಪ, , ಪ್ರಕಾಶ್, ವೀರಭದ್ರ, ಸಾಗರ್ ರಾವತ್, ಮಂಜು, ತಾಂಡವಮೂರ್ತಿ ಭಾಗವಹಿಸಿದ್ದರು.
ನಾರಾಯಣಗೌಡ ಬಿಡುಗಡೆಗೆ ಪ್ರತಿಭಟನೆಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಟಿ.ರಮೇಶ್ ಬಾಬುಗೆ ಮನವಿ ಸಲ್ಲಿಸಿದರು.ಕರವೇ ತಾಲೂಕು ಘಟಕ ಅಧ್ಯಕ್ಷ ಸುರೇಶ್ ನಾಯಕ್ ಮಾತನಾಡಿ ನಾಮಫಲಕಗಳಲ್ಲಿ ಕನ್ನಡವೇ ಮುಖ್ಯವಾಗಿರಬೇಕೆಂದು ಪ್ರತಿಭಟನೆ ನಡೆಸಿದ ಕರವೇ ಮುಖಂಡರ ಬಂಧನವನ್ನು ಖಂಡಿಸಿ, ಕೂಡಲೇ ಬಂಧಿತ ಹೋರಾಟಗಾರರನ್ನು ಬಿಡಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.ಕರವೇ ರಾಜೇಂದ್ರ ವಿ ನಾಯಕ,ನಾಗರಾಜು,ಜಗದೀಶ್ ,ಉಸ್ಮಾನ್,ನಟರಾಜೇಗೌಡ,ಮಹೇಶ,ಸುರೇಶ,ನಾಗರಾಜು ಮಂಜುನಾಥ್,ಸಿದ್ದು,ಜವರಶೆಟ್ಟಿ, ಮಹೇಶ, ಹೊಸಹಳ್ಳಿಹುಂಡಿ ಕೃಷ್ಣಮೂರ್ತಿ, ಸತೀಶ್ ಇದ್ದರು.ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಹಾಕುವಂತೆ ಹೋರಾಟ ಮಾಡುತ್ತಿದ್ದ ಕನ್ನಡ ಚಳವಳಿಗಾರರನ್ನು ರಾಜ್ಯ ಸರ್ಕಾರ ಬಂಧಿಸಿ ಮೊಕದ್ದಮೆ ಹೂಡಿರುವುದನ್ನು ಖಂಡಿಸಿ ನಗರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.