ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಪಕ್ಷದ ಸದಸ್ಯತ್ವ ನೋಂದಣೆ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದ್ದು ತನ್ಮೂಲಕ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳುವಂತೆ ಮಾಡಬೇಕು. ಕಾಂಗ್ರೇಸ್ ಮುಕ್ತ ಕರ್ನಾಟಕವನ್ನಾಗಿಸಲು ಪಣತೊಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.ನಗರ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು ತಮಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸೀಕಲ್, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಕೇವಲ ೨-೩ ಸಾವಿರ ಸದಸ್ಯತ್ವ ನೋಂದಣಿಯಾಗಿತ್ತು. ಆದರೆ ಇಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೦ ಸಾವಿರ ಸದಸ್ಯತ್ವ ನೋಂದಣಿಯಾಗಿದೆ ಎಂದರು.
ಜನರ ಬೇಬಿಗೆ ಕತ್ತರಿಕಾಂಗ್ರೆಸ್ ಸರ್ಕಾರ ಜನವಿರೋಧಿ ಧೋರಣೆ ಮತ್ತು ಆಡಳಿತವನ್ನು ನೀಡುತ್ತಿದ್ದು ಒಂದೆಡೆ ಹಲವು ಗ್ಯಾರಂಟಿಗಳ ನೆಪದಲ್ಲಿ ಅದಕ್ಕೆ ಹಣಕಾಸನ್ನು ಸರಿದೂಗಿಸಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮತಗಳ್ಳತನ ಆರೋಪ ಮಾಡಿರುವ ರಾಹುಲ್‌ಗಾಂಧಿ ಇದಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುತ್ತಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಎಷ್ಟು ಸ್ಥಾನಗಳನ್ನು ಪಡೆದಿದ್ದಾರೆಂದು ಅವರು ಮೊದಲು ತಿಳಿಯಬೇಕು ಎಂದರು.ಇಂದಿರಾಗಾಂಧಿ ಮತಗಳ್ಳತನ
ಮತಗಳ್ಳತನ ಏನಾದರೂ ಮೊದಲು ಪ್ರಾರಂಭವಾಗಿದ್ದರೆ ಅದು ಕಾಂಗ್ರೆಸ್‌ನಿಂದ. ಇಂದಿರಾಗಾಂಧಿಯವರಿಂದಲೇ, ಆಗ ಗೆದ್ದು ಅಧಿಕಾರ ಪಡೆದು ನಂತರ ಅದೇ ಮತಗಳ್ಳತನದಿಂದ ಅಧಿಕಾರವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳುವಂತಾಯಿತೆಂಬುದನ್ನು ಮೊದಲು ರಾಹುಲ್ ಗಾಂಧಿ ತಿಳಿದುಕೊಳ್ಳಲಿ ಎಂದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಾರ್ಯಕ್ರಮವೊಂದರಲ್ಲಿ ಮಹದೇವಪುರ ಕ್ಷೇತ್ರ ಮತಕಳ್ಳತನದ ಬಗ್ಗೆ ನುಡಿದಾಗ ನಮ್ಮದೇ ಸರ್ಕಾರವಿದ್ದಾಗ ಮತದಾರರ ಪಟ್ಟಿಯನ್ನು ಕ್ರೂಡೀಕರಿಸಿ ತಯಾರಿಸಲಾಗಿತ್ತು ಆಗ ಅಧಿಕಾರಿಗಳು ನಮ್ಮವರೇ ಯಾಗಿದ್ದು ಆಗ ನಮ್ಮವರು ಮತದಾರರ ಕರಡು ಪಟ್ಟಿ ತಯಾರಾದಾಗ ಚುನಾವಣಾ ಆಯೋಗಕ್ಕೆ ಆಗಲೇ ತಕರಾರು ಅರ್ಜಿ ಯಾಕೆ ಸಲ್ಲಿಸಿಲ್ಲವೆಂದು ಪಶ್ನಿಸಿರುವುದು ಲೋಪ ಕಾಂಗ್ರೇಸ್ ಪಕ್ಷದಲ್ಲೇ ಇದೆ ಎಂಬುದು ಸಾಬೀತಾಗಿದೆ ಅದನ್ನು ಮುಚ್ಚಿಹಾಕಲು ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆಂದು ಕಿಡಿಕಾಡಿದರು.
ಅಭ್ಯರ್ಥಿಯನ್ನು ಗೆಲ್ಲಿಸಬೇಕುಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಮಾತನಾಡಿ, ಬಿಜೆಪಿಯಿಂದ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಲಿ ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಮೊದಲ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಬೂತ್ ಮಟ್ಟದಿಂದ ಸಂಘಟನೆ ಮಾಡಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸತ್ಯನಾರಾಯಣ ಮಹೇಶ್, ಅರುಣ್‌ಬಾಬು, ಗ್ರಾಮಾಂತರ ಮಂಡಲ ರಾಜಣ್ಣ, ಕೆ.ಎಂ.ರಾಜಶೇಖರರೆಡ್ಡಿ, ಬಿಜೆಪಿ ಗ್ರಾಮಾಂತರ ಮಂಡಳ ಅಧ್ಯಕ್ಷ ಆನಂದಗೌಡ, ಗೋವಿಂದರಾಜು, ಗಾಜಲಶಿವ, ದೇವರಾಜ್, ಕುರುಟಹಳ್ಳಿ ಡಾಬಾ ಮಂಜುನಾಥ್, ಮಹೇಶ್‌ಬೈ, ಸದಾಶಿವಾರೆಡ್ಡಿ, ಸುನೀಲ್, ಪಂಕಜಾ ಕಾರ್ಯಕರ್ತರು ಉಪಸ್ಥಿತರಿದ್ದರು.