ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನವೋದಯ ಸಾಹಿತ್ಯ ಚಳವಳಿ ಜನಕ ರಾಷ್ಟ್ರಕವಿ ಕುವೆಂಪು ಅವರು ಯುವ ಕವಿಗಳಿಗೆ ಸಾಹಿತಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ ವಿ. ಭೈರಿ ತಿಳಿಸಿದರು.ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕರ್ನಾಟಕ ಸಂಭ್ರಮ 50 ಸಾಂಸ್ಕೃತಿಕ ವೇದಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ನಮನ ಮತ್ತು ಓ ನನ್ನ ಚೇತನ ಸಾಂಸ್ಕತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ಅವರು 1924ರಲ್ಲಿ ನಾಡಗೀತೆ ರಚಿಸಿದಾಗ ಅವರಿಗೆ 20 ವರ್ಷ. ಕನ್ನಡದ ಮಹಾಜ್ಞಾನಿಗಳಾದ ಕುವೆಂಪು ನಮ್ಮ ಕನ್ನಡದ ಸಾಹಿತ್ಯ ಮತ್ತು ಸಂಸ್ಕತಿಯನ್ನು ಶ್ರೀಮಂತಗೊಳಿಸಿದ್ದಾಗಿ ಹೇಳಿದರು.ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನಲ್ಲೂ ಭಾಷಾಭಿಮಾನ ಇರಬೇಕು. 1973ರಲ್ಲಿ ಮೈಸೂರು ಸಾಮ್ರಾಜ್ಯ ಕರ್ನಾಟಕ ರಾಜ್ಯವಾಗಿ ಉದಯವಾಯಿತು. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಹಾಗಾಗಿ ಕರ್ನಾಟಕ 50ರ ಸಂಭ್ರಮದ ಮೂಲಕ ಸಂಭ್ರಮಿಸುತ್ತಿದ್ದೇವೆ ಎಂದರು.1924ರಲ್ಲಿ ಕುವೆಂಪು ರವರು ಜಯಭಾರತ ಜನನಿಯ ತನುಜಾತೆ ನಾಡಗೀತೆ ರಚಿಸಿದರು. ಈ ವರ್ಷ ನಾಡಗೀತೆಯ ಶತಮಾನೋತ್ಸವದ ಪ್ರಯುಕ್ತ ಮೈಸೂರಿನಲ್ಲಿ ವೃತ್ತಿಪರ ಮತ್ತು ಹವ್ಯಾಸಿ ಸಹಸ್ರ ಕಲಾವಿದರಿಂದ ನಾಡಗೀತೆ ಸಮೂಹ ಗೀತೆ ಗಾಯನ ಕಾರ್ಯಕ್ರಮವನ್ನ ಅಕ್ಟೋಬರ್ ಅಂತ್ಯದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಭಾಜನರಾದ ಎಂ. ಮೋಹನ್ ಕುಮಾರ್ ಗೌಡ, ನಾಗಚಂದ್ರ, ಕುಮಾರ್, ಲಕ್ಷ್ಮಿದೇವಿ, ಜಗದೀಶ್ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ. ಭೈರಿ, ಕರ್ನಾಟಕ ಸಂಭ್ರಮ ವ್ಯವಸ್ಥಾಪಕ ಕೃಷ್ಣ, ನಿರೂಪಕ ಅಜಯ್ ಶಾಸ್ತ್ರಿ, ಬೆಟ್ಟೆಗೌಡ, ಪೂರ್ಣಿಮಾ, ಸಿ.ಎಸ್. ವಾಣಿ, ಶ್ರೀಲತಾ ಮನೋಹರ್, ಗುರುರಾಜ್, ರಂಗಸ್ವಾಮಿ ಮೊದಲಾದವರು ಇದ್ದರು.