ಸಾರಾಂಶ
ಕನ್ನಡಪ್ರಭ ವಾರ್ತೆ ಮುಗಳಖೋಡ
ಮಾ.2ರಿಂದ 4ರವರೆಗೆ ನಡೆದ 15ನೇ ಕರ್ನಾಟಕ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ನಾಟಿವೈದ್ಯರು ಅಲ್ಲಯ್ಯ ಹಿರೇಮಠ ಅವರಿಗೆ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನೀಡುವ ರಾಜ್ಯ ಕರ್ನಾಟಕ ಪಾರಂಪರಿಕ ವೈದ್ಯರತ್ನ ಪ್ರಶಸ್ತಿ ಗೌರವ ಲಭಿಸಿದೆ.ಬೀದರ್ ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ) ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ) ಲಿಂಗಸುಗೂರು ಆಶ್ರಯದಲ್ಲಿ ಬೀದರ್ ನಗರದ ಡಾ.ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮ ಪ್ರದಾನ ಮಾಡಲಾಗಿದೆ.
ನಾಟಿವೈದ್ಯರು ಶ್ರೀ ಅಲ್ಲಯ್ಯ ಹಿರೇಮಠ ಅವರ ಪಾರಂಪರಿಕ ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಸೇವೆ, ಔಷಧೋಪಚಾರ ಪದ್ಧತಿ ಗಮನಿಸಿ, ಗುರುತಿಸಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ) ಬೆಂಗಳೂರು ಇವರು ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಗುರುಬಸವ ಸ್ವಾಮಿಜಿ, ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಮಹಾದೇವಯ್ಯ, ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ, ಪರಿಷತ್ ಸಂಸ್ಥಾಪಕರು ಹಾಗೂ ನಿವೃತ್ತ ಆಯುಷ ಅಧಿಕಾರಿ ಶ್ರೀಕಂಠಯ್ಯ, ನಿಕಟಪೂರ್ವ ಅಧ್ಯಕ್ಷ ನೊಡಲಗಿ ಗುರುಸಿದ್ದಪ್ಪ, ಶಿವಾನಂದ ಜಂಗಿನಮಠ, ಅಬ್ದುಲ್ ಖದಿರ, ಗೋವರ್ಧನ ಶಿಂಗ್, ಅನುಗನಾಳ ಕೃಷ್ಣಮೂರ್ತಿ, ರಾಜಕುಮಾರ ಹೆಬ್ಬಾಳೆ, ಉಮಾಕಾಂತ ಪಾಟೀಲ, ಪಾರಂಪರಿಕ ವೈದ್ಯ ಪರಿಷತ್ ಸ್ವಾಗತ ಸಮೀತಿ ಸಂಯೋಜಕ ಶಿವಾನಂದ ಜಂಗಿನಮಠ, ಜಗನ್ಹಾಥ ಹೆಬ್ಬಾಳೆ, ಈರಣ್ಣಾ ರಾಂಪೂರೆ, ಜಯರಾಮ ಉಡುಪಿ, ಸೇರಿದಂತೆ ರಾಜ್ಯದ ಎಲ್ಲ ನಾಟಿ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಮ್ಮ ಮನೆತನದ ಹಿರಿಯರು ಕೊಡುತ್ತಾ ಬಂದಿರುವ ನಾಟಿ ಔಷಧವನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ವಂಶಪರಂಪರೆಯಾಗಿ ಬಂದಿರುವಂತಹ ಔಷಧ ನೀಡುವ ಪದ್ಧತಿಯನ್ನು ನಾನು ನನ್ನ ಕುಟುಂಬ ಮುಂದುವರಿಸಿದೆ. ಕಳೆದ 60, 70 ವರ್ಷಗಳಿಂದ ನಾಟಿ ಔಷಧ ನೀಡುತ್ತಾ ಬಂದಿದ್ದೇವೆ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನ ವಿವಿಧ ಕಾಯಿಗಳಿಗೆ ತುತ್ತಾಗಿರುವ ರೋಗಿಗಳಿಗೆ ಉಚಿತ ಔಷಧ ನೀಡುತ್ತೇವೆ. ಈ ಅಲ್ಪ ಸೇವೆಗೆ ನನ್ನನ್ನು ಗುರುತಿಸಿ ಕರ್ನಾಟಕ ಪಾರಂಪರಿಕ ವೈದ್ಯರತ್ನ ಪ್ರಶಸ್ತಿ ಗೌರವಿಸಿದ್ದು ತುಂಬಾ ಸಂತಸ ತಂದಿದೆ. ಈ ರಾಜ್ಯಮಟ್ಟದ ಪ್ರಶಸ್ತಿಯು ನನಗೆ ವಿದ್ಯೆ ನೀಡಿದ ಗುರು ಅಲ್ಲಯ್ಯಜ್ಜ ಹಿರೇಮಠ, ಶಂಭುಲಿಂಗ ಹಿರೇಮಠರಿಗೆ ಸಲ್ಲುತ್ತದೆ.ನಾಟಿವೈದ್ಯ ಅಲ್ಲಯ್ಯ ಹಿರೇಮಠ, ಮುಗಳಖೋಡ