ತಾಲೂಕಿನ ಜನರ ಜೊತೆಗೆ ಬೆಂಗಳೂರು ಸೇರಿ ಐದಾರು ಜಿಲ್ಲೆ ಜನ ಮೇಕೆದಾಟು ಪಾದಯಾತ್ರೆಯಲ್ಲಿ‌ ನಮ್ಮ ಜೊತೆ ಹೆಜ್ಜೆ ಹಾಕಿ, ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದೀರಿ, ನ್ಯಾಯಾಲಯ ಮೇಕೆದಾಟಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಬೇಕೆಂದು ತೀರ್ಮಾನ ಕೊಟ್ಟಿದೆ,

ಕನ್ನಡಪ್ರಭ ವಾರ್ತೆ ಕನಕಪುರ

ಸುಮಾರು ಜನ‌ ಸಚಿವರು ಪೋನ್ ಮಾಡಿ ಕನಕೋತ್ಸವ ಮಾಡುತ್ತಿದ್ದೀಯೋ ಅಥವಾ ಕರ್ನಾಟಕ ಉತ್ಸವ ಮಾಡುತ್ತಿದ್ದೀಯೋ ಎಂದು ಕೇಳಿದ್ದು, 2027ಕ್ಕೆ ಕನಕಪುರದಲ್ಲಿ ಕರ್ನಾಟಕ ಉತ್ಸವವನ್ನು ಅದ್ಧೂರಿಯಾಗಿ ಮಾಡೋಣ ಎಂದು ಡಿಸಿಎಂ ಡಿಕೆಶಿ ಹೇಳಿದರು.

ಭಾನುವಾರ ಸಂಜೆ ನಡೆದ ಕನಕೋತ್ಸವದ ಸಮಾರೋಪದಲ್ಲಿ ಭಾಗಿಯಾಗಿ ಮಾತನಾಡಿ, ತಾಲೂಕಿನ ಜನರ ಜೊತೆಗೆ ಬೆಂಗಳೂರು ಸೇರಿ ಐದಾರು ಜಿಲ್ಲೆ ಜನ ಮೇಕೆದಾಟು ಪಾದಯಾತ್ರೆಯಲ್ಲಿ‌ ನಮ್ಮ ಜೊತೆ ಹೆಜ್ಜೆ ಹಾಕಿ, ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದೀರಿ, ನ್ಯಾಯಾಲಯ ಮೇಕೆದಾಟಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಬೇಕೆಂದು ತೀರ್ಮಾನ ಕೊಟ್ಟಿದೆ, ನಿಮ್ಮ‌ ಹೋರಾಟಕ್ಕೆ ನ್ಯಾಯ ಸಿಕ್ಕಿದೆ, ನಿಮ್ಮ ಮನೆಯ ಮಗನ‌ ಕೈಯಲ್ಲೇ ಆ ಯೋಜನೆಗೆ ಪೂಜೆ ಮಾಡುವ ಭಾಗ್ಯ ಸಿಗುತ್ತದೆ ಎಂದರು.

ಜತೆಗೆ ಸದ್ಯದಲ್ಲೇ ಮೆಡಿಕಲ್ ಕಾಲೇಜಿಗೂ ಭೂಮಿ ಪೂಜೆ ಮಾಡುತ್ತೇನೆ, ನಮ್ಮ ತಾಲೂಕಿನ ಜನ ಯಾರು ಕೂಡ ಬೆಂಗಳೂರು ಆಸ್ಪತ್ರೆಗೆ ಹೋಗಿ ಹಣ ಖರ್ಚು ಮಾಡಬಾರದು ಎಂಬುದು ನನ್ನ ಉದ್ದೇಶವಾಗಿದ್ದು, ಕೆಲ ಆ್ಯಂಬುಲೆನ್ಸ್ ಡ್ರೈವರ್ ಗಳು ಹೊಂದಾಣಿಕೆ ಮಾಡಿಕೊಂಡು ರೋಗಿಗಳನ್ನು ದೊಡ್ಡ ದೊಡ್ಡ ಆಸ್ಪತ್ರೆಗೆ ಕಳಿಸುತ್ತಿದ್ದು, ಅದಾಗಬಾರದು. ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಬೇಕು ಎಂಬುದು ನನ್ನ ಕೊನೆಯ ಆಸೆ ಎಂದು ಡಿಕೆ ಶಿವಕುಮಾರ್ ಹೇಳಿದರು.

----------