ಮಂಗಳೂರು: ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ಗೆ ಹೌಸಿಂಗ್ ಆ್ಯಂಡ್ ಅರ್ಬನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (HUDCO) ಕ್ಯಾಪಿಟಲ್ ಗೇನ್ ಬಾಂಡ್‌ಗಳ ಅರೇಂಜರ್ ಮತ್ತು ಕಲೆಕ್ಟರ್ ಆಗಿ ಮಾನ್ಯತೆ ದೊರೆತಿದೆ. ಈ ಮೂಲಕ ಗ್ರಾಹಕರಿಗೆ ವಿವಿಧ ಹೂಡಿಕೆ ಆಯ್ಕೆಗಳನ್ನು ಒದಗಿಸುವ ಬ್ಯಾಂಕ್‌ನ ಬದ್ಧತೆ ಮತ್ತಷ್ಟು ಬಲಗೊಂಡಿದೆ.ಈ ಮಾನ್ಯತೆಯೊಂದಿಗೆ ಕರ್ಣಾಟಕ ಬ್ಯಾಂಕ್, ಸರ್ಕಾರದ ಬೆಂಬಲ ಹೊಂದಿರುವ ಕ್ಯಾಪಿಟಲ್ ಗೇನ್ ಬಾಂಡ್‌ಗಳಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸುವ ಆಯ್ದ ಅರೇಂಜರ್‌ಗಳ ಸಾಲಿಗೆ ಸೇರ್ಪಡೆಯಾಗಿದೆ. HUDCO ಜತೆಗೆ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ (REC), ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಹಾಗೂ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (IRFC) ಸಂಸ್ಥೆಗಳು ಈ ಬಾಂಡ್‌ಗಳನ್ನು ವಿತರಿಸುತ್ತವೆ.
ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 85ರಡಿ (ಈ ಹಿಂದೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 54EC) ಅರ್ಹ ತೆರಿಗೆದಾರರಿಗೆ ದೀರ್ಘಾವಧಿ ಬಂಡವಾಳ ಲಾಭದ ಮೇಲಿನ ತೆರಿಗೆ ಉಳಿತಾಯದ ಅವಕಾಶವನ್ನು ಕ್ಯಾಪಿಟಲ್ ಗೇನ್ ಬಾಂಡ್‌ಗಳು ಒದಗಿಸುತ್ತವೆ. ಜತೆಗೆ ಸರ್ಕಾರದ ಬೆಂಬಲ ಹೊಂದಿರುವ ಸಾಧನಗಳಲ್ಲಿ ಹೂಡಿಕೆ ಮಾಡುವ ಅವಕಾಶವೂ ದೊರೆಯುತ್ತದೆ.ಕರ್ಣಾಟಕ ಬ್ಯಾಂಕ್‌ನ ಗ್ರಾಹಕರು ಬ್ಯಾಂಕ್‌ನ ವಿವಿಧ ಶಾಖೆಗಳ ಮೂಲಕ HUDCO ಕ್ಯಾಪಿಟಲ್ ಗೇನ್ ಬಾಂಡ್‌ಗಳಿಗೆ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆದಾರರಿಗೆ ಸಂಬಂಧ ನಿರ್ವಹಣೆ ಹಾಗೂ ಗ್ರಾಹಕ ಸೇವೆಯ ಮೂಲಕ ಅಗತ್ಯ ನೆರವು ಒದಗಿಸಲಾಗುತ್ತದೆ.
ಅರ್ಹತೆ, ಹೂಡಿಕೆ ಮಿತಿ, ಚಂದಾದಾರಿಕೆ ಪ್ರಕ್ರಿಯೆ ಹಾಗೂ ಅನ್ವಯವಾಗುವ ನಿಯಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.