ಕ್ರಿಮಿನಲ್ ಪ್ರಕರಣದಲ್ಲಿ ಕರಸೇವಕನ ಬಂಧನ: ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ

| Published : Jan 08 2024, 01:45 AM IST

ಕ್ರಿಮಿನಲ್ ಪ್ರಕರಣದಲ್ಲಿ ಕರಸೇವಕನ ಬಂಧನ: ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ದ ಬಿಜೆಪಿ ನಾಯಕರು ಉದ್ದುದ್ದ ಭಾಷಣ ಮಾಡುವ ಮೂಲಕ ರಾಜ್ಯದಲ್ಲಿ ತಮ್ಮ ಬೇಳೆ ಬೆಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದು ಎಲ್ಲೂ ನಡೆಯಲ್ಲ. ಚಾಮರಾಜನಗರದಲ್ಲಿ ನಡೆಯಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಸವಲತ್ತು ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ನಾಯಕರ ಬೇಳೆ ಬೇಯಲ್ಲ : ಶಾಸಕ ಸಿ.ಪುಟ್ಟರಂಗಶೆಟ್ಟಿ । ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ದ ಬಿಜೆಪಿ ನಾಯಕರು ಉದ್ದುದ್ದ ಭಾಷಣ ಮಾಡುವ ಮೂಲಕ ರಾಜ್ಯದಲ್ಲಿ ತಮ್ಮ ಬೇಳೆ ಬೆಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದು ಎಲ್ಲೂ ನಡೆಯಲ್ಲ. ಚಾಮರಾಜನಗರದಲ್ಲಿ ನಡೆಯಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಸವಲತ್ತು ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಕ್ರಿಮಿನಲ್ ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನು ಬಿಜೆಪಿಯವರು ಕಾಂಗ್ರೆಸ್ ಪಕ್ಷ ಮಾಡಿದ್ದೇ ಎಂದು ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಬೇಳೆ ಬೇಯಲ್ಲ ಆಗಾಗಿ ಬೇಳೆಬೇಯಿಸಿಕೊಳ್ಳಲು ಜಾತಿ ಜಾತಿ, ಧರ್ಮಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಅದು ಚಾಮರಾಜನಗರದಲ್ಲಿ ನಡೆಯಲ್ಲ. ನಡೆಯಲು ಬಿಡುವುದಿಲ್ಲ ಎಂದರು. ಕಾಂಗ್ರೆಸ್ ಕಾರ್ಮಿಕ ವಿಭಾಗ ಪಕ್ಷದ ಸಂಘಟನೆಗೆ ಬಹುಮುಖ್ಯವಾಗಿದೆ. ಜಿಲ್ಲೆಯು ಶೇ ೭೦ ರಷ್ಟು ಕಾರ್ಮಿಕರನ್ನು ಹೊಂದಿದೆ. ಆಗಾಗಿ ಕಾರ್ಮಿಕ ವಿಭಾಗದ ಜಿಲ್ಲಾ ಪದಾಧಿಕಾರಿಗಳು ಹೆಚ್ಚುಹೆಚ್ಚು ಸದಸ್ಯರನ್ನು ಸದಸ್ಯರನ್ನಾಗಿ ಮಾಡಿ ಪಕ್ಷವನ್ನು ಸದೃಢಗೊಳಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು. ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ: ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ದೇಶದಲ್ಲಿ ೭೦ ವರ್ಷಗಳ ಕಾಲ ಆಡಳಿತ ನಡೆಸಿ ಕಾಂಗ್ರೆಸ್ ಏನು ಮಾಡಿಲ್ಲ ಎಂದು ವಿಮಾನದಲ್ಲಿ ಒಡಾಡಿಕೊಂಡು ಮೋದಿ ಜನರಿಗೆ ಸುಳ್ಳುಸುಳ್ಳನ್ನು ಹೇಳಿದ್ದರು ಯಾರು ಕೇಳಲಿಲ್ಲ. ಕಾಂಗ್ರೆಸ್ ನವರು ಲೂಟಿ ಹೊಡೆದು ಸ್ವಿಸ್ ಬ್ಯಾಂಕ್‌ನಲ್ಲಿ ಹಣವಿಟ್ಟದ್ದಾರೆ ಅದನ್ನು ತಂದು ಪ್ರತಿಯೊಬ್ಬರ ಖಾತೆ ೧೫ ಲಕ್ಷ ರು. ಹಣ ಹಾಕುವುದಾಗಿ ಸುಮಾರು ೯ ವರ್ಷಗಳೇ ಕಳೆದಿದೆ. ಯಾರ ಖಾತೆಗೂ ಒಂದು ರೂಪಾಯಿ ಹಾಕಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಫ್ಯಾಕ್ಟರಿ ತಂದು ದೇಶದ ಜನತೆಗೆ ಉದ್ಯೋಗ ಕಲ್ಪಿಸಿಕೊಟ್ಟರು. ಇಂದಿರಾಗಾಂಧಿಯವರು ಉಳುವನೇ ಭೂಮಿ ಒಡೆಯ ಜಾರಿಗೆ ತಂದರು. ರಾಜೀವ್‌ಗಾಂಧಿಯವರು ಹೊಸ ಆಯಾಮ ತಂದು ತಂತ್ರಜ್ಞಾನ ತಂದರು ಮೊಬೈಲ್ ತಂದರು ಇದನ್ನು ಮೋದಿ ತಂದರು ಎಂದು ಪ್ರಶ್ನಸಿದರು. ಕೇಂದ್ರ ಬಿಜೆಪಿ ಸರ್ಕಾರ ಒಂದು ಪ್ಯಾಕ್ಟರಿ, ಒಂದು ಆಸ್ಪತ್ರೆ, ಒಂದು ಶಾಲೆ ಕಟ್ಟಲಿಲ್ಲ. ಬಿಜೆಪಿಯವರ ಒಣಪ್ರತಿಷ್ಠೆಗೆ ಯಾರು ಬಲಿಯಾಗುವುದು ಬೇಡ. ಸಂವಿಧಾನ ಉಳಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯತೆ ಇದೆ ಎಂದರು. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಹತ್ತು ಹಲವು ಯೋಜನೆಗಳಿದ್ದು, ಕಾರ್ಮಿಕರು ಹುಟ್ಟಿನಿಂದ ಸಾಯೋತನಕ ಯೋಜನೆಗಳಿವೆ ಅವುಗಳನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯಾದ್ಯಕ್ಷರಾಗಿ ಪುಟ್ಟುಸ್ವಾಮಿಗೌಡರು ಅಧಿಕಾರವನ್ನು ವಹಿಸಿಕೊಂಡ ಮೇಲೆ ರಾಜ್ಯಾದ್ಯಂತ ಪ್ರವಾಸಕೈಗೊಂಡು ಕಾರ್ಮಿಕ ವಿಭಾಗಕ್ಕೆ ಚುರುಕು ತಂದರು. ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿರುವ ಮಹೇಶ್, ಮೂರ್ತಿ ಹಾಗೂ ಪದಾಧಿಕಾರಿಗಳು ಕಾರ್ಮಿಕರಿಗೆ ಸ್ಪಂದಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸಬೇಕು. ಜಿಲ್ಲೆಯಲ್ಲಿ ಹೆಚ್ಚು ಸದಸ್ಯತ್ವ ಮಾಡಿ ಪಕ್ಷವನ್ನು ಬಲಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೋಮಶೇಖರ್, ಶಾಸಕ ಜಿ.ಎನ್.ನಂಜುಂಡಸ್ವಾಮಿ, ಚೂಡಾ, ಮಾಜಿ ಅಧ್ಯಕ್ಷ ಸೈಯದ್‌ ರಫೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್‌ಅಸ್ಗರ್ ಮಾತನಾಡಿದರು. ಸನ್ಮಾನ: ಸರ್ಕಾರಿ ವಕೀಲರಾಗಿ ನೇಮಕವಾಗಿರುವ ಅರುಣ್‌ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಶಿವನಾಗಣ್ಣ, ಉಪಾಧ್ಯಕ್ಷೆ ಹರಿಣಿಗೌಡ, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಕಾರ್ಯಾಧ್ಯಕ್ಷ ದೊಡ್ಡರಾಯಪೇಟೆ ಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ, ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗಳಾದ ಕೆಂಪರಾಜು, ಆನಂದ್, ಕೆಬ್ಬೆಪುರ ಮಧು, ಸಿದ್ದರಾಜನಾಯಕ, ಶಂಕರ್, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹೂಸಹಳ್ಳಿ ಮಧುಸೂದನ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಎನ್‌ಎಸ್‌ಯು ಐ ಜಿಲ್ಲಾಧ್ಯಕ್ಷ ಮೋಹನ್‌ ನಗು, ಮಹಿಳಾ ಜಿಲ್ಲಾಧ್ಯಕ್ಷ ಲತಾಜತ್ತಿ, ಮುಖಂಡರಾದ ಪು.ಶ್ರೀನಿವಾಸನಾಯಕ, ಸಿ.ಎ.ಮಹದೇವಶೆಟ್ಟಿ, ಎಎಚ್‌ಎನ್ ಖಾನ್, ಡಿ.ಎನ್.ನಟರಾಜು, ಬ್ಲಾಕ್ ಅಧ್ಯಕ್ಷರಾದ ಹೊಂಗನೂರು ಚಂದ್ರು, ತೋಟೇಶ್, ಸೇವಾದಳ ಜಿಲ್ಲಾಧ್ಯಕ್ಷ ಜಯರಾಜ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಆರ್.ಪಿ.ನಂಜುಂಡಸ್ವಾಮಿ ಇತರರು ಹಾಜರಿದ್ದರು.