ಕೋ.ಶಿವಾಪುರ ಗ್ರಾಮದಲ್ಲಿ ಸಂಭ್ರಮದ ಕಾರ್ತಿಕೋತ್ಸವ

| Published : Dec 06 2024, 08:56 AM IST

ಸಾರಾಂಶ

ಯರಗಟ್ಟಿ ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಸೋಮವಾರ ಅಮಾವಾಸ್ಯೆ ದಿನ ರಾತ್ರಿ ಗ್ರಾಮದ ಮಹಿಳೆಯರು ಆರತಿ ಬೆಳಗಿಸಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿವಿದ ಭಣ್ಣಗಳ ರಂಗೋಲಿ ಚಿತ್ರ ಹಾಕಿ ನಂತರ ದೇವಸ್ಥಾನದ ಸುತ್ತಲು ದೀಪ ಹಚ್ಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಸೋಮವಾರ ಅಮಾವಾಸ್ಯೆ ದಿನ ರಾತ್ರಿ ಗ್ರಾಮದ ಮಹಿಳೆಯರು ಆರತಿ ಬೆಳಗಿಸಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿವಿದ ಭಣ್ಣಗಳ ರಂಗೋಲಿ ಚಿತ್ರ ಹಾಕಿ ನಂತರ ದೇವಸ್ಥಾನದ ಸುತ್ತಲು ದೀಪ ಹಚ್ಚಿ ಸಂಭ್ರಮಿಸಿದರು.

ಸಾನ್ನಿಧ್ಯ ವಹಿಸಿದ್ದ ಚರಂತಯ್ಯ ಮರಳುಸಿದ್ದ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಜ್ಞಾನದ ಬಲದಿಂದ ಅಜ್ಞಾನ ಕೇಡು ನೋಡಯ್ಯಾ... ದೀಪದ ಬಲದಿಂದ ತಮಂಜೆಯದ ಕೇಡು ನೋಡಯ್ಯಾ.. ಸತ್ಯತದ ಭಲದಿಂದ ಅಸತ್ಯದ ಕೇಡು ನೋಡಯ್ಯಾ ವಚನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಇದಕ್ಕೂ ಮುಂಚೆ ದೇವಸ್ಥಾನದಲ್ಲಿ ಅಭಿಷೇಕ, ನೈವೇದ್ಯ ಮಹಾಪ್ರಸಾದ ಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಿದವು, ಭಾರತಿ ಮಠದ, ಗುರುದೇವಿ ಹೋಗಾರ, ಮಂಜುಳಾ ಕೋಳವಿ, ಕಾವೇರಿ ಚಿಕ್ಕಮಠ, ಭಾರತಿ ಕುಡ್ಲಿಂಗಪ್ಪಗೋಳ, ಮಶಿವಾನಂದ ಮಠಪತಿ, ಮಹಾದೇವ ಪೊಲೀಸ್, ಪುಂಡಲೀಕ ಬಾದಾಮಿ, ರಮೇಶ ಕುಡ್ಲಿಂಗಪ್ಪಗೋಳ, ರವಿಚಂದ್ರ ವಸ್ತ್ರದ ಇತರರು ಉಪಸ್ಥಿರಿದ್ದರು.