ತುಳಸಿಗೇರಿ ಹನುಮಂತದೇವರ ಕಾರ್ತಿಕೋತ್ಸವ

| Published : Dec 31 2023, 01:30 AM IST

ತುಳಸಿಗೇರಿ ಹನುಮಂತದೇವರ ಕಾರ್ತಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾದಗಿ: ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗೇರಿ ಶ್ರೀ ಹನುಮಂತದೇವರ ಕಾರ್ತಿಕೋತ್ಸವದೊಂದಿಗೆ ಶನಿವಾರ ಜಾತ್ರಾಮಹೋತ್ಸವ ಆರಂಭಗೊಂಡಿತು. ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಪೂಜಾರ ಬಳಗದವರಿಂದ ಕಳಸಾರೋಹಣ ನೆರವೇರಿಸಿದ ನಂತರ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗಿರಿ ಶ್ರೀ ಹನುಮಂತದೇವರ ಕಾರ್ತಿಕೋತ್ಸವದೊಂದಿಗೆ ಶನಿವಾರ ಜಾತ್ರಾಮಹೋತ್ಸವ ಆರಂಭಗೊಂಡಿತು.

ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಪೂಜಾರ ಬಳಗದವರಿಂದ ಕಳಸಾರೋಹಣ ನೆರವೇರಿಸಿದ ನಂತರ ಜಾತ್ರಾಮಹೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರಿಂದ ಗೊವಿಂದಾ... ಗೊವಿಂದಾ... ಎಂದು ಹರ್ಷೋದ್ಘಾರವಾಯಿತು. ಕಾರ್ತಿಕೋತ್ಸವದಲ್ಲಿ ಸ್ಥಳಿಯರು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಭಕ್ತರು ದೇವರಿಗೆ ನೈವೇದ್ಯ ಸಮರ್ಪಿಸಿ ಗೋಪಾಳ ತುಂಬಿಸಿ ಭಕ್ತಿ ಸಮರ್ಪಿಸಿದರು.