ಬಿ.ಸರೋಜಾದೇವಿ, ಕೆ.ಬಿ.ಗಣಪತಿ ಅಗಲಿಕೆಯಿಂದ ಕರುನಾಡು ಬಡವಾಗಿದೆ: ಪೂರ್ಣಚಂದ್ರ ತೇಜಸ್ವಿ

| Published : Jul 17 2025, 12:30 AM IST

ಬಿ.ಸರೋಜಾದೇವಿ, ಕೆ.ಬಿ.ಗಣಪತಿ ಅಗಲಿಕೆಯಿಂದ ಕರುನಾಡು ಬಡವಾಗಿದೆ: ಪೂರ್ಣಚಂದ್ರ ತೇಜಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 60 ವರ್ಷಗಳ ಹಿಂದೆಯೆ ದಕ್ಷಿಣ ಭಾರತ ಅಷ್ಟೆ ಅಲ್ಲದೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಹೃದಯವನ್ನು ಅಲಂಕರಿಸಿದ್ದ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕರ್ನಾಟಕದ ಪ್ರಾದೇಶಿಕ ಪತ್ರಿಕೋದ್ಯಮದ ಇತಿಹಾಸದಲ್ಲಿ ತನ್ನದೆ ಛಾಪು ಮೂಡಿಸಿದ ಮೈಸೂರು ಮಿತ್ರ ದಿನಪತ್ರಿಕೆ ಸಂಪಾದಕ ಕೆ.ಬಿ.ಗಣಪತಿ, ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರ ಅಗಲಿಕೆಯಿಂದ ಕರುನಾಡು ಬಡವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕಸಾಪ, ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಜಾನಪದ ಪರಿಷತ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಅಗಲಿದ ಚೇತನಗಳಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೈಸೂರುಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಡಾ.ಕೆ.ಬಿ.ಗಣಪತಿ ಅವರು ಮೂಡಿಸಿರುವ ಹೆಜ್ಜೆ ಗುರುತುಗಳು ಯುವ ಪತ್ರಕರ್ತರಿಗೆ ದಾರಿದೀಪವಾಗಲಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪತ್ರಿಕೆಗಳನ್ನು ಹೊರತಂದು ಮೈಸೂರಿನ ಮನೆ ಮನಗಳಿಗೆ ತಲುಪಿಸಲು ಬಹಳವಾಗಿ ಶ್ರಮಿಸಿದ್ದಾರೆ ಎಂದರು.

ತಾಲೂಕು ಕಸಾಪ ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್ ಮಾತನಾಡಿ, ಕಳೆದ 60 ವರ್ಷಗಳ ಹಿಂದೆಯೆ ದಕ್ಷಿಣ ಭಾರತ ಅಷ್ಟೆ ಅಲ್ಲದೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಹೃದಯವನ್ನು ಅಲಂಕರಿಸಿದ್ದ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದರು.

ಕುವೆಂಪು ಅವರ ವಿಶ್ವಮಾನವ ತತ್ವದಂತೆ ಬದುಕಿದ ಸರೋಜಾದೇವಿ ಅವರು ಅತ್ಯಂತ ಕಡಿಮೆ ವಯಸ್ಸಿನಲ್ಲಿ ಪದ್ಮ ಪ್ರಶಸ್ತಿಯನ್ನು ಪಡೆದ ಮೊದಲ ಕ್ನನಡಿಗಳು. ಖ್ಯಾತಿಯ ಉತ್ತುಂಗದಲ್ಲಿದ್ದರೂ ಯಾರಿಗೂ ಕೆಟ್ಟದ್ದನ್ನು ಮಾಡದೆ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಣ್ಣಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಾಜಿ ಕಾರ್ಯದರ್ಶಿ ಬಲ್ಲೇನಹಳ್ಳಿ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪನಹಳ್ಳಿ ಅರುಣ್ ಕುಮಾರ್, ಸಾಹಿತ್ಯ ಪರಿಷತ್ ಮಾಧ್ಯಮ ಸಂಚಾಲಕ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕಾರ್ಯದರ್ಶಿ ಕಟ್ಟೆ ಮಹೇಶ್, ತಾಲೂಕು ನಯನಜ ಕ್ಷತ್ರಿಯ ಸಮಾಜದ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಶಿವಪ್ಪ, ವಕೀಲ ನಯಾಜ್ ಪಾಷಾ, ಕರ್ನಾಟಕ ಯುವ ರಕ್ಷಣಾ ವೇದಿಕೆ ಅಧ್ಯಕ್ಷ ಜಾವಿದ್, ನಿಸಾರ್, ಭಾಸ್ಕರ್, ಮಾಧ್ಯಮ ಕ್ಷೇತ್ರದ ಎಚ್.ಬಿ.ಮಂಜುನಾಥ್, ವಿ.ಲೋಕೇಶ್, ಎಸ್.ರವಿ, ಕಾಮನಹಳ್ಳಿ ಮಂಜುನಾಥ್, ಗೋವಿಂದರಾಜು, ರಂಗನಾಥ್, ಕರವೇ ಸಂಘಟನಾ ಕಾರ್ಯದರ್ಶಿ ಗೋಪಿ ಹಲವರು ಇದ್ದರು.