ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಮೌಲ್ಯಯುತ ಕಾರ್ಯಕ್ರಮ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಹೇಳಿದರು.
ಕನ್ನಡಪ್ರಭವಾರ್ತೆ ಕುಶಾಲನಗರ
ಗಾನ ಸಮರ್ಪಣೆಯ ಮೂಲಕ ಗಾನಕೋಗಿಲೆ ಜಾನಕಮ್ಮ ಅವರ ಸ್ಮರಣೆ ಮಾಡಿರುವುದು ಮೌಲ್ಯಯುತ ಕಾರ್ಯಕ್ರಮ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಹೇಳಿದರು.ಕುಶಾಲನಗರದ ಝೇಂಕಾರ್ ಮ್ಯೂಸಿಕಲ್ ಇವೆಂಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ನಡೆದ ಜಾನಕಿ ಯಾನ ಮಧುರ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರುನಾಡಿನ ನೆಲ ಕಲೆ ಸಂಸ್ಕೃತಿ ಭಾವನಾತ್ಮಕತೆಗೆ ಹೆಸರುವಾಸಿಯಾಗಿದ್ದು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಕಲಾವಿದೆ ಸಾಧಕಿ ಜಾನಕಮ್ಮ ಅವರ ನೆನಪು ಹಾಗೂ ನಮನ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಳೀಯ ಸಂಘ ಸಂಸ್ಥೆಗಳ ಪ್ರಮುಖರಾದ ಸಂಗೀತ ನಿರ್ದೇಶಕ ಮಹೇಶ್ ಕೋಟೆ, ಉದ್ಯಮಿಗಳಾದ ವಿಜಯನ್, ಮೈಸಿ ಕತ್ತನ್ನೀರ ಪತ್ರಕರ್ತ ಎಂ.ಎನ್. ಚಂದ್ರಮೋಹನ್, ಆದಮ್ ಸುಮೇಶ್, ಅಜೀಜ್ ಕಿಶೋರ್, ಕಲಾವಿದ ಭರಮಣ್ಣ ಬೆಟಗೇರಿ ಇರ್ಫಾನ್ ಖಾನ್ ನೃತ್ಯ ಸಂಯೋಜಕ ಅಪ್ಸರ್, ಮತ್ತಿತರರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.ಕಾರ್ಯಕ್ರಮ ಹಾಗೂ ಜಾನಕಮ್ಮ ಅವರ ಸಂಕ್ಷಿಪ್ತ ಪರಿಚಯವನ್ನು ರವಿ ಅವರು ನಡೆಸಿಕೊಟ್ಟರು.
ಗಾಯಕರಾದ ರವಿ ಝೇಂಕಾರ್, ಶಾಂತಲಾ ರವಿ, ರವಿ ಕೊಡಗು, ಅಭಿ, ದಿನೇಶ್ ಮಲ್ಲ, ಲಿಖಿತ್, ರಶ್ಮಿ, ಸ್ವಪ್ನ ಅವರ ಮೂಲಕ ನಿರಂತರ ಐದು ಗಂಟೆಗಳ ಕಾಲ ಮೂಡಿ ಬಂದ ಗಾಯನಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು. ಮೈಸೂರಿನ ಬೈರಾಜ್ ಅವರ ಗಾಯನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.ಬಾಲ ಕಲಾವಿದರಾದ ಟಿ ಕೆ ಋತ್ವಿಕ್ ಮತ್ತು ಷಷ್ಠಿ ಷಾಡ್ಗುಣ್ಯ ಅವರನ್ನು ಗೌರವಿಸಲಾಯಿತು. ಕಲಾವಿದರಾದ ಮಂಜು ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು. ಶಾಂತಲಾ ರವಿ ಪ್ರಾರ್ಥನೆ, ಅಭಿ ಸ್ವಾಗತ ರಶ್ಮಿ ವಂದಿಸಿದರು.