ಸಾರಾಂಶ
ಭಾಷೆ ಕೇವಲ ಅಕ್ಷರ, ಪದವಲ್ಲ. ಅದು ನಮ್ಮ ನಾಡಿ ಮಿಡಿತ. ಜಗತ್ತಿನ ಯಾವ ಭಾಷೆಗೂ ಕಡಿಮೆಯಿಲ್ಲ, ಪಂಪನಿಂದ ಕುವೆಂಪು ಅವರ ವರಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಕನ್ನಡ ಶ್ರೀಮಂತ ಭಾಷೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸದ ಜೊತೆಗೆ ಕನ್ನಡಿಗರ ಸಮಸ್ಯೆಗಳಿಗೆ ಕಸಾಪ ಸ್ಪಂದಿಸುತ್ತಿದೆ. ಕನ್ನಡ ಶ್ರೀಮಂತ ಭಾಷೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು. ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಸಾಪ ಪದಾಧಿಕಾರಿಗಳ ಪದಗ್ರಹಣ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಅದ್ಯತೆಕ್ಷೇತ್ರದ ಜನರ ಆಶೀರ್ವಾದದಿಂದ ಅಧಿಕಾರ ಲಭಿಸಿದೆ. ಆದ್ದರಿಂದ ನಾನು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ನಮ್ಮ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮ ಪಡುತ್ತೇನೆ. ಕಸಾಪ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಎಲ್ಲ ವಿದ್ಯಾರ್ಥಿಗಳು ಇದೇ ರೀತಿ ಹೆಚ್ಚಿನ ಅಂಕಗಳು ಪಡೆದು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಮಾತನಾಡಿ, ಭಾಷೆ ಕೇವಲ ಅಕ್ಷರ, ಪದವಲ್ಲ. ಅದು ನಮ್ಮ ನಾಡಿ ಮಿಡಿತ. ಜಗತ್ತಿನ ಯಾವ ಭಾಷೆಗೂ ಕಡಿಮೆಯಿಲ್ಲ, ಪಂಪನಿಂದ ಕುವೆಂಪು ಅವರ ವರಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ ಎಂದು ತಿಳಿಸಿದರು. ಪ್ರತಿಭಾವಂತರಿಗೆ ಪ್ರೋತ್ಸಾಹಧನ
ಈ ಹಿಂದೆ ಇದ್ದಂತಹ ಕಸಾಪ ಮಾಜಿ ಅಧ್ಯಕ್ಷ ಅನಂತಕೃಷ್ಣ ನೂತನ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿರವರಿಗೆ ಧ್ವಜ ಹಸ್ತಾಂತರ ಮಾಡಿದರು ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕ ಸಾ ಪ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಮತ್ತು ಜೆಪಿ ನಾರಾಯಣ ಮತ್ತು ಎಚ್ ಡಿ ಡಿ ಮತ್ತು ಜೆಪಿಎನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರೋತ್ಸಾಹ ಧನ ವಿತರಿಸಿದರು.ಕಸಾಪ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ತಾದೂರು ರಘು, ಮುನಿ ಕೆಂಪಣ್ಣ, ವೆಂಕಟಸ್ವಾಮಿ, ಮಲ್ಲಿಕಾರ್ಜುನ, ಶಿವಶಂಖರ್, ಟಿ.ವಿ ಚಂದ್ರಶೇಕರ್, ಮುನಿನಾರಾಯಣಪ್ಪ, ಮುನಿ ಬಯ್ಯಣ್ಣ, ವಕ್ಕಲಿಗ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಎಸ್.ವಿ ನಾಗರಾಜು, ಮಾಜಿ ಅಧ್ಯಕ್ಷ ಅನಂತಕೃಷ್ಣ, ಕಲಾವಿದ ಸಿ.ಎನ್ ಮುನಿರಾಜು, ಮುನಿನಂಜಪ್ಪ, ಸತೀಶ್ ಕನ್ನಡ ಸಾಹಿತಿಗಳು, ರೈತ ಮುಖಂಡರು ಹಾಜರಿದ್ದರು.