ಕಸಾಪ ನಡೆ ಯುವ ಜನತೆಯ ಕಡೆ ಕಾರ್ಯಕ್ರಮಕ್ಕೆ ಚಾಲನೆ

| Published : Jul 13 2025, 01:19 AM IST

ಸಾರಾಂಶ

ಕುಣಿಗಲ್ ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಡೆ ಯುವ ಜನತೆಯ ಕಡೆ ಎಂಬ ಕಾರ್ಯಕ್ರಮದ ಕರಪತ್ರ ಬಿಡುಗಡೆ

ಕನ್ನಡಪ್ರಭ ವಾರ್ತೆ ಕುಣಿಗಲ್ ಮಕ್ಕಳಲ್ಲಿ ಅದ್ಭುತವಾದ ಕನ್ನಡ ಪ್ರೇಮ ಶಕ್ತಿ ಇದೆ. ಪ್ರತಿಯೊಂದು ವಿಚಾರಗಳನ್ನು ಮಕ್ಕಳು ಮನನ ಮಾಡುತ್ತಾರೆ ಮಕ್ಕಳು ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದಾಗ ಉತ್ತಮ ಕನ್ನಡ ಸಾಹಿತ್ಯ ಹೊರಹೊಮ್ಮಲಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಡೆ ಯುವ ಜನತೆಯ ಕಡೆ ಎಂಬ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು . ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಯಾವುದು ಕನ್ನಡ ಜ್ಞಾನವನ್ನು ಯುವ ಜನತೆಯಲ್ಲಿ ಹೆಚ್ಚಿಸುವ ದೃಷ್ಟಿಯಿಂದ ನಾಡು-ನುಡಿಗಾಗಿ ಎಲ್ಲರನ್ನು ಕೂಡ ಒಟ್ಟಾಗಿ ಸೇರಿಸುವ ಪ್ರಯತ್ನವನ್ನ ಸಾಹಿತ್ಯ ಪರಿಷತ್ ಪ್ರಾರಂಭಿಸಿದೆ. ಇದು ಉದ್ಘಾಟನೆ ಕಾರ್ಯಕ್ರಮವಾಗಿದ್ದು ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ಸೆಪ್ಟಂಬರ್ 12ರಂದು ಪಾವಗಡದ ಶಾಂತಿ ಪದವಿಪೂರ್ವ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಾಲ ಗುರುಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಫೋನ್ನ ನೀಲಕಂಠೇಗೌಡ, ಕುಣಿಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಲ್ ಬೋರೇಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನಿ ಪಾಳ್ಯ ರಮೇಶ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಯ ಮುಖ್ಯಸ್ಥರು ಇದ್ದರು.

------------- ಫೋಟೋ ಇದೆ : 11 ಕೆಜಿಎಲ್ 2 : ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಡೆ ಯುವ ಜನತೆಯ ಕಡೆ ಕಾಲೇಜಿಗೊಂದು ಕಾರ್ಯಕ್ರಮ ಉದ್ಘಾಟಿಸಿದ ಚಂದ್ರಶೇಖರ ಕಂಬಾರ.