ಕೊಡಗಿನ ಪಶ್ಚಿಮಘಟ್ಟ ಸರಹದ್ದು, ಮೀಸಲು ಅರಣ್ಯಗಳ ವ್ಯಾಪ್ತಿಯ ಪರಿಮಿತಿಯನ್ನು ಸೂಕ್ಷ ಪರಿಸರ ವಲಯ ಎಂದು ಗುರುತು ಮಾಡಿದರೆ, ಎಲ್ಲ ರೈತರು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಹಸಿರು ಇರುವ ಕಾಫಿ ತೋಟ ಮತ್ತು ಕೃಷಿ ಭೂಮಿಯನ್ನು ಸೂಕ್ಷ ಪರಿಸರ ವಲಯ ವ್ಯಾಪ್ತಿಯೊಳಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಮುಂದಾದರೆ, ರೈತರ ಯಾವುದೇ ತ್ಯಾಗಕ್ಕೂ ಸಿದ್ದರಿದ್ದೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಹೇಳಿದರು.

ಸೋಮವಾರಪೇಟೆ: ಕೊಡಗಿನ ಪಶ್ಚಿಮಘಟ್ಟ ಸರಹದ್ದು, ಮೀಸಲು ಅರಣ್ಯಗಳ ವ್ಯಾಪ್ತಿಯ ಪರಿಮಿತಿಯನ್ನು ಸೂಕ್ಷ ಪರಿಸರ ವಲಯ ಎಂದು ಗುರುತು ಮಾಡಿದರೆ, ಎಲ್ಲ ರೈತರು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಹಸಿರು ಇರುವ ಕಾಫಿ ತೋಟ ಮತ್ತು ಕೃಷಿ ಭೂಮಿಯನ್ನು ಸೂಕ್ಷ ಪರಿಸರ ವಲಯ ವ್ಯಾಪ್ತಿಯೊಳಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಮುಂದಾದರೆ, ರೈತರ ಯಾವುದೇ ತ್ಯಾಗಕ್ಕೂ ಸಿದ್ದರಿದ್ದೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಹೇಳಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆ ಶ್ರೀ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಸೋಮವಾರ ಸಭೆಯಲ್ಲಿ ಮಾತನಾಡಿದರು.

ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಮಾತನಾಡಿ, ಅರಣ್ಯ ಪ್ರದೇಶದಿಂದ ಅಕಾಶ ಮಾರ್ಗದಲ್ಲಿ ಒಂದು ಕಿ.ಮೀ ವ್ಯಾಪ್ತಿಯೊಳಗೆ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾದರೆ, ಭೂ ಮಾರ್ಗದಲ್ಲಿ ಮೂರು ಕಿ.ಮೀ.ಗೆ ವ್ಯಾಪ್ತಿಸುತ್ತದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳ ಸನಿಹದಲ್ಲೇ ನಿಡ್ತ, ಮಾಲಂಬಿ ಮೀಸಲು ಅರಣ್ಯಗಳಿವೆ. ಪಂಚಾಯಿತಿಯ ಎಲ್ಲ ಗ್ರಾಮಗಳು ಸೂಕ್ಷö್ಮ ಪರಿಸರ ವಲಯ ವ್ಯಾಪ್ತಿಗೆ ಬರುತ್ತದೆ. ರೈತರು ಗ್ರಾಮಗಳನ್ನು ತೊರೆದು, ಕೃಷಿಯನ್ನು ಕೈಬಿಟ್ಟು ನಗರ ಪ್ರದೇಶಗಳಿಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಡಳಿತಾಧಿಕಾರಿ ಶ್ರೀದೇವಿ ಅವರ ಅಧ್ಯಕ್ಷತೆ ವಹಿಸಿದ್ದರು

ಮೊಗಪ್ಪ, ಶರಣ್, ಸುನಿಲ್, ಕೋಟೆಯೂರು ಲೋಕೇಶ್, ಮಹೇಂದ್ರ, ಮೋಹನ್, ಜಯಪ್ಪ, ರಾಜಪ್ಪ, ಪ್ರಸಿ, ವೆಂಕಟೇಶ್, ಬೋಜಪ್ಪ, ದೇವರಾಜ್, ವಸಂತ್, ಪ್ರದೀಪ್ ಮತ್ತಿತರು ಅನುಷ್ಟಾನಕ್ಕೆ ತಕರಾರು ಸಲ್ಲಿಸಿದರು.

ನೋಡೆಲ್ ಅಧಿಕಾರಿ ರಾಜಶೇಖರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ರೈತರ ತಕರಾರು ಸಲ್ಲಿಸಿದ್ದು, ಸಭೆಯ ನಿರ್ಣಯವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಪಿಡಿಒ ಚಿನ್ನಸ್ವಾಮಿ ಇದ್ದರು.

ಗಣಗೂರು ಗ್ರಾಮ ಪಂಚಾಯಿತಿಯಲ್ಲಿ ಸಭೆ

ಗಣಗೂರು ಗ್ರಾಮ ಪಂಚಾಯಿತಿ ಅವರಣದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ, ಸೋಮವಾರ ಆಡಳಿತಾಧಿಕಾರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಲಿಖಿತ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.

ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ೭ನೇ ಕರಡು ಅಧಿಸೂಚನೆಯನ್ನು ಗ್ರಾಮಸ್ಥರು ವಿರೋಧಿಸಿದರು. ಜನರ ಮೇಲೆ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಣಗೂರಿನ ಚಂದ್ರಶೇಖರ್ ಮಾತನಾಡಿ, ನೂರಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಕೃಷಿ ಮಾಡಿಕೊಂಡು ಸಾವಿರಾರು ಕುಟುಂಬಗಳು ನೆಲ ಕಂಡುಕೊಂಡಿವೆ. ಈಗ ಏಕಾಏಕಿ ಸರ್ಕಾರ ಕಸ್ತೂರಿರಂಗನ ವರದಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದು ಬೇಡ. ಶೂನ್ಯ ಮಾರ್ಜಿನ್ ಆಧಾರದಲ್ಲಿ ವರದಿ ಅನುಷ್ಠಾನ ಮಾಡಿದಲ್ಲಿ ಎಲ್ಲ ಗ್ರಾಮಸ್ಥರು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಿವದಾಸ್ ಮಾತನಾಡಿ, ಅಧಿಕಾರಿಗಳು ಸ್ಥಳೀಯ ರೈತರ ಕೃಷಿ ಭೂಮಿ ಕಿತ್ತುಕೊಳ್ಳುವುದು ಬೇಡ. ಕಸ್ತೂರಿರಂಗನ್ ವರದಿಯನ್ನು ಎಲ್ಲರು ಸಾರಾಸಗಟಾಗಿ ತಿರಸ್ಕರಿಸಲಾಗಿದೆ ಎಂದರು.

ರೈತ ಅನಂತರಾಮ್ ಮಾತನಾಡಿ, ಅಧಿಕಾರಿಗಳು ಕಚೇರಿ ಒಳಗೆ ಕುಳಿತು ಕೆಲಸ ಮಾಡುವುದನ್ನು ಬಿಟ್ಟು, ರೈತರ ಬಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದಲ್ಲಿ ಮಾತ್ರ ಸರಿಯಾದ ಅಂಕಿ ಅಂಶ ಸಿಗುವುದು ಎಂದರು.

ಆಡಳಿತಾಧಿಕಾರಿ ಲಿಖಿತಾ ಮಾತನಾಡಿ, ಮುಂದಿನ ತಿಂಗಳಿನಲ್ಲಿ ಎಲ್ಲ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ರೈತರ ಸಭೆ ಕರೆಯಲಾಗುವುದು. ಅಂದು ಎಲ್ಲರೂ ಸಭೆಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಅನಾವರಣ ಮಾಡಿಕೊಳ್ಳಲು ಅವಕಾಶ ಇರುವುದು. ಇಂದು ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ರೈತರು ತೆಗೆದುಕೊಂಡಿರುವ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಇದ್ದರು. ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು, ಯರಪಾರೆ, ಬಾಣಾವಾರ, ಆಡಿನಾಡೂರು, ಸಂಗಯ್ಯನಪುರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು೨೧ಎಸ್‌ಪಿಟಿ೦೩: ಸೋಮವಾರಪೇಟೆ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿ ರಂಗನ್ ವರದಿ ವಿರೋಧಿಸಿ ವಿಶೇಷ ಗ್ರಾಮ ಸಭೆ ಆಡಳಿತಾಧಿಕಾರಿ ಲಿಖಿತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.