ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ೭ನೇ ಅಧಿಸೂಚನೆಯಲ್ಲಿ ಪ್ರಕಟಗೊಂಡಿರುವ ಅತೀ ಸೂಕ್ಷ್ಮ ಪ್ರದೇಶದ ಯಾದಿಯಲ್ಲಿ ಸಿದ್ದಾಪುರ ತಾಲೂಕಿನಾದ್ಯಂತ ೧೦೦ ಹಳ್ಳಿಗಳನ್ನ ಗುರುತಿಸಲಾಗಿದೆ.
ಸಿದ್ದಾಪುರ ತಾಲೂಕಿನ ೧೦೦ ಹಳ್ಳಿ ಗುರುತು । ಪ್ರಮುಖರ ಸಭೆಯಲ್ಲಿ ರವೀಂದ್ರ ನಾಯ್ಕಕನ್ನಡಪ್ರಭ ವಾರ್ತೆ ಸಿದ್ದಾಪುರ
ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯ ೭ನೇ ಅಧಿಸೂಚನೆಯಲ್ಲಿ ಪ್ರಕಟಗೊಂಡಿರುವ ಅತೀ ಸೂಕ್ಷ್ಮ ಪ್ರದೇಶದ ಯಾದಿಯಲ್ಲಿ ಸಿದ್ದಾಪುರ ತಾಲೂಕಿನಾದ್ಯಂತ ೧೦೦ ಹಳ್ಳಿಗಳನ್ನ ಗುರುತಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗುವ ಪರಿಣಾಮ ಹಾಗೂ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಬುಧವಾರ ಪಟ್ಟಣದಲ್ಲಿ ಕರೆದ ಪ್ರಮುಖರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕಾನಸೂರು, ನಿಲ್ಕುಂದ್, ತಂಡಾಗುಂಡಿ, ಹೆಗ್ಗರಣೆ, ಬಿದ್ರಕಾನ, ಕೊಲಸಿರ್ಸಿ, ಕಾನಗೋಡ, ತ್ಯಾಗಲಿ, ಇಟಗಿ, ವಾಜಗೋಡ, ದೊಡ್ಮನೆ, ಹಲಗೇರಿ, ಹಾರ್ಸಿಕಟ್ಟ, ಕ್ಯಾದಗಿ, ಕೊರ್ಲಕೈ, ಹೇರೂರು, ಬಿಳಗಿ, ಹಸರಗೋಡ, ಸೋವಿನಕೊಪ್ಪ, ಕವಂಚೂರು, ಶಿರಳಗಿ, ಮನಮನೆ, ಅನಲೇಬೈಲ್ ಮುಂತಾದ ೨೩ ಗ್ರಾಪಂ ವ್ಯಾಪ್ತಿಯ ೧೦೦ ಹಳ್ಳಿಗಳನ್ನ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ೫೬೭ ಹಳ್ಳಿಗಳನ್ನ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಅದರಲ್ಲಿ ಸಿದ್ದಾಪುರ ತಾಲೂಕಿನಲ್ಲಿ ೧೦೦ ಹಳ್ಳಿಗಳ ಹೆಸರು ಪಟ್ಟಿಯಲ್ಲಿ ಸೇರಿದೆ. ಸಿದ್ದಾಪುರ ತಾಲೂಕು ಜಿಲ್ಲೆಯಲ್ಲಿ ಅತೀ ಹೆಚ್ಚು ಸೂಕ್ಷ್ಮ ಪ್ರದೇಶದ ಯಾದಿಯಲ್ಲಿ ೨ನೇ ಸ್ಥಾನದಲ್ಲಿ ಇದೆ ಎಂದರು.
ಕಸ್ತೂರಿ ರಂಗನ್ ವರದಿ ಜನವಿರೋಧಿ ಯೋಜನೆಯಾಗಿರುವುರಿಂದ ಸಾಂಘಿಕ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಂಚಾಲಕ ಮಹಭಲೇಶ್ವರ ನಾಯ್ಕ ಬೇಡ್ಕಣಿ ಹೇಳಿದರು. ಸಭೆಯಲ್ಲಿ ಪ್ರಗತಿ ಪರ ರೈತ ವಿಜಯ ವಿಷ್ಣು ಭಟ್ ಬಿಳಗಿ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದರು. ಸಂಕೇತ ನಾಯ್ಕ ಹಲಗೇರಿ, ಬಿ.ಡಿ. ನಾಯ್ಕ ಕುರಗೇತೋಟ, ಶ್ರೀಧರ ಹೆಗಡೆ ಕೆರೆಮನೆ, ಜಗದೀಶ ನಾಯ್ಕ, ಅಬ್ದುಲ್ ಸುಭಾನ್ ಅರೆಂದೂರು, ದಿವಾಕರ್ ನಾಯ್ಕ ಕ್ಯಾದಗಿ, ವಾಸು ನಾಯ್ಕ, ಕಾರ್ಲೆಸ್ ಫರ್ನಾಂಢಿಸ್ ಮಾವಿನಗುಂಡಿ, ಶಿವಾನಂದ ನಾಯ್ಕ ಹೊಸೂರು, ಸುಧಾಕರ್ ಮಡಿವಾಳ ಬಿಳಗಿ, ಎಂ.ಎಸ್. ನಾಯ್ಕ ನರಮುಂಡಗಿ, ರವಿ ಅರಳಿಮಕ್ಕಿ, ಸರಸ್ವತಿ ಅಶೋಕ ಮಡಗಾಂವ್ಕರ್, ಮೋಹನ್ ಗೌಡ ತಂಡಾಗುಂಡಿ, ಶ್ರೀಧರ ನಾಯ್ಕ, ಸುರೇಶ ಕ್ಯಾದಗಿ ಮುಂತಾದವರಿದ್ದರು.