ಮಂಗಳೂರು: ಕರಾವಳಿಯ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ, ಓದುಗರ ಹಾಗೂ ಲೇಖಕರ ನೆಚ್ಚಿನ ‘ಕಥಾಬಿಂದು ಪ್ರಕಾಶನ’ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. 2023ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಖರೀದಿಗೆ ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಲ್ಲಿ ಪ್ರತಿ ವರ್ಷ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ನಗರ ಕೇಂದ್ರ ಗ್ರಂಥಾಲಯವು ಬಿಡುಗಡೆ ಮಾಡಿರುವ ಅಧಿಕೃತ ಆಯ್ಕೆ ಪಟ್ಟಿಯಲ್ಲಿ ಕಥಾಬಿಂದು ಪ್ರಕಾಶನದ ಬರೋಬ್ಬರಿ 10 ಪ್ರತಿಷ್ಠಿತ ಕೃತಿಗಳು ಆಯ್ಕೆಯಾಗಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ.

ಗ್ರಂಥಾಲಯದ ಖರೀದಿಗೆ ಆಯ್ಕೆಯಾದ ಕೃತಿಗಳು ಇವು; ಲಕ್ಷ್ಮೀ ವಿ. ಭಟ್ ಅವರ ಕಲರವ ಹಾಗೂ ಭಾವಸ್ಪರ್ಶ ಕೃತಿ,

ಪಿ.ವಿ. ಪ್ರದೀಪ್ ಕುಮಾರ್ ಅವರ ಮಾಯಾಜಾಲ ಸಾಹಿತ್ಯ ಮಾಲೆ ಹಾಗೂ ಕಣಜ ಸಂಪುಟ-2, ಪರ್ವೀನ್ ಭಾನುಶೇಖ್‌ರ ಬಾಲ ಮಂದಾರ, ಪುಷ್ಪಾ ಪ್ರಸಾದ್ ಉಡುಪಿ ಅವರ ಪುಟಾಣಿ ಸ್ವರ್ಗ, ಮೋಹನ್ ರಾಜ್ ಅವರ ನನ್ನ ಪ್ರೀತಿಯ ಕೊಲೆಗಾರ ಮತ್ತು ಇತರೆ ಆಯ್ದ ಜನಪ್ರಿಯ ಕೃತಿಗಳು ಆಯ್ಕೆಯಾಗಿವೆ.

ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಕಥಾಬಿಂದು ಪ್ರಕಾಶನ ಕರಾವಳಿ ಭಾಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ಪುಸ್ತಕಗಳನ್ನು ಮುದ್ರಿಸಿ ಜನಜನಿತವಾಗಿದೆ. ಹೊಸ ಮತ್ತು ಅನುಭವಿ ಲೇಖಕರಿಗೆ ಆಕರ್ಷಕ ಹೊರಕವಚ ವಿನ್ಯಾಸ, ಸುಂದರ ಅಕ್ಷರಜೋಡಣೆ, ಪರ್ಫೆಕ್ಟ್ ಬೈಂಡಿಂಗ್ ಹಾಗೂ ಸೃಜನಶೀಲ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ರೂಪಿಸಿಕೊಡುವುದರಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ.

ಕಳೆದ ವರ್ಷ ಪ್ರಕಾಶನದ ವತಿಯಿಂದ ಪ್ರಕಟಗೊಂಡ ಪುಸ್ತಕವೊಂದು ಸಾಹಿತ್ಯಿಕ ಮೌಲ್ಯದ ಗುಣಮಟ್ಟದ ಮಾಪಕವಾದ ಪ್ರತಿಷ್ಠಿತ ‘ಸೊಗಸು’ ಬಹುಮಾನವನ್ನು ಪಡೆದಿರುವುದು ಸಂಸ್ಥೆಯ ಹೆಮ್ಮೆಯ ಪ್ರತೀಕವಾಗಿದೆ.


ನಗರ ಕೇಂದ್ರ ಗ್ರಂಥಾಲಯದ ವಿಕೇಂದ್ರೀಕೃತ ಮಾದರಿಯ ಪುಸ್ತಕಗಳ ಖರೀದಿ ಪ್ರಕ್ರಿಯೆಯು ಸದ್ಯದಲ್ಲೇ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಸಾಹಿತ್ಯ ವಲಯದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಹೊಸ ಪುಸ್ತಕ ಬಿಡುಗಡೆ ಪರ್ವ ಶುರು: ಇದೀಗ ನವೆಂಬರ್ 15ರಿಂದ ಈ ವರ್ಷದ ಹೊಸ ಪುಸ್ತಕಗಳ ಬಿಡುಗಡೆಯ ಮಹಾಪರ್ವ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ತಮ್ಮ ಕೃತಿಗಳನ್ನು ಮುದ್ರಿಸಲು ಹಾಗೂ ಲೋಕಾರ್ಪಣೆಗೊಳಿಸಲು ಆಸಕ್ತವಿರುವ ಉದಯೋನ್ಮುಖ ಬರಹಗಾರರು ಪ್ರಕಾಶಕರಾದ ಪಿ.ವಿ. ಪ್ರದೀಪ್ ಕುಮಾರ್ 9341410153 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.