ದಲಿತ ಹಕ್ಕುಗಳ ಸಮಿತಿ ಕಟ್‌ಬೆಲ್ತೂರು ಘಟಕದ ಸಂಚಾಲಕಿ ಸಹಾನ ಮತ್ತು ದಲಿತ ಚಿಂತಕ ಶುಭಕರ ಅವರ ನಾಯಕತ್ವದಲ್ಲಿ ಹಾಗೂ ಇತರ ದಲಿತ ಸದಸ್ಯರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಖಾ ಅವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿಯನ್ನು ಅರ್ಪಿಸಲಾಯಿತು.

ಕುಂದಾಪುರ: ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ನೀಡಿದ ಕರೆಯ ಮೇರೆಗೆ ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ದಲಿತ ಹಕ್ಕುಗಳ ಸಮಿತಿ ಕಟ್‌ಬೆಲ್ತೂರು ಘಟಕದ ಸಂಚಾಲಕಿ ಸಹಾನ ಮತ್ತು ದಲಿತ ಚಿಂತಕ ಶುಭಕರ ಅವರ ನಾಯಕತ್ವದಲ್ಲಿ ಹಾಗೂ ಇತರ ದಲಿತ ಸದಸ್ಯರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಖಾ ಅವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿಯನ್ನು ಅರ್ಪಿಸಲಾಯಿತು. ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಕೂರ್ ಅವರು ದಲಿತರ ಹಕ್ಕುಗಳ ಬಗ್ಗೆ ವಿವರಿಸಿ, ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ಎಸ್ ಮೂಲಕ ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ರಾಮ ಶೆಟ್ಟಿ ಹಾಗೂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ವಿಮಲಾ, ಅಶೋಕ ಬಳೆಗಾರ. ಶಾರದಾ, ಡಿಎಚ್ಎಸ್ ಜಿಲ್ಲಾ ಕಾರ್ಯದರ್ಶಿ ರವಿ ವಿ.ಎಂ., ಹಿರಿಯ ದಲಿತ ಮುಖಂಡ ಬಾಬು ಬಳ್ಕೂರ್ ಮುಂತಾದವರಿದ್ದರು.