ಕಟೀಲು: ಸ್ವಾತಂತ್ರ್ಯೋತ್ಸವ, ಆನೆಯಿಂದ ಧ್ವಜವಂದನೆ

| Published : Aug 16 2025, 12:02 AM IST

ಕಟೀಲು: ಸ್ವಾತಂತ್ರ್ಯೋತ್ಸವ, ಆನೆಯಿಂದ ಧ್ವಜವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಟೀಲು ರಥಬೀದಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕಟೀಲು ಸಂಸ್ಥೆಯ ಹಳೆ ವಿದ್ಯಾರ್ಥಿ ದೇವಿ ಕುಮಾರ್ ಕೆ.ಬಿ. ಧ್ವಜಾರೋಹಣಗೈದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸೇನೆಗೆ ಸೇರುವುದರಿಂದ ದೇಶ ಸೇವೆ ಮಾಡುವ ಸೌಭಾಗ್ಯ ಸಿಗುವ ಜೊತೆಗೆ ಉತ್ತಮ ಸವಲತ್ತುಗಳಿರುವ ಉದ್ಯೋಗವೂ ಆಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ಹೋರಾಟಗಾರರನ್ನು ಸದಾ ನೆನಪಿಸಿಕೊಂಡು ನಮ್ಮಿಂದಾದ ಕೊಡುಗೆ ನೀಡುವ ಮೂಲಕ ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸಲ್ಲಿಸಬೇಕೆಂದು ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ ಹಾಗೂ ಕಟೀಲು ಸಂಸ್ಥೆಯ ಹಳೆ ವಿದ್ಯಾರ್ಥಿ ದೇವಿ ಕುಮಾರ್ ಕೆ.ಬಿ. ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಟೀಲು ರಥಬೀದಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.

ಶಾಲೆಯ ಎನ್‌ಸಿಸಿ, ಸ್ಕೌಟ್ಸ್, ರೇಂಜರ್ಸ್‌ ಮತ್ತು ವಿವಿಧ ತಂಡಗಳಿಂದ ಪಥಸಂಚಲನ, ಧ್ವಜವಂದನೆ ನಡೆಯಿತು.ಕಟೀಲು ದೇವಳದ ಆನೆ ಮಹಾಲಕ್ಷ್ಮೀ ಧ್ವಜವಂದನೆ ನಡೆಸಿ ಎಲ್ಲರ ಗಮನ ಸೆಳೆಯಿತು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಪ್ರವೀಣ್‌ದಾಸ ಭಂಡಾರಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ., ಕುಸುಮಾವತಿ, ರಾಜಶೇಖರ್, ಗಿರೀಶ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ ಮತ್ತಿತರರಿದ್ದರು. ಪ್ರದೀಪ್ ಹಾವಂಜೆ, ಪುಂಡಲೀಕ ಕೊಠಾರಿ ನಿರೂಪಿಸಿದರು.