ಸಾರಾಂಶ
ಕಟೀಲಿನಲ್ಲಿ ಜರಗಿದ ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ (ಮಹಾಸಭೆ) ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಕೆ.ನೀಲಯ ಕೋಟ್ಯಾನ್ ಮಾತನಾಡಿದರು. ಸಂಸ್ಥೆ 2023-24ನೇ ಸಾಲಿನ ವರ್ಷಾಂತ್ಯಕ್ಕೆ ಒಟ್ಟು ರು.13,04,028 ಲಾಭಾಂಶ ದಾಖಲಿಸಿದ್ದು ಶೇ10ರಷ್ಟನ್ನು ಡಿವಿಡೆಂಡ್ ರೂಪದಲ್ಲಿ ನೀಡಲು ನಿರ್ಧರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಗ್ರಾಹಕ ಸದಸ್ಯರು ಉತ್ತಮವಾಗಿ ಸ್ಪಂದಿಸಿದಾಗ ಸಂಸ್ಥೆ ಗರಿಷ್ಠ ಲಾಭಾಂಶ ಗಳಿಸಲು ಸಾಧ್ಯವಾಗುತ್ತದೆ. ಒಟ್ಟು ಲಾಭಾಂಶದಲ್ಲಿ ಶೇ10ರಷ್ಟನ್ನು ಸದಸ್ಯರಿಗೆ ಡಿವಿಡೆಂಡ್ ರೂಪದಲ್ಲಿ ನೀಡಲು ನಿರ್ಣಯಿಸಲಾಗಿದ್ದು ಸಂಸ್ಥೆಯ ಷೇರುಗಳನ್ನು ಖರೀದಿಸುವವರಿಗೆ ಮುಕ್ತ ಅವಕಾಶವಿದೆ ಎಂದು ಕಟೀಲು ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ನೀಲಯ ಕೋಟ್ಯಾನ್ ಹೇಳಿದ್ದಾರೆ.ಕಟೀಲಿನಲ್ಲಿ ಜರಗಿದ ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ (ಮಹಾಸಭೆ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆ 2023-24ನೇ ಸಾಲಿನ ವರ್ಷಾಂತ್ಯಕ್ಕೆ ಒಟ್ಟು ರು.13,04,028 ಲಾಭಾಂಶ ದಾಖಲಿಸಿದ್ದು ಶೇ10ರಷ್ಟನ್ನು ಡಿವಿಡೆಂಡ್ ರೂಪದಲ್ಲಿ ನೀಡಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ - ಸಾಮಾಜಿಕ ಮುಖಂಡ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಅಂತಾರಾಷ್ಟ್ರೀಯ ಯೋಗ ಪ್ರತಿಭೆ ಮೇಘಶ್ರೀ ಶೆಟ್ಟಿ, ಪ್ರಗತಿಪರ ಕೃಷಿಕ ಜಗನ್ನಾಥ ಶೆಟ್ಟಿ ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷೆ ಬಬಿತಾ ಎಂ., ನಿರ್ದೇಶಕರಾದ ಸೀತಾರಾಮ ಬಂಗೇರ, ಹರಿಶ್ಚಂದ್ರ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಜಯ ಡಿ.ಪೂಜಾರಿ, ಲಕ್ಷ್ಮಣ ಶೆಟ್ಟಿ, ಪ್ರೇಮರಾಜ್ ಶೆಟ್ಟಿ, ಗಣೇಶ ಆಚಾರ್ಯ, ಲಲಿತಾ, ಬಿ.ಲತಾ, ಅನಿತಾ ಶೆಟ್ಟಿ, ರತ್ನ, ಸಂಸ್ಥೆಯ ಕಾನೂನು ಸಲಹೆಗಾರ ಗಿರೀಶ್ ಶೆಟ್ಟಿ ಶಿಬರೂರು ಇದ್ದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಸ್ವಾಗತಿಸಿದರು. ನಿರ್ದೇಶಕಿ ವೈಲೆಟ್ ಡಿ.ಸೋಜ, ಸಿಬ್ಬಂದಿ ದಿವ್ಯ ಡಿ.ಅಮಿನ್, ಲಾವಣ್ಯ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ರುಕ್ಮಯ ವಂದಿಸಿದರು. ನಿರ್ದೇಶಕ ಅಮರಪ್ರಸಾದ್ ಶೆಟ್ಟಿ ನಿರೂಪಿಸಿದರು.