ಸಾರಾಂಶ
ಸೋಮವಾರ ಪ್ರಾತಃಕಾಲ ಅಜಾರಿನ ನಂದಿನಿ ನದಿಯಲ್ಲಿ ಜಳಕದ ಬಳಿಕ ಅಜಾರು ಹಾಗೂ ರಥಬೀದಿಯಲ್ಲಿ ಅತ್ತೂರು, ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯಿತು. ಬಳಿಕ ಚಂದ್ರಮಂಡಲದಿಂದ ಇಳಿದು ಕಟ್ಟೆಪೂಜೆ ಮುಗಿಸಿ, ದೇವರು ಬೆಳ್ಳಿ ಪಲ್ಲಕಿಯಲ್ಲಿ ಒಳ ಬಂದು ದರ್ಶನ ಬಲಿ, ಧ್ವಜಾವರೋಹಣ, ಸೋಮವಾರ ಬೆಳಗ್ಗೆ ಕೊಡಮಣಿತ್ತಾಯ ಕೋಲ ನಡೆಯುವ ಮೂಲಕ ಕಟೀಲು ಜಾತ್ರೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವವು ರಥೋತ್ಸವ, ತೂಟೆದಾರದೊಂದಿಗೆ ಸಂಪನ್ನಗೊಂಡಿತು.ಭಾನುವಾರ ಸಂಜೆ ಯಾತ್ರಾ ಬಲಿ ಹೊರಟು ವಸಂತ ಪೂಜೆ, ರಾತ್ರಿ ಓಕುಳಿ, ಭಕ್ತರಿಗೆ ಹಾಗೂ ತೂಟೆದಾರ ಯಜಮಾನನಿಗೆ ಓಕುಳಿ ಪ್ರಸಾದ, ಹೊರಗೆ ಪಾನಕ ಮಂಟಪದಲ್ಲಿ ಕಟ್ಟೆಪೂಜೆ, ರಾತ್ರಿ ಚಿನ್ನದ ಪಲ್ಲಕಿಯಲ್ಲಿ ಎಕ್ಕಾರಿಗೆ ಸವಾರಿ, ಎಕ್ಕಾರಿನಿಂದ ಕಟೀಲಿನ ಸೇತುವೆ ವರೆಗೆ ಅಲ್ಲಲ್ಲಿ ಕಟ್ಟೆಪೂಜೆ, ಮಧ್ಯರಾತ್ರಿ ಸೇತುವೆಯಿಂದ ರಥಬೀದಿ ವರೆಗೆ ಭವ್ಯ ಮೆರವಣಿಗೆ, ಮೆರವಣಿಗೆಗೆ ಕೊಡಮಣಿತ್ತಾಯ ದೈವ ಸೇರಿದ ಬಳಿಕ ಶಿಬರೂರು ಕೊಡಮಣಿತ್ತಾಯ ದೈವದ ಭೇಟಿಯಾಗಿ ಮಧ್ಯರಾತ್ರಿ ರಥ ಬಲಿ, ರಥಾರೋಹಣ, ರಥ ಹೂವಿನ ಪೂಜೆ, ರಥೋತ್ಸವ ನಡೆಯಿತು.