ಕಾಪು: ಅತ್ಯಾಚಾರದಿಂದ ಹುಟ್ಟಿದ ಮಗು ಮಾರಾಟ, ಮೂವರ ಬಂಧನ

| Published : Sep 04 2025, 01:01 AM IST

ಕಾಪು: ಅತ್ಯಾಚಾರದಿಂದ ಹುಟ್ಟಿದ ಮಗು ಮಾರಾಟ, ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಾಚಾರದಿಂದ ಗರ್ಭಿಣಿಯಾದ ಯುವತಿಯ ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣ ಇಲ್ಲಿನ ಹೇರೂರು ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದ್ದು, ಆರೋಪಿಗಳಾದ ಮಧ್ಯವರ್ತಿ ಮಹಿಳೆ, ವೈದ್ಯ ಹಾಗೂ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಪುಅತ್ಯಾಚಾರದಿಂದ ಗರ್ಭಿಣಿಯಾದ ಯುವತಿಯ ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣ ಇಲ್ಲಿನ ಹೇರೂರು ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದ್ದು, ಆರೋಪಿಗಳಾದ ಮಧ್ಯವರ್ತಿ ಮಹಿಳೆ, ವೈದ್ಯ ಹಾಗೂ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ಮಂಗಳೂರಿನ ವಿಜಯಲಕ್ಷ್ಮೀ ಯಾನೆ ವಿಜಯ, ವೈದ್ಯ ಸೋಮೇಶ್ ಸೊಲೋಮನ್ ಹಾಗೂ ಅತ್ಯಾಚಾರ ಆರೋಪಿ ನವನೀತ್ ನಾರಾಯಣ್ ಎಂದು ಗುರುತಿಸಲಾಗಿದೆ.ಹೇರೂರಿನ ಪ್ರಭಾವತಿ ಮತ್ತು ಆಕೆಯ ಗಂಡ ರಮೇಶ್ ಮೂಲ್ಯ, 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ ಮಾಡಲು ಅಂಗನವಾಡಿಗೆ ಕರೆದುಕೊಂಡು ಬಂದಿದ್ದರು. ಆಗ ಅಂಗನವಾಡಿ ಕಾರ್ಯಕರ್ತೆಗೆ ಈ ದಂಪತಿಗೆ ಮಗು ಇಲ್ಲದಿರುವ ಬಗ್ಗೆ ತಿಳಿದಿದ್ದು, ವಿಚಾರಿಸಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಆಸ್ಪತ್ರೆಯ ಮೂಲಕ ಹಣ ನೀಡಿ ಮಗುವನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.

ಆದರೆ ಈ ರೀತಿ ಮಗು ಪಡೆಯುವುದು ಕಾನೂನುಬಾಹಿರವಾದ್ದರಿಂದ ಆಕೆ ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಈ ಮಗು ಅತ್ಯಾಚಾರಕ್ಕೊಳಗಾದ ಯುವತಿಯದ್ದಾಗಿರುವುದು ತಿಳಿದುಬಂತು.

ಪ್ರಭಾವತಿ ಅವರ ಸಂಬಂಧಿಯೊಬ್ಬರು ತಿಳಿಸಿದಂತೆ ಮಂಗಳೂರಿನ ವಿಜಯಲಕ್ಷ್ಮೀ ಎಂಬವರನ್ನು ಸಂಪರ್ಕಿಸಿ ತಮಗೆ ಮಕ್ಕಳಿಲ್ಲ, ಆದ್ದರಿಂದ ಮಗು ಬೇಕು ಎಂದು ಹೇಳಿದ್ದರು. ವಿಜಯಲಕ್ಷ್ಮೀ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದು, ಅಲ್ಲಿ ಕೆಲಕ್ಕಿದ್ದ ಮಹಿಳೆಯ ಮಗಳು ಗರ್ಭಿಣಿಯಾಗಿದ್ದು, ಆಕೆಯ ಮಗವನ್ನು ನೀಡುವುದಾಗಿ, 4.50 ಲಕ್ಷ ರು.ಗೆ ವ್ಯವಹಾರ ಕುದುರಿಸಿದ್ದಳು.

ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿದ್ದು, ಅಲ್ಲಿನ ವೈದ್ಯ ಡಾ.ಸೋಮೇಶ್ ಸೊಲೋಮನ್ ಅವರ ಮೂಲಕ ನವಜಾತ ಮಗವನ್ನು 4.50 ಲಕ್ಷ ರು. ಪಡೆದು ಪ್ರಭಾವತಿ - ರಮೇಶ್ ದಂಪತಿಗೆ ಮಾರಾಟ ಮಾಡಿದ್ದರು.

ಇದೀಗ ಪೊಲೀಸರು ಈ ಅಕ್ರಮದ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅವರು ಈ ಹಿಂದೆಯೂ ಇದೇ ರೀತಿ ಮಕ್ಕಳನ್ನು ಮಾರಾಟ ಮಾಡಿದ್ದ ಬಗ್ಗೆಯೂ ಪೊಲೀಸರಿಗೆ ತನಿಖೆಯಿಂದ ಪತ್ತೆಯಾಗಿದೆ.

ಮಗುವನ್ನು ಹೆತ್ತ ಯುವತಿಯ ಹೇಳಿಕೆಯಂತೆ ಅಚ್ಯಾಚಾರದ ಪ್ರತ್ಯೇಕ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಕಾರ್ಕಳ ಎಎಸ್ಪಿ ಹರ್ಷ ಪ್ರಿಯಂವದ ತನಿಖೆ ನಡೆಸಿದ್ದು, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.