ವಿವಿಧ ಸಂಘಟನೆಗಳ ಆಶ್ರಯದಲ್ಲಿ ಇತ್ತೀಚೆಗೆ ಶಿರ್ವದ ಡಾನ್ ಬಾಸ್ಕೋ ಇಂಗ್ಲಿಷ್ ಶಾಲೆಯಲ್ಲಿ ಮೆಗಾ ಕಾರ್ಡಿಯಾಲಜಿ ಶಿಬಿರ ಆಯೋಜಿಸಲಾಗಿತ್ತು.

ಕಾಪು: ಇಲ್ಲಿನ ಶಿರ್ವದ ಸಾವುದ್ ಮಾತೆಯ ದೇವಾಲಯ, ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗ, ಕಥೊಲಿಕ್ ಸಭಾ, ಸ್ತ್ರೀ ಸಂಘಟನೆ, ಸೀನಿಯರ್ ಸಿಟಿಜನ್ ಕ್ಲಬ್, ಐಸಿವೈಎಂ, ವಲಯ ಹೆಲ್ತ್ ಕಮಿಷನ್ ಮತ್ತು ಸೆಂಟರ್ ಫಾರ್ ಎಕನಾಮಿಕ್ ಅಂಡ್ ಸೋಶಿಯಲ್ ನೆಟ್‌ವರ್ಕಿಂಗ್, ಮಾಹೆ ಮಣಿಪಾಲದ ಸಹಯೋಗದೊಂದಿಗೆ ಶಿರ್ವದ ಡಾನ್ ಬಾಸ್ಕೋ ಇಂಗ್ಲಿಷ್ ಶಾಲೆಯಲ್ಲಿ ಮೆಗಾ ಕಾರ್ಡಿಯಾಲಜಿ ಶಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆಗಾಗಿ ಮಾಹೆ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಮಹಿಳೆಯರಲ್ಲಿ ಆರೋಗ್ಯದ ಜಾಗೃತಿ ಮೂಡಿಸುವ ಮಹತ್ವವನ್ನು, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ನಡೆಸುವ ಅಗತ್ಯವನ್ನು ಒತ್ತಿ ಹೇಳಿದರು.

ಮುಖ್ಯ ಅತಿಥಿಯಾಗಿ, ಡೋರ್ ಸ್ಟೆಪ್ಸ್ (ಸಿಎಡಿ) ನ ಕಾರ್ಡಿಯಾಲಜಿ ಸಂಸ್ಥಾಪಕ ಮತ್ತು ಮಂಗಳೂರಿನ ಕೆಎಂಸಿಯ ಕಾರ್ಡಿಯಾಲಜಿ ವಿಭಾಗದ ಘಟಕ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಮಾತನಾಡಿ, ಹೃದಯ ಆರೋಗ್ಯದ ತಪಾಸಣೆಯ ಮಹತ್ವ ಒತ್ತಿ ಹೇಳಿದರು.

ಬೆಳಪು ಮತ್ತು ಪಡುಬೆಳ್ಳೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ಹಸ್ತಾಂತರಿಸಲಾಯಿತು, ಶಿರ್ವ ವಲಯದ ಐಸಿವೈಎಂ ನಿರ್ದೇಶಕ ಫಾದರ್ ಕಿರಣ್ ನಜರೆತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಕ ಗಿಲ್ಬರ್ಟ್ ಪಿಂಟೊ ಕಾರ್ಯಕ್ರಮ ನಿರ್ವಹಿಸಿದರು. ಶಿರ್ವ ಚರ್ಚ್‌ನ ಪಾಲನ ಮಂಡಳಿಯ ಉಪಾಧ್ಯಕ್ಷೆ ಮೆಲ್ವಿನ್ ಅರಾನ್ಹಾ ಸ್ವಾಗತಿಸಿದರು. ಉಡುಪಿಯ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಸಂಚಾಲಕಿ ಹಿಲ್ಡಾ ಕರ್ನೆಲಿಯೊ ವಂದಿಸಿದರು. ಶಿರ್ವದ ಡಾನ್ ಬಾಸ್ಕೋ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾದರ್ ರೋಲ್ವಿನ್ ಅರಾನ್ಹಾ ಕೂಡ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಸಮುದಾಯದ 200 ಕ್ಕೂ ಹೆಚ್ಚು ಸದಸ್ಯರಿಗೆ ಶಿಬಿರದ ಪ್ರಯೋಜನ ನೀಡಿತು.