ದೃಷ್ಟಿದೋಷ ಇದ್ದರೂ 592 ಅಂಕ ಪಡೆದ ಕೌಶಿಕ್

| Published : May 04 2025, 01:34 AM IST

ಸಾರಾಂಶ

ತಾಲೂಕಿನ ಪೆರೇಸಂದ್ರ ಗ್ರಾಮದ ಕೌಶಿಕ್ ರೆಡ್ಡಿ ದೃಷ್ಟಿದೋಷವಿದ್ದರೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 592 ಅಂಕಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಪೆರೇಸಂದ್ರ ಗ್ರಾಮದ ಕೌಶಿಕ್ ರೆಡ್ಡಿ ದೃಷ್ಟಿದೋಷವಿದ್ದರೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 592 ಅಂಕಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಎಸ್ಎಸ್ಎಲ್ ಸಿ ಫಲಿತಾಂಶ ಬಂದ ನಂತರ ಪೆರೇಸಂದ್ರ ಗ್ರಾಮದ ಸಂಸದ ಡಾ. ಕೆ.ಸುಧಾಕರ್ ಮನೆಗೆ ಕೌಶಿಕ್ ರೆಡ್ಡಿ ತನ್ನ ತಂದೆಯೊಂದಿಗೆ ಆಗಮಿಸಿ ಸಂಸದ ಡಾ. ಕೆ.ಸುಧಾಕರ್‌ಗೆ ಸಿಹಿ ನೀಡಿದರು.

ಸಂಸದ ಡಾ. ಕೆ.ಸುಧಾಕರ್ ಮಾತನಾಡಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಕೌಶಿಕ್ ರೆಡ್ಡಿ ಸಾಧನೆಯೇ ಸಾಕ್ಷಿ. ಕೌಶಿಕ್ ಗೆ ಬಾಲ್ಯದಿಂದಲೇ ದೃಷ್ಟಿದೋಷವಿದ್ದರೂ ಅದನ್ನು ಲೆಕ್ಕಿಸದೆ ಕಷ್ಟಪಟ್ಟು ಓದಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 592 ಅಂಕ ಪಡೆದು ಸಾಧನೆ ಮಾಡಿದ್ದಾನೆ.

ಸ್ವಗ್ರಾಮ ಪೆರೇಸಂದ್ರದಲ್ಲಿ ಕೌಶಿಕ್ ಅವನ ತಂದೆಯೊಂದಿಗೆ ಬಂದು ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಾಗ ಒಂದು ಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಂದರೂ ಮರುಕ್ಷಣ ಹೆಮ್ಮೆಯಾಯಿತು. ಮನಸ್ಸಿನ ಸಂಕಲ್ಪದ ಮುಂದೆ ದೇಹದ ಯಾವ ನ್ಯೂನತೆಯೂ ದೊಡ್ಡದಲ್ಲ ಎನ್ನುವುದಕ್ಕೆ ಕೌಶಿಕ್ ಮತ್ತು ಅವನ ಪೋಷಕರ ಛಲವೇ ಎಲ್ಲರಿಗೂ ಮಾದರಿ. ಈ ಯುವಕ ದೃಷ್ಟಿ ದೋಷವಿದ್ದರೂ ಸಾಧನೆಗೆ ಮಾತ್ರ ತಾನೇನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ ಎಂದು ಶ್ಲಾಘಿಸಿದರು.

ಅಭಿನಂದನೆಗಳು ಕೌಶಿಕ್ ನಿನ್ನ ಭವಿಷ್ಯ ಉಜ್ವಲವಾಗಲಿ ನಿನ್ನ ಹೆತ್ತವರಿಗೆ ಹುಟ್ಟೂರಿಗೆ ಇನ್ನಷ್ಟು ಒಳ್ಳೆಯ ಹೆಸರು ತರಲು ದೇವರು ನಿನಗೆ ಶಕ್ತಿ ಕೊಡಲಿ. ಆಲ್ ದ ಬೆಸ್ಟ್ ಮೈ ಬಾಯ್. ಯೂ ಹ್ಯಾವ್ ಮೇಡ್ ಅಸ್ ಪ್ರೌಡ್ ಎಂದು ತಿಳಿಸಿದರು.