ಸಾರಾಂಶ
ಕವತ್ತಾರು ಆಲಡೆ ಸಿರಿ ಅಬ್ಬಗ ದಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾ ನಾಗ ಪ್ರತಿಷ್ಠೆ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಭಕ್ತರು ಸಮರ್ಪಣಾ ಭಾವನೆಯಿಂದ ಕೈ ಜೋಡಿಸಿದಾಗ ಯಾವುದೇ ಧಾರ್ಮಿಕ ಕಾರ್ಯ ಯಶಸ್ವೀ ಯಾಗಲು ಸಾಧ್ಯ. ಕವತ್ತಾರು ದೇವಸ್ಥಾನಕ್ಕೆ ಲಕ್ಷಾಂತರ ಜನ ಭಕ್ತರು ಇದ್ದು ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆಯಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದ್ದಾರೆ.ಕವತ್ತಾರು ಆಲಡೆ ಸಿರಿ ಅಬ್ಬಗ ದಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ನಡೆದ ನಾಗ ಪ್ರತಿಷ್ಠೆ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭ ದೇವರಿಗೆ ಮುಷ್ಠಿ ಕಾಣಿಕೆ, ಮತ್ತು ನಾಗಪ್ರತಿಷ್ಠೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ದೇವಳದ ಪ್ರಧಾನ ಅರ್ಚಕ ದೇಂದಡ್ಕ ವಿಷ್ಣುರಾಜ್ ಭಟ್, ದೇವೇಶ್ ಭಟ್, ವಿಶ್ವೇಶ ಭಟ್ ಸುರಗಿರಿ, ದೇವಳದ ಆಡಳಿತ ಮೋಕ್ತೇಸರ ನೀನಾ ನಿತ್ಯಾನಂದ ಅಜಿಲ, ನಿತ್ಯಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ, ಅಶೋಕ್ ಶೆಟ್ಟಿ ಕವತ್ತಾರು ಸುದೀಪ್ ಅಜಿಲ, ಬಳ್ಕುಂಜೆ ಬಂಡಸಾಲೆ ಯೋಗೀಶ್ವರ ಕೆ ಶೆಟ್ಟಿ, ಶರತ್ ಅಜಿಲ, ದೆಪ್ಪುಣಿಗುತ್ತು ಗುತ್ತಿನಾರ್ ಸುಧಾಕರ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಕೃಷ್ಣ ಶೆಟ್ಟಿ ಕಾಡಬರಿ, ಪ್ರಸಾದ್ ಅಜಿಲ ಮತ್ತಿತರರು ಉಪಸ್ಥಿತರಿದ್ದರು.