ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಹೊರ ವಲಯದ ಕಾವೇರಿ ಕನ್ಯಾ ಗುರುಕುಲದಲ್ಲಿ ಉಚಿತವಾಗಿ ನಡೆಯುತ್ತಿದ್ದ ವಿದ್ಯಾ ಸಂಸ್ಥೆಯನ್ನು ಉತ್ತರ ಕರ್ನಾಟಕದ ಧಾರವಾಡಕ್ಕೆ ಸ್ಥಳಾತರ ಮಾಡಲಾಗುತ್ತಿದೆ ಎಂದು ಗುರುಕುಲದ ಸಂಸ್ಥಾಪಕ ಡಾ.ಸುಬ್ರಹ್ಮಣ್ಯ ಹೇಳಿದರು.ಗುರುಕುಲ ಆವರಣದಲ್ಲಿ ಸಂಸ್ಥೆ ಸ್ಥಾಪನೆಗೆ ಸಹಕರಿಸಿದ್ದವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳ ಹಿಂದೆ ಗುರುಕುಲ ನಿರ್ಮಾಣಕ್ಕೆ ಮುಂದಾದಾಗ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆ ವೇಳೆ ನನ್ನ ಜೊತೆಯಲ್ಲಿ ಅಕ್ಕ ಪಕ್ಕ ಗ್ರಾಮಗಳ ಮುಖಂಡರು, ಸುತ್ತ ಮುತ್ತಲಿನ ಜಮೀನಿನ ರೈತರು ಹಾಗೂ ಹಿತೈಷಿಗಳು ಸಹಕಾರ ನೀಡಿ ಸಂಸ್ಥೆಯನ್ನು ಬೆಳೆಸಿದರು ಎಂದು ಸ್ಮರಿಸಿಕೊಂಡರು.
ಗುರುಕುಲದಲ್ಲಿ ಈವರೆವಿಗೂ 10ನೇ ತರಗತಿ ನಂತರ ಪದವಿವರೆವಿಗೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಜೀವನ ಮೌಲ್ಯಗಳ ಕಲಿಕೆಯ ಪಾಠ ಹೇಳಿಕೊಡಲಾಗುತ್ತಿದೆ. ಅವರ ಜೊತೆಗೆ ಸಂಸ್ಕೃತ, ವೇದೋಪನಿಷತ್, ಇಂಗ್ಲಿಷ್, ಯೋಗ, ಭರತನಾಟ್ಯ, ಕಂಪ್ಯೂಟರ್ ಶಿಕ್ಷಣಗಳನ್ನು ಕಲಿಸಲಾಗುತ್ತಿತ್ತು ಎಂದರು.ನಮ್ಮ ಸಂಸ್ಥೆಯಲ್ಲಿ ಕಲಿತ ಹಲವು ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳ ತೊಡಗಿಸಿಕೊಂಡು ತಮ್ಮ ಉತ್ತಮವಾದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ ಮಹಿಳೆಯರು ಸೇರಿದಂತೆ ಪುರುಷರಿಗೂ ತರಬೇತಿ ಶಿಬಿರ ಆಯೋಜಿಸುವುದಾಗಿ ತಿಳಿಸಿದರು.
ಈಗ ಕನ್ಯಾ ಗುರುಕುಲವನ್ನು ಉತ್ತರ ಕರ್ನಾಟಕದ ಧಾರವಾಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. 8ನೇ ತರಗತಿಯಿಂದ ಪದವಿವರೆವಿಗೂ ಶಿಕ್ಷಣ ಸೇವೆ ಒದಗಿಸಲು ಕಾವೇರಿ ಕನ್ಯಾ ಗುರುಕುಲು ಸಿದ್ಧತೆ ಕೈಗೊಂಡಿದೆ. ಗುರುಕುಲದ ಹಿರಿಯ ವಿದ್ಯಾರ್ಥಿನಿಯರೇ ಹೊಸ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗುರು- ಹಿರಿಯರು, ಜಮೀನಿನ ರೈತರು, ಗುರುಕುಲ ಸ್ಥಾಪನೆಗೆ ಸಹಕರಿಸಿದ್ದವರಿಗೆ ಸನ್ಮಾಸಿನಿ ಅಭಿನಂಸಿದರು.
ಕೊಪ್ಪ ಕೃಷಿ ಪತ್ತಿನ ಸಂಘಕ್ಕೆ ಟಿ.ಪುಟ್ಟಸ್ವಾಮಿ ಅಧ್ಯಕ್ಷರಾಗಿ ಆಯ್ಕೆಮದ್ದೂರು:
ತಾಲೂಕಿನ ಕೊಪ್ಪ ಗ್ರಾಮದ ಪ್ರಾಥಮಿಕ ಗ್ರಾಮೀಣ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆಬಲವಾಡಿ ಟಿ.ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಸಂಘದ ಹಾಲಿ ಅಧ್ಯಕ್ಷ ಲಿಂಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಟಿ.ಪುಟ್ಟಸ್ವಾಮಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕಿ ಆಶಾ ಅಂತಿಮವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಲಕ್ಷ್ಮಮ್ಮ ಈರೇಗೌಡ, ನಿರ್ದೇಶಕರಾದ ಡಿ.ಹೊಸಹಳ್ಳಿ ಶಿವಣ್ಣ, ಕೆ.ಜಿ. ಕೃಷ್ಣೇಗೌಡ, ಚಿಕ್ಕೋನಹಳ್ಳಿ ರಾಮಕೃಷ್ಣ, ಜಯರಾಮ, ಕೆ. ರಮೇಶ, ಶಿವಲಿಂಗೇಗೌಡ, ಕಾಂತರಾಜು, ಮಂಜುಳಾ ಚಂದ್ರಶೇಖರ್ ಹಾಗೂ ನಾಮಕರಣ ನಿರ್ದೇಶಕ ರವಿ ಅಭಿನಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))