ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 31 ನೇ ವರ್ಷದ ಕಾವೇರಿ ರಥಯಾತ್ರೆ ನಾಪೋಕ್ಲು ವಿನಿಂದ ಶನಿವಾರ ತಲಕಾವೇರಿಗೆ ತೆರಳಿತು.
ನಾಪೋಕ್ಲು ; ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 31 ನೇ ವರ್ಷದ ಕಾವೇರಿ ರಥಯಾತ್ರೆ ನಾಪೋಕ್ಲು ವಿನಿಂದ ಶನಿವಾರ ತಲಕಾವೇರಿಗೆ ತೆರಳಿತು.
ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಾನುವಾರರ ವಿವಿಧ ಗ್ರಾಮಗಳ ಭಕ್ತರಿಗೆ ತೀರ್ಥ ವಿತರಿಸಲು ರಥ ತಲಕಾವೇರಿಗೆ ಬೆಟ್ಟಗೇರಿ - ಭಾಗಮಂಡಲ ಮೂಲಕ ತಲಕಾವೇರಿಗೆ ತೆರಳಿತು.ಇಂದು ಭಾಗಮಂಡಲದಿಂದ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಅತ್ಯಾಕರ್ಷಕ ಶ್ರೀ ಕಾವೇರಿ ಮಾತೆಯ ಸ್ವರೂಪ ಇರಿಸಲಾದ ವಾಹನದ ರಥಯಾತ್ರೆ ಆರಂಭಗೊಂಡು ಭಕ್ತರಿಗೆ ತೀರ್ಥ ವಿತರಣೆಯನ್ನು ಚೇರಂಗಾಲ, ಅಯ್ಯಂಗೇರಿ ಪುಲಿಕೋಟು ಪೇರೂರು ಬಲ್ಲಮಾವಟಿ, ಚೋನಕೆರೆ, ನಾಪೋಕ್ಲು ಗ್ರಾಮಗಳಲ್ಲಿ ಪೂರೈಸಿ ಸಮೀಪದ ಪಾಲೂರಿನ ಹರಿಶ್ಚಂದ್ರ ದೇವಾಲಯದಲ್ಲಿ ಸಮಾಪ್ತಿಗೊಳ್ಳಲಿದೆ.ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ ಕಳೆದ 30 ವರ್ಷಗಳಿಂದ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಗುತ್ತಿದೆ. ತಲಕಾವೇರಿಗೆ ತೆರಳಲಾರದ ಭಕ್ತರಿಗೆ ತೀರ್ಥ ವಿತರಿಸುತ್ತಿರುವುದುದು ಸಂತಸ ತಂದಿದೆ . ಇದಕ್ಕೆ ಎಲ್ಲರ ಸಹಕಾರ ಲಭಿಸಿದೆ ಭಾಗಮಂಡಲದಿಂದ ಅಯ್ಯಂಗೇರಿ, ಬಲ್ಲಮಾವಟಿ ಮಾರ್ಗವಾಗಿ ನಾಪೋಕ್ಲುವರೆಗೆ ತೀರ್ಥ ವಿತರಿಸಲಾಗುತ್ತದೆ ಎಂದರು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ , ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿತ್ರ ದೇವಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.