ಕವಿತಾಕೃಷ್ಣರ ಅಗಲಿಕೆ ತುಂಬಲಾರದ ನಷ್ಟ: ಬಾಲಾಜಿ

| Published : Feb 26 2024, 01:35 AM IST

ಕವಿತಾಕೃಷ್ಣರ ಅಗಲಿಕೆ ತುಂಬಲಾರದ ನಷ್ಟ: ಬಾಲಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯಬ್ರಹ್ಮ ಕವಿತಾಕೃಷ್ಣರ ಅಗಲಿಕೆ ತುಮಕೂರು ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಸಾಹಿತ್ಯಬ್ರಹ್ಮ ಕವಿತಾಕೃಷ್ಣರ ಅಗಲಿಕೆ ತುಮಕೂರು ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ತುಮಕೂರು ಜಿಲ್ಲಾ ಕನ್ನಡ ಜಾನಪದ ಪರಿಷತ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಜರುಗಿದ ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣರವರ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ನೆರವೇರಿಸಿ ಮಾತನಾಡಿದರು.

ಕವಿತಾ ಕೃಷ್ಣರವರ ಹೆಸರಿನಲ್ಲಿ ಪ್ರತಿವರ್ಷ ರಾಜ್ಯ ಜಾನಪದ ಪ್ರಶಸ್ತಿಯನ್ನು ನೀಡಲಾಗುವುದೆಂದು ಘೋಷಿಸಿದರು, ಜಾತಿಗೆ ಸೀಮಿತವಾದ ರಾಜಕೀಯ ಪ್ರೇರಿತ ರಾಜ್ಯೋತ್ಸವ ಪ್ರಶಸ್ತಿಗಳು ರಾಜ್ಯಪ್ರಶಸ್ತಿಗಳು ದೃಷ್ಟೀಕೋನವನ್ನು ಬದಲಿಸಬೇಕಿದೆಯೆಂದು ಖಾರವಾಗಿ ನುಡಿದರು.

ಬಾಹ ರಮಾಕುಮಾರಿ ಮಾತನಾಡಿ, ಕವಿತಾಕೃಷ್ಣರಂತಹ ಗುರುಗಳನ್ನು ಕಳೆದುಕೊಂಡಿರುವುದು ಸಾಹಿತ್ಯಲೋಕದ ದುರಾದೃಷ್ಟವೆಂದರು. ಅವರ ಬಗ್ಗೆ ಎರಡು ಮತುಗಳಲ್ಲಿ ಹೇಳಿ ಮುಗಿಸಲಾಗದು, ಸೂರ್ಯನಿಗೆ ಕನ್ನಡಿ ಹಿಡಿದಂತೆ ಅಷ್ಟೇ ಈ ಮಾತುಗಳು, ತುಮಕೂರಿಗೆ ಅಥವಾ ರಾಜ್ಯಕ್ಕೆ ಸೀಮಿತವಲ್ಲದೇ ಹೊರ ರಾಜ್ಯಗಳಲ್ಲೂ ವರ್ಚಸ್ಸು ಕಂಡವರು ಕವಿತಾಕೃಷ್ಣ ಗುರುಗಳು ಎಂದರು.

ಹಲವಾರು ಸಂಘಟನೆಗಳಿಗೆ ಸಲಹೆಗಾರರಾಗಿ ಅವುಗಳ ಸ್ಥಾಪನೆಗೆ ಕೊಡುಗೆ ಕೊಟ್ಟವರು, ತುಮಕೂರು ಮೂಲಕ ಹಾದು ಹೋಗುವ ರಾಜಕಾರಣಿ ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ಸಿದ್ಧಗಂಗಾಮಠ ಹಾಗೂ ಸಾಹಿತ್ಯ,ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಗಳಿಗೆ ಸಾಹಿತ್ಯ ಮಂದಿರ ಹೀಗೆ ಕ್ಯಾತ್ಸಂದ್ರ ಎರಡು ರೀತಿಯ ಹೆಬ್ಬಾಗಿಲು ಆಗಿತ್ತು ಎಂದರು.

ಪತ್ರಕರ್ತರು ಹಾಗೂ ವಕೀಲರಾದ ಡಾ. ವಿಜಯಕೊಪ್ಪ ಮಾತನಾಡಿ, ಕಣ್ಮರೆಯಾಗಿರುವುದು ಗುರುಗಳ ದೇಹ ಮಾತ್ರ, ಅವರ ವ್ಯಕ್ತಿತ್ವ ಮತ್ತು ಕೊಡುಗೆ ನಮ್ಮೊಂದಿಗೆ ಇದೆ ಎಂದರು, ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಚಿವರು ಅವರ ಹೆಸರು ಅಜರಾಮರವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ ಗುರುಗಳು ಕನ್ನಡಮ್ಮನ ಸೇವೆಗೆ ಕಸದಪೊರಕೆ ರೀತಿಯಲ್ಲಿರಬೇಕೆನ್ನುತ್ತಿದ್ದರು. ಆ ಒಂದು ಪೊರಕೆ ನಾನು, ಶಿಕ್ಷಣ ಭೀಷ್ಮ ಗಂಗಾಧರಯ್ಯರವರ ಕುರಿತ ಅಕ್ಷರಗಂಗೆಯಲ್ಲಿ ಗಂಗಾಧರಯ್ಯವರ ಪಾತ್ರ ನಿರ್ವಹಿಸಲು ನನಗೆ ಮತ್ತು ನನ್ನ ತಂಡಕ್ಕೆ ನೆರವಾಗಿದ್ದು ಗುರುಗಳು ಬರೆದಿದ್ದ ಸಾಧನೆಶಿಲ್ಪಿ ಕೃತಿ. ಇಂತಹ ಮಹೊನ್ನತ ವ್ಯಕ್ತಿತ್ವವನ್ನು ನಾವು ಸ್ಮರಿಸದಿದ್ದರೆ ಆತ್ಮಸಾಕ್ಷಿಯಿಲ್ಲದ ಅಂತರಪಿಶಾಚಿಗಳಾಗಿಬಿಡುತ್ತೇವೆ. ಮಹಾನ್ ಚೇತನದ ಹೆಸರಿನಲ್ಲಿ ಆಗಬೇಕಿರುವ ಎಲ್ಲಾ ಕಾರ್ಯಗಳನ್ನು ಶಿಷ್ಯಂದಿರೆಲ್ಲರೂ ಸೇರಿ ಮಾಡಿಯೇ ತೀರುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಪಿ, ಗುರು ಶಿಷ್ಯ ಪರಂಪರೆಯ ಹಿರಿಯರಲ್ಲಿ ಹಿರಿತನವನ್ನು ಮೆರೆದವರು ಕವಿತಾಕೃಷ್ಣ, ತಮ್ಮ ಹವ್ಯಾಸಗಳು ಹೇಗಿರಬೇಕು ಎಂಬುದಕ್ಕೆ ಈಗಿನ ಯುವ ಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಕೈಗನ್ನಡಿಯಾಗಿದೆಯೆಂದರು.

ಲೇಖಕಿ ಕಮಲ ಬಡ್ಡಿಹಳ್ಳಿ ಮಾತನಾಡಿದರು. ಕವಿತಾಕೃಷ್ಣರ ನಾಲಿಗೆಯಲ್ಲಿ ಸರಸ್ವತಿ ನಲಿದಾಡುತಿದ್ದಳು ಎಂದು ಹೇಳಿ ಡಾ.ರಂಗಸ್ವಾಮಿ ವಂದಿಸಿದರೆ, ಅನುಷಾ ಬುದ್ಧಗೀತೆಯನ್ನು ಹಾಡಿದರು, ರೇಡಿಯೋ ಸಿದ್ಧಾರ್ಥದ ಡಾ.ಸುಲೋಚನ ನಿರೂಪಣೆ ಮಾಡಿದರು. ಕೆ.ಸಿ. ಕಾಂತಪ್ಪ, ಸೈಯದ್ ಬಾಬು, ಅದಲಗೆರೆ ಮೋಹನ್, ಶಿವರಂಗಯ್ಯ, ಆಡಿಟರ್‌ ಗುರುಲಿಂಗಪ್ಪ, ಹನುಮಂತಪ್ಪ, ಮೈದಾಳ ಲೇಪಾಕ್ಷಪ್ಪ ಇದ್ದರು.